ಬೆಂಗಳೂರು ಗ್ರಾಮಾಂತರ

ಉಂಡಮನೆಗೆ ಎರಡು ಬಗೆದ ಯೋಗೇಶ್ವರ್: ಬಿಜೆಪಿ ಆಕ್ರೋಶ

Published On :

ಚನ್ನಪಟ್ಟಣ: ಬಿಜೆಪಿಯಿಂದ ರಾಜಕೀಯ ಭವಿಷ್ಯ ಉಜ್ವಲಗೊಳಿಸಿಕೊಂಡು ಇದೀಗ ಉಂಡಮನೆಗೆ ಎರಡು ಬಗೆದು ಪಕ್ಷಾಂತರ ಮಾಡಿರುವ ಯೋಗೇಶ್ವರ್ ರಾಜಕೀಯ ವ್ಯಭಿಚಾರಿ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ ಆರೋಪಿಸಿದ್ದಾರೆ.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸೋತಾಗಲು ಅಧಿಕಾರನೀಡಿ ಯೋಗೇಶ್ವರ್ಗೆ ಶಕ್ತಿ ತುಂಬಿದ್ದು ಬಿಜೆಪಿ, ಕಾಂಗ್ರೆಸ್ನಲ್ಲಿ ಕೇವಲ ಶಾಸಕರಾಗೇ ಇದ್ದ ಇವರನ್ನು ಸಚಿವರಾಗಿಸಿ ರಾಜಕೀಯ ಭವಿಷ್ಯ ರೂಪಿಸಿ ಕೊಟ್ಟ ನಮ್ಮ ಪಕ್ಷಕ್ಕೆ ದ್ರೋಹ ಬಗೆದಿದ್ದು ಇವರಿಗೆ ತಾಲೂಕಿನ ಜನತೆಯೇ ಪಾಠಕಲಿಸಲಿದ್ದಾರೆ ಎಂದರು.
ಅಭಿವದ್ಧಿ ಯಾರಿಂದ : ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್ ಎರಡು ಬಾರಿ ನಾನು ಸಚಿವನಾಗುವುದನ್ನು ತಪ್ಪಿಸಿದರು, ಕಾಂಗ್ರೆಸ್ 12 ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ನಯಾಪೈಸೆ ಸಹಕಾರ ನೀಡಿಲ್ಲ ತಾಲೂಕಿನ ಅಭಿವೃದ್ಧಿಗೆ ಬಿಜೆಪಿಯೇ ಪರಿಹಾರ ಎಂದು ಹೇಳಿ ಪಕ್ಷಾಂತರ ಮಾಡಿದವರು ಇದೀಗ ಮಾತು ಬದಲಿಸಿದ್ದಾರೆ ಎಂದು ಲೇವಡಿ ಮಾಡಿದರು.
ಡಿಕೆಶಿ ಜೈಲಿಗೆ ಕಳಿಸ್ತಾರ: ಹಿಂದೆ ಅರಣ್ಯ ಸಚಿವರಾಗಿದ್ದಾಗ ಡಿ.ಕೆ.ಶಿವಕುಮಾರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದರು, ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು. ಆದರೀಗ ಇದ್ದಕ್ಕಿದ್ದಂತೆ ಕಾಂಗ್ರೆಸ್ಗೆ ಸೇರಿದ್ದಾರೆ, ಯೋಗೇಶ್ವರ್ ಡಿ.ಕೆ.ಶಿವಕುಮಾರ್ರನ್ನು ಜೈಲಿಗೆ ಕಳುಹಿಸದಿದ್ದು ಯಾಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಶುದ್ದವಾಗಿದೆ: ಯೋಗೇಶ್ವರ್ ಪಕ್ಷಾಂತರದಿಂದ ತಾಲೂಕು ಬಿಜೆಪಿ ಶುದ್ಧವಾಗಿದೆ. ಹಿಂದೆ ನೀಡಿದ್ದ ವಿಶ್ರಾಂತಿ ಹೇಳಿಕೆ ಬಣ್ಣದ ಮಾತು ಎಂದು ಲೇವಡಿ ಮಾಡಿದರು. ತಾಲೂಕು ಬಿಜೆಪಿ ಒಂದೇ ದಿನದಲ್ಲಿ ಚುನಾವನೆಗೆ ತಯಾರಾಗಿದ್ದು 20 ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಳ್ಳಲಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ವಿಷಕಂಠು, ತಾ.ಪಂ ಸದಸ್ಯ ಹನುಮಂತು, ತಾಲೂಕು ಪ್ರಧಾನ ಕಾರ್ಯದರ್ಶಿ ತೂಬಿನಕೆರೆ ರಾಜು, ಶಿವರಾಮು ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.