ಬೆಂಗಳೂರು ಗ್ರಾಮಾಂತರ

ಚುನಾವಣೆ ಪ್ರಕ್ರಿಯೆಗೆ ಹೈಕೋರ್ಟ್ ತಡೆ (ಸುದ್ದಿ ಸಂಕ್ಷೇಪ)

Published On :

ಬೆಂಗಳೂರು: ರಾಮನಗರ ಜಿಲ್ಲಾ ಪಂಚಾಯಿತಿಯ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಫೆ.2ರಂದು ನಡೆದಿದ್ದ ಚುನಾವಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ
ಮಾಗಡಿ: ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ  ವಿಜೃಂಭಣೆಯಿಂದ ನೆರವೇರಿತು. ಶಾಸಕ ಎಚ್.ಸಿ. ಬಾಲಕೃಷ್ಣ, ರಾಧ ಬಾಲಕೃಷ್ಣ,  ಶಾರದಮ್ಮ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಮಮೂರ್ತಿ, ಕೆಪಿಸಿಸಿ ಸದಸ್ಯ ಎ.ಮಂಜು, ಜಿ.ಪಂ. ಅಧ್ಯಕ್ಷ ಮುದ್ದುರಾಜ ಯಾದವ್, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್ ಮುಂತಾದವರು  ರಥ ಎಳೆದರು.
ತಿಮ್ಮಸಂದ್ರದಲ್ಲಿ ನಾಟಕೋತ್ಸವ
ಸೂಲಿಬೆಲೆ: ಇಲ್ಲಿಗೆ ಸಮೀಪದ ತಿಮ್ಮಸಂದ್ರ ಗ್ರಾಮದಲ್ಲಿರುವ ಮಂಜುನಾಥ ಕಲ್ಯಾಣ ಮಂಟಪ್ಪದಲ್ಲಿ ಫೆ.20 ರಿಂದ ಎರಡು ದಿನಗಳ ಕಾಲ ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಾಂತರ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ನಾಟಕೋತ್ಸವ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಉದ್ಘಾಟನೆ ಮಾಡಲಿದ್ದಾರೆ. ಫೆ.20 ರಂದು ಸೂಲಿಬೆಲೆ ಆನಂದ್ ಮತ್ತು ತಂಡದವರಿಂದ ಶ್ರೀ ಕೃಷ್ಣ ಸಂಧಾನ, ಫೆ.21 ರಂದು ತಿಪಟೂರು ಹೇಮಲತಾ ಕಲಾ ತಂಡದವರು (ಎಲ್ಲರೂ ಮಹಿಳಾ ಕಲಾವಿದರು) ಕರಿಭಂಟನ ಕಾಳಗ ಎಂಬ ಐತಿಹಾಸಿಕ ನಾಟಕವನ್ನು ಅಭಿನಯಿಸಲಿದ್ದು ಅಂದು ರಾತ್ರಿ ಏಕಲವ್ಯ ಎಂಬ ಪೌರಾಣಿಕ ನಾಟಕ ನಡೆಯಲಿದೆ.
ಹಣ ವ್ಯವಹಾರ: ವ್ಯಕ್ತಿ ಕೊಲೆ
ಆನೇಕಲ್: ಹಣಕಾಸಿನ ವ್ಯವಹಾರದಲ್ಲಿ ವೈಷಮ್ಯ ಕಾರಣ ವ್ಯಕ್ತಿಯೊಬ್ಬನನ್ನು ಇರಿದು ಕೊಂದ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಯಲ್ಲಮ್ಮನ ಪಾಳ್ಯದಲ್ಲಿ ನಡೆದಿದೆ. ಶಿವರಾಜು(32) ಮೃತ ಪಟ್ಟ ದುರ್ದೈವಿ. ಬಂಡೆ ಕೂಲಿ ಕಾರ್ಮಿಕನಾದ ಈತ ಲೇವಾ ದೇವಿಯನ್ನು ನಡೆಸುತ್ತಿದ್ದು ಭಾನುವಾರ ಸಂಜೆ ಮನೆ ಬಿಟ್ಟವನು ಕಾಣೆಯಾಗಿದ್ದಾನೆಂದು ಪತ್ನಿ ಮೀನಾಕ್ಷಿ ಜಿಗಣಿ ಠಾಣೆಯಲ್ಲಿ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ ಮೃತ ವ್ಯಕ್ತಿಯ ದೇಹವೊಂದು ಜಮೀನಿನಲ್ಲಿ ಕಂಡು ಬಂದಿದೆಯೆಂಬ ದೂರವಾಣಿ ಕರೆ ಆಲಿಸಿ ನೋಡಿದಾಗ ಮೀನಾಕ್ಷಿ ಶಿವರಾಜು ಅವರ ದೇಹವನ್ನು ಗುರುತಿಸಿದರೆಂದು ಪೊಲೀಸರು ತಿಳಿಸಿದ್ದಾರೆ.
ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ
ಹೊಸಕೋಟೆ: ಪಟ್ಟಣದ ಟಿ.ಜಿ.ಬಡಾವಣೆಯ ಸ್ವಾಮಿ ವಿವೇಕಾನಂದ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥ ಸಪ್ತಮಿ ಹಾಗೂ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಇಲ್ಲಿನ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗ ಗುರು ಹರಿನಾರಾಯಣ ವಹಿಸಿದ್ದರು, ಉದ್ಘಾಟನೆಯನ್ನು ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿ. ಜಯರಾಜ್ ನೆರವೇರಿಸಿದರು.
ಯೋಗ ಶಿಬಿರಾರ್ಥಿಗಳು, ಶಾಲಾ ಮಕ್ಕಳು ಹಾಗೂ ಮಹಿಳೆಯರು, ಪಟ್ಟಣದ ಸುಮಾರು 200 ಸಂಖ್ಯೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯ ನಮಸ್ಕಾರ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮಹಿಳಾ ಯೋಗ ಶಿಕ್ಷಕಿಯಾದ ನೇತ್ರಾವತಿ ಹಾಗೂ ಪಿಐಡಿ ಬ್ಯಾಂಕ್ ಉಪಾಧ್ಯಕ್ಷ ಎನ್. ನಾಗರಾಜ್ ಮತ್ತು ಸಮಿತಿಯ ರಾಮಚಂದ್ರಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.