ಬೆಂಗಳೂರು ಗ್ರಾಮಾಂತರ

ಕಲೆ, ಜನಪದ ಸಾಹಿತ್ಯದತ್ತ ಗ್ರಾಮೀಣ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಲಿ

Published On :

ಸೂಲಿಬೆಲೆ: ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳು ಕಲೆ, ಸಾಹಿತ್ಯ ಹಾಗೂ ಜನಪದ ಸೋಗಡಿನ ವಿಚಾರಗಳತ್ತ ಹೆಚ್ಚು ಆಸಕ್ತಿವಹಿಸಿ ನಾಡಿನ ಸಂಸ್ಕೃತಿಯನ್ನು ಉಳಿಸಿಬೆಳೆಸಬೇಕು ಎಂದು ವಿವೇಕಾನಂದ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಲ್. ನಾಗರಾಜ್ ತಿಳಿಸಿದ್ದಾರೆ.
ಸೂಲಿಬೆಲೆಯಲ್ಲಿ ವಿವೇಕಾನಂದ ಹಿರಿಯ ಪ್ರಾಥಮಿಕ ಪಾಠಶಾಲೆ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಸಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತವಿಕ ಭಾಷಣ ಮಾಡಿದ ಹಿರಿಯ ಶಿಕ್ಷಕಿ ರತಿದೇವಿ, ಕನ್ನಡ ನಾಡಿನ ಜನಪದ ಸಾಹಿತ್ಯಕ್ಕೆ ಇಡೀ ವಿಶ್ವದಲ್ಲಿ ವಿಶೇಷವಾದ ಸ್ಥಾನಮಾನದ ಇತಿಹಾಸವಿದೆ. ಬೆಳೆಯುತ್ತಿರುವ ತಂತ್ರಜ್ಞಾನ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪಾಶ್ಚಾಮಾತ್ಯಕರಣಗೊಳಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಸಹ ಆಧುನಿಕ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿ ಜನಪದ ಸೋಗಡಿನ ಮಹತ್ವವನ್ನು ಮರೆಯುತ್ತಿದ್ದಾರೆ. ಮುಂದಿನ ಪೀಳಿಗೆಯ ಜನಾಂಗಕ್ಕೆ ಜನಪದ ಸಾಹಿತ್ಯದ ಪರಂಪರೆಯನ್ನು ಉಳಿಸುವಂತೆ ಜವಾಬ್ದಾರಿ ಈಗಿನ ಮಕ್ಕಳಲ್ಲಿದ್ದ ರಸಗ್ರಹಣದತ್ತ ಕಾರ್ಯಕ್ರಮಗಳು ಜನಪದದತ್ತ ಆಸಕ್ತಿ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದರು. ಎಂ.ವಿ. ಕೃಷ್ಣಪ್ಪ ತಂಡದಿಂದ ನಾನಾ ರೀತಿಯ ಜನಪದ ಗೀತೆಗಳು ಕಾರ್ಯಕ್ರಮದ ಗಮನ ಸೆಳೆದವು. ಹಿರಿಯ ಶಿಕ್ಷಕ ಎಸ್.ಮಹಾದೇವಯ್ಯ, ಜಿ.ಎಂ ಮುನಿಯಪ್ಪ,ರಂಗ ಕಲಾವಿದ ಡಿ.ಲಕ್ಷ್ಮಿ ನಾರಾಯಣ್, ಹಿರಿಯ ಶಾಲೆ ಮುಖ್ಯ ಶಿಕ್ಷಕ ಶಂಕರರೆಡ್ಡಿ ಇನ್ನೂ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.