ಬೆಂಗಳೂರು ಗ್ರಾಮಾಂತರ

ಬೋವಿ ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಅಗತ್ಯ

Published On :

ಕನಕಪುರ: ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿರುವ ಬೋವಿ ಸಮುದಾಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಹಾಗೂ ಸಂಘಟನೆಗಳ ಅಗತ್ಯವಾಗಿದೆ. ಸಮುದಾಯದ ಜನರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಸಂಘಟಿತರಾಗಿ ಒಗ್ಗೂಡಬೇಕೆಂದು ಕರ್ನಾಟಕ ರಾಜ್ಯ ಬೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿನ್ನಸ್ವಾಮಿ ಹೇಳಿದ್ದಾರೆ. ಅವರು ಕನಕಪುರ ಘಟಕದ ನೂತನ ಪದಾಧಿಕಾರಿಗಳ ನೇಮಕಾತಿ ನೆರವೇರಿಸಿ ಮಾತನಾಡುತ್ತಿದ್ದರು. ಕನಕಪುರ ತಾಲೂಕು ಅಧ್ಯಕ್ಷ ನಿಡಗಲ್ಲು ಗುರುರಾಜ್ ಮಾತನಾಡುತ್ತಾ, ಬೋವಿ ಸಮುದಾಯ ಪ್ರಾಚೀನ ಇತಿಹಾಸ ಹೊಂದಿದೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬೋವಿಗಳು ಗುಡಿ, ಗೋಪುರ, ಕೆರೆ, ಕಟ್ಟಡಗಳ ನಿರ್ಮಾತೃಗಳಾಗಿದ್ದು ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಸೂಕ್ತ ಮಾರ್ಗದರ್ಶನ, ಶಿಕ್ಷಣಗಳನ್ನು ಒದಗಿಸುವ ಕೆಲಸವಾಗಬೇಕು. ಅನ್ಯಾಯಗಳು ನಡೆದಾಗ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು. ರಾಜ್ಯ ಕಾರ್ಯಾಧ್ಯಕ್ಷ ಎಸ್.ಎನ್.ವೆಂಕಟಾಚಲಯ್ಯ, ರಾಜ್ಯ ಸಮಿತಿ ಸದಸ್ಯ ರಾಜಣ್ಣ, ಉಪಾಧ್ಯಕ್ಷ ಕೆ.ಸಿ. ಮುನಿಯಪ್ಪ, ಪಟೇಲಣ್ಣ, ಚಿಕ್ಕಪುಟ್ಟಯ್ಯ, ತಾ.ಗೌರವಾಧ್ಯಕ್ಷ ದಾಸಪ್ಪ, ಕಾರ್ಯದರ್ಶಿ ಭೋಜರಾಜ್, ಖಜಾಂಚಿ ಕನಕರಾಜು, ರಾಜ್ಯಸಂಘಟನಾ ಕಾರ್ಯದರ್ಶಿ ಶಾಂತರಾಜು ಪಾಲ್ಗೊಂಡಿದ್ದರು. ಶ್ರೀನಿವಾಸ್ ಸ್ವಾಗತಿಸಿದರು. ಗುರುರಾಜ್ ವಂದಿಸಿದರು.
ಶಾಶ್ವತ ನೀರಾವರಿ ಜಾಗೃತಿ ಅಭಿಯಾನ
ಕನಕಪುರ:  ಕರ್ನಾಟಕ ನೀರಾವರಿ ವೇದಿಕೆ, ರಾಜ್ಯ ರೈತಸಂಘದ ಆಶ್ರಯದಲ್ಲಿ ಶಾಶ್ವತ ನೀರಾವರಿ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಾದ್ಯಂತ 2 ದಿನಗಳಿಂದ ಹಳ್ಳಿಗಳಲ್ಲಿ ಹಾಗೂ ಶಾಲೆಗಳಲ್ಲಿ ನಾಶವಾಗುತ್ತಿರುವ ಪರಿಸರ, ಕಲುಷಿತ ನೀರು ಸೇವನೆ ದುಷ್ಪರಿಣಾಮ, ನೀರಿನ ಸದ್ಬಳಕೆ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಸಲಾಗುತ್ತಿದೆ. ಅಭಿಯಾನದಲ್ಲಿ ಜಲತಜ್ಞ ಪರಮಶಿವಯ್ಯ ಮಾತನಾಡಿ, ಪಶ್ಚಿಮಘಟ್ಟಗಳ ಪ್ರಮುಖವಾದ 11 ನದಿಗಳಿಂದ 2500 ಸಾವಿರ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಈ ಪೈಕಿ 1 ಭಾಗವನ್ನಾದರೂ ಬಯಲುಸೀಮೆ ಕಡೆಗೆ ಹರಿಸಲು ಯತ್ನಿಸಿದರೆ ಹಲವಾರು ಜಿಲ್ಲೆಗಳ ನೀರಿನ ಬರ ನೀಗಲಿದೆ. ಪರಿಸರಸ್ನೇಹಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.