ಆಂಜನೇಯಸ್ವಾಮಿಗೆ ನಾಣ್ಯದ ಅಲಂಕಾರ
ದೇವನಹಳ್ಳಿ: ಇಲ್ಲಿನ ಕೋಟೆ ರಸ್ತೆಯಲ್ಲಿರುವ ಮಾರ್ಕೆಟ್ ಆಂಜನೇಯಸ್ವಾಮಿ ದೇವಾಲಯದಲ್ಲಿ ನೂತನ ವರ್ಷಾಚರಣೆ ಅಂಗವಾಗಿ ಬುಧವಾರ ಐದು ಅಡಿ ಎತ್ತರದ ಮೂಲ ಆಂಜನೇಯಸ್ವಾಮಿಗೆ ವಿಶೇಷವಾಗಿ ನಾಣ್ಯದ ಅಲಂಕಾರ ಹಾಗೂ ಪೂಜಾಕಾರ್ಯಗಳನ್ನು ಮಂಜುನಾಥ ವುಡ್ವರ್ಕ್ಸ್ ವಿ.ನಾರಾಯಣಸ್ವಾಮಿ ಸೇವೆ ಸಲ್ಲಿಸಲಿದ್ದಾರೆ ಎಂದು ದೇವಾಲಯದ ಭಕ್ತಮಂಡಳಿ ತಿಳಿಸಿದೆ.
ಬಾಗಿಲು ಮೀಟಿ ಕಂಪ್ಯೂಟರ್ ಕಳವು
ಸೂಲಿಬೆಲೆ: ಪಟ್ಟಣದ ಚನ್ನಬೈರೇಗೌಡ ನಗರದಲ್ಲಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಗಣಕಯಂತ್ರ ಕೊಠಡಿ ಬಾಗಿಲು ಮೀಟಿ ಅಂದಾಜು ರು.1ಲಕ್ಷ ಬೆಲೆ ಬಾಳುವ ಕಂಪ್ಯೂಟರ್ ಹಾಗೂ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಗ್ರಾಮೀಣ ಅಭಿವೃದ್ಧಿಗೆ ನರೇಗಾ ಸಂಜೀವಿನಿ
ಮಾಗಡಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನರೇಗ ಯೋಜನೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಂಜೀವಿನಿಯಿದ್ದಂತೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ತಿಳಿಸಿದರು. ಅವರು ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 3.5 ಲಕ್ಷ ರು. ವೆಚ್ಚದಲ್ಲಿ ನೂತನ ಚೆಕ್ ಡ್ಯಾಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಗುಣಮಟ್ಟದ ಚೆಕ್ ಡ್ಯಾಂಗಳ ನಿರ್ಮಾಣದಿಂದ ಭೂಮಿಯ ಅಂತರ್ಜಲ ಮಟ್ಟ ವೃದ್ಧಿಸಲು ಸಹಕಾರಿಯಾಗುತ್ತದೆ. ಗುತ್ತಿಗೆದಾರರು ಗುಣಮಟ್ಟದ ಚೆಕ್ ಡ್ಯಾಂ ನಿರ್ಮಿಸಲು ಸೂಚನೆ ನೀಡಿದ್ದೇನೆ. ರೈತರು ಹೊಲ, ಗದ್ದೆ ಬಳಿ ಇರುವ ಹಳ್ಳಗಳಿಗೂ ಸಹ ಚೆಕ್ ಡ್ಯಾಂ ನಿರ್ಮಿಸಿಕೊಂಡು ತಮ್ಮ ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲು ನರೇಗ ಯೋಜನೆ ಉಪಯುಕ್ತ. ಬಹುಪಯೋಗಿ ಚೆಕ್ ಡ್ಯಾಂ ನಿರ್ಮಿಸಿಕೊಂಡು, ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕು ಸಾಗಿಸುವಂತೆ ಕರೆ ನೀಡಿದರು. ತಾ.ಪಂ. ಮಾಜಿ ಅಧ್ಯಕ್ಷ ಬಿ.ಟಿ.ವೆಂಕಟೇಶ್ ಕನಿಷ್ಠ ಸಂಬಳಕ್ಕಾಗಿ ಉದ್ಯೋಗ ಹರಸಿ ಯುವಕರು ನಗರ ಪ್ರದೇಶಕ್ಕೆ ಹೋಗದೆ, ತಮ್ಮ ಪೂರ್ವಿಕರು ಉಳಿಸಿಕೊಂಡು ಬಂದಿರುವ ಭೂಮಿ ತಾಯಿಯ ಸೇವೆ ಮಾಡಿದರೆ, ಭೂತಾಯಿ ಎಂದೆಂದೂ ನಿಮ್ಮನ್ನು ಕೈಬಿಡುವುದಿಲ್ಲ. ನಾಲ್ಕಾರು ಕುಟುಂಬಗಳಿಗೆ ನೀವೇ ಉದ್ಯೋಗ ನೀಡುವ ಮೂಲಕ ಇತರರಿಗೆ ಅನ್ನದಾತರಾಗಬಹುದು ಎಂದು ಕಿವಿ ಮಾತು ಹೇಳಿದರು. ಮತ್ತೀಕೆರೆ ಗ್ರಾ.ಪಂ. ಅಧ್ಯಕ್ಷ ಶಿವನಂಜೇಗೌಡ, ಜಗದೀಶ್, ಬಾಳೇಗೌಡ, ಹನುಮತರಾಯಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

