ಬೆಂಗಳೂರು ಗ್ರಾಮಾಂತರ

ಬಸವ ವಸತಿ ಯೋಜನೆ ಸಹಾಯಧನ ರು. 1 ಲಕ್ಷಕ್ಕೆ ಏರಿಕೆ: ಸಚಿವ ಸೋಮಣ್ಣ

Published On :




ಮಾಗಡಿ:  ಬಸವ ವಸತಿ ಯೋಜನೆಯ  ಸಹಾಯಧನ 1 ಲಕ್ಷ ರು. ಗೆ  ಏರಿಸಿ ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ನುಡಿದರು.    
 ಅವರು ಬಾಣವಾಡಿ ಮತ್ತು ಅದರಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ನಂತರ   ವೀರಾಪುರದಲ್ಲಿ   ಸಿದ್ದಗಂಗಾ ಶ್ರೀಗಳರ ಮಾತಾ, ಪಿತೃರ ಗದ್ದುಗ್ಝೆಣ  ಪುಷ್ಪನಮನ ಸಲ್ಲಿಸಿ   ಸುಮಾರು 50 ಲಕ್ಷ ರು. ವೆಚ್ಚದಲ್ಲಿ  ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿಶ್ವದ ಭೂಪಟದಲ್ಲಿ ಶ್ರೀಗಳ ಹುಟ್ಟೂರು ವೀರಾಪುರ ಪರಿಚಯಿಸಿದ ಸಂತೋಷ ನನಗಿದೆ. ಸಿದ್ದಗಂಗಾ ಶ್ರೀಗಳ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕೊಡುಗೆ ಅವಿಸ್ಮರಣೀಯವಾದುದು ಎಂದರು.
ತಾಲೂಕಿಗೆ ಹೆಚ್ಚುವರಿಯಾಗಿ ಒಂದು ಸಾವಿರ ಮನೆಗೆ  ಮಂಜೂರಾತಿ ನೀಡಿದ್ದೇನೆ. ಸ್ವಾತಂತ್ರ್ಯ ಬಂದು 65 ವರ್ಷಗಳೂ ಕಳೆದರೂ ಇನ್ನೂ ಎಷ್ಟೋ ಮಂದಿಗೆ ಸೂರಿಲ್ಲ, ಕುಡಿಯುವ ನೀರಿಲ್ಲ ಹೀಗಾರುವಾಗ ಯಡಿಯೂರಪ್ಪ ಆಡಳಿತದಲ್ಲಿ  ಸುಮಾರು 12 ಲಕ್ಷ ಮನೆಯ ಪಟ್ಟಿ ತಯಾರಿಸಿದ್ದೆವು. 6 ಲಕ್ಷ ಮನೆಗಳಿಗೆ ಮಂಜೂರಾತಿ ದೊರಕಿತು ಎಂದರು. ಮುಖ್ಯಮಂತ್ರಿ ಶೆಟ್ಟರ್ ಸಂಪೂರ್ಣ ಸಹಕಾರ ನೀಡುವ ರವಸೆ ನೀಡಿದರು ಎಂದರು.  ಶಾಸಕ ಎಚ್.ಸಿ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಸರ್ಕಾರ ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸವಿದೆ. ಸಿಎಂ. ಜಗದೀಶ್ ಶೆಟ್ಟರ್ ಫೆಬ್ರವರಿಯಲ್ಲಿ ಬಜೆಟ್  ಮಂಡಿಸುವ ನಂಬಕೆಯಿದೆ.  ಜೀವವಿಲ್ಲದ ಇಲಾಖೆಗೆ ಜೀವ ತುಂಬುತ್ತಿರುವ ಸಚಿವ ವಿ. ಸೋಮಣ್ಣ  ಯಾವುದೇ ಖಾತೆಗೆ ನೀಡಿದರೂ ಪ್ರಾಮಾಣಿಕತೆಯಿಂದ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡುತ್ತಾರೆ ಎಂದರು.
   ತಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಜಿ. ಉದ್ದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ಸದಸ್ಯರಾದ ರಂಗಸ್ವಾಮಿ, ವಿಜಯಕುಮಾರ, ಹಂಸಕುಮಾರಿ, ಬಾಣವಾಡಿ ಗ್ರಾ.ಪಂ. ಅಧ್ಯಕ್ಷೆ ಸತ್ಯಭಾಮ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ತಾ.ಪಂ.ಅಧ್ಯಕ್ಷ ಬಿ.ಟಿ. ವೆಂಕಟೇಶ್,  ಉಪಾಧ್ಯಕ್ಷೆ ಅನಿಸಾ ಖಾನಂ,ಮಾಜಿ ಉಪಾಧ್ಯಕ್ಷ ನಾಗರಾಜು, ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್.ಸುರೇಶ್, ಬಂಡೇಮಠದ ಬಸವಲಿಂಗಸ್ವಾಮಿ, ಗದ್ದುಗೆ ಮಠದ ಮಹಂತಸ್ವಾಮಿ, ಚಿಲುಮೆ ಮಠದ ಬಸವಲಿಂಗಸ್ವಾಮಿ, ಅಂಬೇಡ್ಕರ್ ನಿಗಮದ ಮಹದೇವ್ ಪ್ರಸಾದ್, ಬಿ.ಎಸ್.ಪರಮಶಿವಯ್ಯ, ಶಿವರುದ್ರಪ್ಪ, ಶಿವಪ್ರಸಾದ್  ತಾಪಂ  ಇಓ ಕೆ.ಬಿ. ಅಕ್ಕೋಜಿ, ಜಿ.ಪಂ. ಎಇಇ ರವಿ ಎಸ್.ಸುರಾನ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.