ಭ್ರಷ್ಟಾಚಾರದಲ್ಲಿ ಕಾಂಗ್ರೆಸ್- ಬಿಜೆಪಿ ಪೈಪೋಟಿ: ಸಿಪಿಎಂ
ಆನೇಕಲ್: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಕೋಟಿ ರು.ಗಳ ಹಗರಣದಲ್ಲಿ ಭಾಗಿಯಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ರು.ಗಳ ಹಗರಣದಲ್ಲಿ ನಿರತವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಇವು ಭ್ರಷ್ಟಾಚಾರ ಪೋಷಣೆಯಲ್ಲಿ ಪೈಪೋಟಿ ನಡೆಸುತ್ತಿದ್ದು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದೇ ಶೋಷಣೆ ಮಾಡುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದ್ದಾರೆ.
ಅವರು ಆನೇಕಲ್ಲಿನ ಶ್ರೀ ರಾಮ ಕುಟೀರದಲ್ಲಿ ನಡೆದ ಜನ ಜಾಗೃತಿ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಸಾವಿರಾರು ರೈತ ಬಂಧುಗಳನ್ನುದ್ದೇಶಿಸಿ ಮಾತನಾಡಿ, ಈ ಪಕ್ಷಗಳ ಮತ್ತೊಂದು ಸಾಧನೆ ಎಂದರೆ ಸಚಿವರುಗಳು ಜೈಲು ವಾಸ ಕಂಡಿರುವುದು ಎಂದು ಲೇವಡಿ ಮಾಡಿದರು. ಬಂಡವಾಳದಾರರ ಪರ ಯೋಜನೆಗಳನ್ನು ರೂಪಿಸುವ ನಾಯಕರು ಬೆಲೆ ಏರಿಕೆ ತಡೆಯುವ ಬಗ್ಗೆ, ಸಮರ್ಪಕ ಪಡಿತರ ವಿತರಣೆ ಬಗ್ಗೆ ಯೋಜನೆಗಳನ್ನು ಜಾರಿಗೆ ತರುವುದಿಲ್ಲ. ಗಣಿ ಸಂಪತ್ತು ಲೂಟಿ, ಭೂಹಗರಣಗಳು, ಫಲವತ್ತಾದ ಕೃಷಿ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ವಶಪಡಿಸಿಕೊಂಡು ದ್ರೋಹ ಮಾಡುವವರನ್ನು ತಿರಸ್ಕರಿಸಬೇಕು ಎಂದರು.
ಮಹದೇಶ ಮಾತನಾಡಿ ತಾಲೂಕಿನಲ್ಲಿ ಮೂಲಭೂತ ಸೌಕರ್ಯಗಳು ಸಮಾನವಾಗಿ ತಲುಪಿಲ್ಲ. ಬಗರ್ ಹುಕುಂ ರೈತರಿಗೆ ಸಾಗುವಳಿ ಚೀಟಿ ದೊರೆತಿಲ್ಲ. ನಿವೇಶನ ರಹಿತರಿಗೆ ನಿವೇಶನ ನೀಡಿಲ್ಲ ಎಂದರು. ರಾಜ್ಯ ಮುಖಂಡ ಎಸ್. ಪ್ರಸನ್ನಕುಮಾರ್, ಕಾಂ. ಪ್ರಕಾಶ್ ಇದ್ದಾರೆ. ವಕೀಲ ಮಂಜುನಾಥ್, ಕೆ.ಎನ್. ಉಮೇಶ್, ಲಕ್ಷ್ಮಣ ಕುಮಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

