ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ನಗರಸಭೆ: 29 ಕಡೆ ಜೆಡಿಎಸ್ ಸ್ಪರ್ಧೆ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ 31 ಸ್ಥಾನಗಳ ಪೈಕಿ 29 ವಾರ್ಡುಗಳಲ್ಲಿ ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.   8 ಮತ್ತು 18ನೇ ವಾರ್ಡುಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿಲ್ಲ. ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲಿ ಪಕ್ಷ ಏಕಾಂಗಿ ಹೋರಾಟ ನಡೆಸಲಿದೆ.  
 ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ ಎಂದು ಪಕ್ಷದ ತಾಲೂಕು ಘಟಕದ ಪ್ರಕಟಣೆ ತಿಳಿಸಿದೆ.ಅಭ್ಯರ್ಥಿಗಳ ವಿವರ ಇಂತಿದೆ: 1ನೇ ವಾರ್ಡ್- ಕೃಷ್ಣಮೂರ್ತಿ, 2ನೇ ವಾರ್ಡ್- ಕೆಂಪರಾಜು, 3ನೇ ವಾರ್ಡ್-ಜೆ.ಪ್ರಕಾಶ್, 4ನೇ ವಾರ್ಡ್-ಸುಧಾಲೋಕೇಶ್, 5ನೇ ವಾರ್ಡ್-ಗೌರಿಶಂಕರ್, 6ನೇ ವಾರ್ಡ್- ರೇಲ್ವೇಸ್ಟೇಷನ್ ಮಲ್ಲೇಶ್, 7ನೇ ವಾರ್ಡ್-ಜಿ.ಸತ್ಯನಾರಾಯಣ, 9ನೇ ವಾರ್ಡ್- ಸುಶೀಲಮ್ಮ, 10ನೇ ವಾರ್ಡ್-ಚಂದ್ರಕಲಾ, 11ನೇ ವಾರ್ಡ್-ರಮೇಶ್, 12ನೇ ವಾರ್ಡ್-ಡಿ.ಜಿ.ಅಶ್ವತ್ಥ್, 13ನೇ ವಾರ್ಡ್-ಭಾಗ್ಯಲಕ್ಷ್ಮಿಕಾಂತರಾಜು, 14ನೇ ವಾರ್ಡ್-ಟಿ.ಎನ್.ಪ್ರಭುದೇವ್, 15ನೇ ವಾರ್ಡ್-ಆರ್.ಪ್ರಭಾನಾಗರಾಜ್, 16ನೇ ವಾರ್ಡ್-ಶಿವಕುಮಾರ್, 17ನೇ ವಾರ್ಡ್-ಪಿ.ಸಿ.ಲಕ್ಷ್ಮೀನಾರಾಯಣ್, 19ನೇ ವಾರ್ಡ್-ನಟರಾಜ್, 20ನೇ ವಾರ್ಡ್-ಇಯಾನ್ಅಬ್ದುಲ್ ಜಾವೇದ್, 21ನೇ ವಾರ್ಡ್-ದೀಪಾ ಮಹೇಶ್, 22ನೇ ವಾರ್ಡ್-ಭಾಸ್ಕರ್, 23ನೇ ವಾರ್ಡ್-ಶಂಶುನ್ನೀಸಾ, 24ನೇ ವಾರ್ಡ್-ಎಸ್.ವಿ.ಸುಜಾತ,
25ನೇ ವಾರ್ಡ್-ಯಶೋಧಮ್ಮ ರಾಜಶೇಖರ್, 26ನೇ ವಾರ್ಡ್-ಅನಸೂಯಮ್ಮ ಸುಬ್ರಹ್ಮಣಿ, 27ನೇವಾರ್ಡ್-ಸುಶೀಲಮ್ಮ ರಾಘವ, 28ನೇ ವಾರ್ಡ್-ವಿ.ಎಸ್.ರವಿಕುಮಾರ್, 29ನೇ ವಾರ್ಡ್-ಜಿ.ರಾಮಕೃಷ್ಣ, 30ನೇ ವಾರ್ಡ್-ಫಯಾಜ್ಪಾಷ, 31ನೇ ವಾರ್ಡ್-ಆರ್.ಗೋವಿಂದರಾಜು.ಕೆಲ ಹಾಲಿ ನಗರಸಭಾ ಸದಸ್ಯರು ಮತ್ತು ಇತರ ಪಕ್ಷಗಳಲ್ಲಿ ಟಿಕೆಟ್ ವಂಚಿತರಾದ ಕೆಲವರಿಗೆ ದೊಡ್ಡಬಳ್ಳಾಪುರ ಜೆಡಿಎಸ್ ಘಟಕ ಈ ಬಾರಿ ಮಣೆ ಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.