ಸಮುದಾಯದ ಏಳಿಗೆ ದುಡಿವ ವ್ಯಕ್ತಿಗಳನ್ನು ಗೌರವಿಸಲು ಹೆಮ್ಮೆ
ಕ.ಪ್ರ.ವಾರ್ತೆ ಕನಕಪುರ ಜುಲೈ 8
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ವ್ಯಕ್ತಿಗಳನ್ನು ಗೌರವಿಸಲು ಕರ್ನಾಟಕ ರಕ್ಷಣಾವೇದಿಕೆ ಹೆಮ್ಮೆ ಪಡುತ್ತದೆ ಎಂದು ಕರವೇ ಅಧ್ಯಕ್ಷ ವಾಡೇದೊಡ್ಡಿ
ಕಬ್ಬಾಳೇಗೌಡ ಹೇಳಿದ್ದಾರೆ. ಅವರು ಬೆಂಗಳೂರಿನ ಭವಾನೀ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಲಕ್ಷ್ಮಣ್ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಬಡತನದಲ್ಲಿಯೇ ಹುಟ್ಟಿ ಬೆಳೆದು ಉನ್ನತ ವ್ಯಾಸಂಗ ಗಳಿಸಿ ಉದ್ಯಮದ ಮೂಲಕ ತಾವು ಗಳಿಸಿದ ಸಂಪತ್ತನ್ನು ಸಮಾಜದ ಶೋಷಿತರಿಗೆ, ಬಡವರಿಗೆ ಸಹಾಯಹಸ್ತದ ರೂಪದಲ್ಲಿ ನೀಡುತ್ತಿರುವ ಲಕ್ಷ್ಮಣ್ ಅವರು ಕನಕಪುರದ ರೂರಲ್ ಪದವಿ ಕಾಲೇಜಿನ ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಕಳೆದ ಐದು ವರ್ಷಗಳಿಂದ ಬಿಸಿಯೂಟ ಸೌಲಭ್ಯ ಒದಗಿಸಿದ್ದಾರೆ. ದೇಗುಲಮಠದ ಕಾಲೇಜು ಕಟ್ಟಡಕ್ಕೆ ಐದುಕೋಟಿ ದೇಣಿಗೆ ನೀಡಿರುವುದಲ್ಲದೆ, ಲಯನ್ಸ್ ಭವನದ ಕಟ್ಟಡಕ್ಕೆ ಹತ್ತಾರು ಲಕ್ಷ ನೆರವು ನೀಡಿದ್ದಾರೆ. ಸಾಮೂಹಿಕ ಸರಳ ವಿವಾಹಗಳನ್ನು ಪ್ರೋತ್ಸಾಹಿಸುತ್ತಿರುವ ಇವರು ಉದಾರ ದಾನಿಗಳಾಗಿ ಹೆಸರಾಗಿದ್ದಾರೆ ಎಂದು ಕಬ್ಬಾಳೇಗೌಡ ನುಡಿದರು. ಸನ್ಮಾನ ಕಾರ್ಯಕ್ರಮದಲ್ಲಿ ಕರವೇ ಪದಾಧಿಕಾರಿಗಳಾದ ಗುರುಗೌಡ, ಸಂಚಾಲಕ ಜಗದೀಶ್, ಪುಟ್ಟಸ್ವಾಮಿ, ಚಂದ್ರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

