ಬೆಂಗಳೂರು ಗ್ರಾಮಾಂತರ

ಕುಡಿವ ನೀರಿಗೆ 3 ಕೊಳವೆ ಬಾವಿ

Published On :

ಕ.ಪ್ರ.ವಾರ್ತೆ  ,  ಸೂಲಿಬೆಲೆ  ,  ಜು.7
ಪಟ್ಟಣದಲ್ಲಿ ಉದ್ಭವಿಸಿರುವ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕಾಗಿ ತಕ್ಷಣ ಮೂರು ಕೊಳವೆ ಬಾವಿಗಳನ್ನು ಕೊರೆಸಿ ಜನರಿಗೆ ಅನುಕೂಲ ಮಾಡಿಕೊಡಲಾಗವುದು ಎಂದು ಶಾಸಕ ಎನ್. ನಾಗರಾಜ್ ಹೇಳಿದ್ದಾರೆ.
ಸೂಲಿಬೆಲೆಯಿಂದ ಗಿಡ್ಡಪ್ಪನಹಳ್ಳಿ ಮುಖಾಂತರ ನಗರೇನಹಳ್ಳಿಯ ಶಿಡ್ಲಘಟ್ಟ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಭಾನುವಾರ ಶಂಕುಸ್ಥಾಪನೆ ನಡೆಸಿ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ನರ್ಬಾಡ್ ಯೋಜನೆಯಲ್ಲಿ ನಗರೇನಹಳ್ಳಿ ರಸ್ತೆಯನ್ನು ರು.75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡೆಸಲಾಗವುದು. ಇದರಿಂದ ಈ ಭಾಗದ ಜನರ ಬಹುದಿನದ ಕನಸು ನನಸಾಗಲಿದೆ. ಕಾಮಗಾರಿಗಳನ್ನು ಗುಣಮಟ್ಟವಾಗಿ ನಿರ್ಮಾಣ ಮಾಡಬೇಕು. ಕಳಪೆ ಕಾಮಗಾರಿಯನ್ನು ಸಹಿಸುವುದಿಲ್ಲ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಕಳಪೆ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ರಸ್ತೆ ಕಾಮಗಾರಿಗಳನ್ನು ಮಾಡಲು ರು.12 ಕೋಟಿ ಕೇಂದ್ರ ಸರ್ಕಾರದಿಂದ ತಾಲೂಕಿಗೆ ಸಿಗಲಿದೆ ಎಂದರು.
ಮೋಸ ಸಹಿಸುವುದಿಲ್ಲ: ಜು.10 ರಂದು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದು, ಬಡವರಿಗೆ ಪಡಿತರ ಅಂಗಡಿಗಳಲ್ಲಿ ನೀಡುವ ಆಹಾರ ಧಾನ್ಯಗಳಲ್ಲಿ ಮೋಸ ಮಾಡುವುದನ್ನು ಸಹಿಸುವುದಿಲ್ಲ. ಕಡ್ಡಾಯವಾಗಿ ಬಿಲ್ ನೀಡಬೇಕು.
ಈ ಬಗ್ಗೆ ಯಾರೇ ದೂರು ನೀಡಿದರೂ ಕಠಿಣ ಕ್ರಮ ಜರುಗಿಸಲಾಗುವುದು. ಕಾಂಗ್ರೆಸ್ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಅನೇಕ ಜನಪರವಾದ ಯೋಜನೆಗಳನ್ನು ಘೋಷಣಿ ಮಾಡಲಿದೆ. ಬಡವರ ವಸತಿ ಯೋಜನೆಗೆ ಸರ್ಕಾರ ನೀಡುವ ಮನೆ ನಿರ್ಮಾಣದ ಸಹಾಯಧನವನ್ನು 75 ಸಾವಿರದಿಂದ 1.25 ಸಾವಿರಕ್ಕೆ ಏರಿಕೆಯಾಗಿದೆ. ಮನೆಗಳನ್ನು ನಿರ್ಮಾಣ ಮಾಡುವ ವಿಷಯದಲ್ಲಿ ನಿಗದಿ ಮಾಡಿದ ಅಳತೆಯನ್ನು ಸಡಿಲ ಮಾಡಲು ವಸತಿ ಸಚಿವರ ಬಳಿ ಚರ್ಚಿಸಿದ್ದು, ಇದಕ್ಕೆ ಪೂರಕವಾಗಿ ಒಪ್ಪಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡದೇ ವಾಪಸ್ ಹೋಗಿರುವ 456 ಫಲಾನುಭವಿಗಳ ಹಣವನ್ನು ವಾಪಸ್ ತರಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗಾಗಿ ಜಾರಿಯಾಗಲಿರುವ ಎತ್ತಿನಹೊಳೆ ಕಾಮಗಾರಿಗೆ ರು.300 ಕೋಟಿ ನೀಡಿದೆ. ಅಭಿವೃದ್ಧಿ ಪರವಾಗಿ ಕಾರ್ಯಕರ್ತರು ಮುಖಂಡರು ಹೆಚ್ಚಿನ ಕಾಳಜಿವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಅವರು ಇದೇ ವೇಳೆ ಮಾತನಾಡಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ, ಹಿರಿಯ ಮುಖಂಡ ಪುಟ್ಟಸ್ವಾಮಪ್ಪ, ತಾಪಂ ಮಾಜಿ ಸದಸ್ಯ ಚನ್ನಪ್ಪ, ಮರುವೆ ಕೃಷ್ಣಪ್ಪ, ಗೌಸಿಯಾ, ಗ್ರಾಪಂಸದಸ್ಯ ರಾಫವೇಂದ್ರ, ಶಫೀವುಲ್ಲಾ, ಶಿವಣ್ಣ, ಮುನಿರಾಜ್, ಗುತ್ತಿಗೆದಾರ ಚಂದ್ರಶೇಖರ್, ನಾಯಕ್, ಪಳನಿಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.