ಸಾಂಪ್ರಾದಾಯಿಕ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯ ಭಾಗ್ಯ: ಶಾಸಕ ನಾಗರಾಜು
ನೆಲಮಂಗಲ: ಸಾಂಪ್ರಾದಾಯಿಕ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯ ಭಾಗ್ಯ ಕಾಣಲು ಸಾಧ್ಯ ಎಂದು ಶಾಸಕ ಎಂ.ವಿ. ನಾಗರಾಜು ಹೇಳಿದರು.
ಅವರು ಭಾನುವಾರ ಪಟ್ಟಣದ ಮಹಂತಿ ಮಠದಲ್ಲಿ ಶ್ರೀ ಮಾತಾ ವಿಪ್ರ ಮಹಿಳಾ ಮಂಡಳಿ ಹಮ್ಮಿಕೊಂಡಿದ್ದ ಹವ್ಯಾಸಿ ತಿಂಡಿ ತಿನಿಸು ಮಾರಾಟ ಮೇಳ ಹಾಗೂ ಕರಕುಶಲ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರು ಮನೆಯಲ್ಲಿ ತಮ್ಮ ಕೈಚಳಕದ ಮೂಲಕ ರುಚಿ ರುಚಿಯಾದ ಆಹಾರ ಪದಾರ್ಥಗಳನ್ನು ತಯಾರಿಸಿ ಸಂಘಗಳ ಮೂಲಕ ಮಾರಾಟ ಮಾಡುವುದರಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗುತ್ತದೆ ಎಂದರು.
ಕರಕುಶಲ ಹಾಗೂ ಗುಡಿ ಕೈಗಾರಿಕೆಗಳ ಮೂಲಕ ಮಹಿಳೆಯರು ಅತ್ಯಾಕರ್ಷಕ ವಸ್ತುಗಳನ್ನು ಸ್ವಯಂ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜೆ.ಡಿ.ಎಸ್.ಮುಖಂಡ ವೆಂಕಟೇಶ್ ಬಾಬು ಹೇಳಿದರು.
ಹವ್ಯಾಸಿ ಆಹಾರ ಮಾರಾಟಮೇಳ ನಡೆಸುವುದರಿಂದ ಸಂಘದ ಸದಸ್ಯರು ತಾವು ಕೂಡ ವಿಶಿಷ್ಟ ತಿಂಡಿ ತಯಾರಿಸಿ ತಮ್ಮ ರುಚಿಯನ್ನು ಗ್ರಾಹಕರು ಸವಿಯುವುದನ್ನು ಕಾಣಲು ಸಾಧ್ಯವಾಗುತ್ತದೆ ಎಂದು ವಿಪ್ರ ಮಂಡಳಿ ಅಧ್ಯಕ್ಷೆ ಲಲಿತಾ.ಎನ್.ಸ್ವಾಮಿ ನುಡಿದರು.
ಆಹಾರ ಮಾರಾಟ ಮೇಳದಲ್ಲಿ ಗ್ರಾಹಕರು ವಿಪ್ರ ಮಹಿಳೆಯರು ತಯಾರಿಸಿದಂತಹ ವಿವಿಧ ರುಚಿ ತಿಂಡಿ ತಿನಿಸುಗಳನ್ನು ಖರೀದಿಸುವ ಮೂಲಕ ರುಚಿಯನ್ನು ಸ್ವಾಧಿಸಿದರು ಹಾಗೂ ಕರಕುಶಲ ಹಾಗೂ ಸಾಂಪ್ರಾದಾಯಿಕ ವಸ್ತುಗಳನ್ನು ಪ್ರದರ್ಶಿಸಿದರು.
ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಡಿ.ಎನ್. ವಿಶ್ವನಾಥ್, ಜ್ಞಾನವಾಹಿನಿ ಶಾಲೆಯ ಕಾರ್ಯದರ್ಶಿ ಪ್ರಭಾಕರ್, ಪುರಸಭಾ ಸದಸ್ಯ ಎಸ್.ಗಣೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ರಾಜಶೇಖರ್, ನಾಮಿನಿ ಸದಸ್ಯ ಜಿ.ಎಸ್. ಮಂಜುನಾಥ್, ರುದ್ರೇಶ್ವರ ಪ್ರಾಥನಾ ಮಂದಿರದ ಕಾರ್ಯದರ್ಶಿ ಎನ್.ಜಿ. ರುದ್ರಮೂರ್ತಿ, ಶಿವಾನಂದಕುಮಾರ್, ಮಂಡಳಿಯ ಉಪಾಧ್ಯಕ್ಷೆ ಲೀಲಾ ಗಂಗಾಧರ್, ಕಾರ್ಯದರ್ಶಿ ಸ್ಮಿತಾ ಜಗನ್ನಾಥ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೌಮ್ಯ, ಖಜಾಂಚಿ ಗಾಯಿತ್ರಿ ಸುಬ್ಬಣ್ಣ, ಪದಾಧಿಕಾರಿಗಳಾದ ಸರಸ್ವತಿ ಭೂಷಣ್, ಉಮಾ, ಪದ್ಮ, ವಿಜಿಯಮ್ಮ, ಸೀತಾ, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

