ಗ್ರಾಮೀಣ ಭಾಗದಲ್ಲಿ ಮಾತ್ರ ಕಾಣಸಿಗುವ ಕನ್ನಡದ ಇಚ್ಛಾಶಕ್ತಿ
ದೊಡ್ಡಬಳ್ಳಾಪುರ: ಇಲ್ಲಿನ ಮಾದಗೊಂಡನಹಳ್ಳಿ ರಸ್ತೆಯ ರಾಜೀವಗಾಂಧಿ ಬಡಾವಣೆಯ ತಾಲೂಕು ಕನ್ನಡ ಯುವ ಶಕ್ತಿ ಸಂಘದ 3ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭ ನಡೆಯಿತು. ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಕಾರ್ಯಕ್ರಮ ಉದ್ಘಾಟಸಿದರು. ನಗರಸಭಾ ಸದಸ್ಯ ಕಂಬಿ ನಂಜಪ್ಪ, ಆರ್.ಕೆಂಪರಾಜು, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಹ.ರಾಮಕೃಷ್ಣ, ತಾ.ಪಂ ಮಾಜಿ ಅಧ್ಯಕ್ಷ ಡಿ.ನಾಗರಾಜ್, ಶಿವರಾಜ್ಕುಮಾರ್ ಕನ್ನಡ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಡಿ.ಸಿ.ಚೌಡರಾಜು ಮತ್ತಿತರರು ಭಾಗವಹಿಸಿದ್ದರು.
ಹೊದಿಕೆಗಳ ವಿತರಣೆ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವೃದ್ಧರು ಮತ್ತು ಮಹಿಳೆಯರಿಗೆ ಹೊದಿಕೆಗಳನ್ನು ವಿತರಿಸಲಾಯಿತು. ಅವರು ಮಾತನಾಡಿ ಕನ್ನಡತನವನ್ನು ಗಟ್ಟಿಗೊಳಿಸುವಲ್ಲಿ ಚಳವಳಿಗಳ ಪಾತ್ರ ಹಿರಿದು. ಕೊಳಗೇರಿಗಳು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಇಂದು ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿದೆ. ಮೂಲಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘಟನೆಗಳು ಜನರು ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುಗಳಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ತಿ.ರಂಗರಾಜು, ಡಿ.ವಿ.ಅಶ್ವತ್ಥಪ್ಪ, ಕನ್ನಡಪರ ಹೋರಾಟಗಾರರಾದ ಹ.ರಾಮಕೃಷ್ಣ, ಸಂಜೀವನಾಯಕ್, ಕೇಬಲ್ ರಾಜು, ವಕೀಲ ರವಿ ಮಾವಿನಕುಂಟೆ, ಆರೂಡಿ ಗ್ರಾ.ಪಂ ಸದಸ್ಯ ಡಿ.ಜಿ.ಕೃಷ್ಣಮೂರ್ತಿ, ಸಣ್ಣ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಶಿವಕುಮಾರ್, ತಾ. ಕನ್ನಡ ಯುವಶಕ್ತಿ ಗೌ.ಅಧ್ಯಕ್ಷ ಆರ್.ಸಿ.ರಾಜು, ಅಧ್ಯಕ್ಷ ಆರ್.ಎಂ.ಮಹದೇವ್ ಮತ್ತಿತರರು ಭಾಗವಹಿಸಿದ್ದರು.
ವಿದ್ಯುತ್ ತಂತಿ ತಗುಲಿ ಬಾಲಕ ಸಾವು
ಆನೇಕಲ್ಲು: ವಿದ್ಯುತ್ ತಂತಿ ತಗಲಿ ಬಾಲಕ ಮೃತ ಪಟ್ಟ ಘಟನೆ ಆತ್ತಿಬೆಲೆ ಠಾಣಾ ವ್ಯಾಪ್ತಿಯ ಶಾಖಾಂಬರಿ ನಗರದಲ್ಲಿ ನಡೆದಿದೆ. ಬಳ್ಳೂರು ವಾಸಿ ರವಿಕುಮಾರ್ ಅವರ ಪುತ್ರ ವಿನಯ್ (15) ಮೃತ ಪಟ್ಟವ. ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಓದಿಕೊಳ್ಳಲು ಗುರುಗಳಾದ ಮುನಿರಾಜು ಮನೆಗೆ ಬಂದಿರುವಾಗ ಈ ಅವಘಡ ನಡೆದಿದೆ. ಘಟನೆ ನಡೆದ ಅರ್ಧ ಗಂಟೆಗೂ ಹೆಚ್ಚು ಸಮಯ ಬಾಲಕ ವಿದ್ಯುತ್ ಕಂಬಿಗೆ ತಾಗಿಕೊಂಡೇ ಇದ್ದ. ನಂತರ ಸ್ಥಳಕ್ಕಾಗಿಮಿಸಿದ ಬೆಸ್ಕಾಂ ಅಧಿಕಾರಿಗಳು ಬಾಲಕನ ಶವ ಇಳಿಸಲು ಸಹಕಾರ ನೀಡಿದರು. ಸ್ಥಳೀಯರ ಆಕ್ರೋಶ ಅತ್ತಿಬೆಲೆ ಶಾಕಾಂಬರಿ ನಗರ ಬಡಾವಣೆಯಲ್ಲಿ ಇತ್ತೀಚೆಗೆ ಲಾರಿ ಗುದ್ದಿ ಕೆಲ ಕಂಬಗಳು ವಾಲಿಕೊಂಡಿವೆ. ಇದನ್ನು ಬೆಸ್ಕಾಂ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ. ವಿದ್ಯುತ್ ಪ್ರವಹಿಸುವ ಲೈನ್ಗೆ ಇಲಾಖೆಯವರು ಪ್ಲಾಸ್ಟಿಕ್ ಪೈಪ್ ಅಳವಡಿಸುವಂತೆ ಕೋರಲಾಗಿತ್ತು.
ಆಸ್ತಿ ತೆರಿಗೆ ಪರಿಷ್ಕರಣೆ ನ್ಯೂನತೆ ಸರಿಪಡಿಸಿ
ಹೊಸಕೋಟೆ :ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ನಿಗದಿಪಡಿಸುವಲ್ಲಿ ಅನುಸರಿಸಿರುವ ಮಾರ್ಗದರ್ಶಿ ನ್ಯೂನತೆಗಳನ್ನು ಸರಿಪಡಿಸಲು ಟೌನ್ ನಾಗರಿಕರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಬನ್ನೇರುಘಟ್ಟ ಕರಡಿ ಸಾವು
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಸಫಾರಿ ಕೇಂದ್ರದಲ್ಲಿನ ವಂಶಿ ಎಂಬ ಕರಡಿ (11) ಸಾವನ್ನಪ್ಪಿದೆ ಎಂದು ಸಿಸಿಎಫ್ಲ್ರಂಗಸ್ವಾಮಿ ತಿಳಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಆನೇಕಲ್: ಬೆಂಗಳೂರು ದಕ್ಷಿಣ ಜಿಗಣಿ ಠಾಣ ವ್ಯಾಪ್ತಿಯ ಪಿಹೆಚ್ಸಿ ರಸ್ತೆ ಬಳಿ ಸುಮಾರು 48 ವರ್ಷ ವಯಸ್ಸಿನ ಅಪರಿಚಿತ ಪುರುಷ ದೇಹ ಪತ್ತೆಯಾಗಿದ್ದು ಸಂಬಂಧಪಟ್ಟವರು ಠಾಣಾ ಸಂಖ್ಯೆ 080 27825108 ಸಂಪರ್ಕಿಸಬೇಕೆಂದು ಪಿಎಸ್ಸೈ ಉಮಾಶಂಕರ್ ತಿಳಿಸಿದ್ದಾರೆ. 5.7 ಅಡಿ ಎತ್ತರ, ಕೋಲು ಮುಖ, ಗೋದಿ ಮೈ ಬಣ್ಣ, ಆರ್. ವಿ. ಎಂ. ಆಸ್ಪತ್ರೆಯ ಸಮವಸ್ತ್ರ ಧರಿಸಿರುತ್ತಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

