ಸ್ಮಶಾನ ಜಾಗ ಮರು ಅಳತೆಗೆ ಒತ್ತಾಯ
ಹೊಸಕೋಟೆ: ಪಟ್ಟಣದ ಮಾಲೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯ ಬಹಳಷ್ಟು ಪ್ರದೇಶ ಒತ್ತುವರಿಯಾಗಿದ್ದು, ಕಂದಾಯ ಇಲಾಖೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿ ಮರು ಅಳತೆ ಮಾಡಿ ಜಾಗವನ್ನು ಅತಿಕ್ರಮಣದಿಂದ ತಡೆಗಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುತ್ತಮುತ್ತಲಿನ ಜಾಗವನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿರುವ ಕಾರಣ ಸ್ಮಶಾನ ದುಃಸ್ಥಿತಿಯಲ್ಲಿರುವುದಷ್ಟೇ ಅಲ್ಲದೆ ಶವಸಂಸ್ಕಾರ ನೆರವೇರಿಸಲು ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಪ್ರದೇಶವು ದಂಡುಪಾಳ್ಯ ಗ್ರಾಮಕ್ಕೆ ಸೇರಿದ್ದು, ಅಗಸನ ಕೆರೆಯ ಅಂಗಳದ ಪಕ್ಕದಲ್ಲಿರುವ ರುದ್ರಭೂಮಿಯು ನೂರಾರು ವರ್ಷಗಳಿಂದ ಹಳೆಯ ಪಟ್ಟಣದ ಮೂಲ ನಿವಾಸಿಗಳಾದ ನಾಯಕರು, ತಿಗಳರು, ಕೊರಚರು, ಲಿಂಗಾಯತರು, ಗಾಣಿಗರು ಶವಸಂಸ್ಕಾರಕ್ಕೆ ಬಳಸುತ್ತಿದ್ದಾರೆ. ಸುಮಾರು 40 ವರ್ಷಗಳಿಂದಲೂ ಈ ಪ್ರದೇಶ ಎಲ್ಲಾ ಭಾಗಗಳಿಂದಲೂ ಒತ್ತುವರಿಯಾಗುತ್ತಿದ್ದು, ಈ ಬಗ್ಗೆ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿಸ್ತಾರವಾದ ಸ್ಮಶಾನವಿದ್ದರೂ ಒತ್ತುವರಿಯಾಗಿರುವ ಕಾರಣದಿಂದಾಗಿ ಒಂದರ ಮೇಲೆ ಮತ್ತೊಂದು ಹೆಣವನ್ನು ಹಾಕಬೇಕಾದ್ದು ಅನಿವಾರ್ಯವಾಗಿದ್ದು, ಸಾಂಪ್ರದಾಯಿಕವಾಗಿ ಪೂಜೆ ಮತ್ತು ಸಂಸ್ಕಾರ ಕ್ರಿಯೆ ನೆರವೇರಿಸಲು ಸಾಧ್ಯವಾಗುತ್ತಿಲ್ಲ. 2009 ರಲ್ಲಿ ತಹಸೀಲ್ದಾರ್ ಅವರಿಗೆ ಸ್ಥಳದ ನಕಾಶೆ ನೀಡಲು ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನ ದೊರೆತಿಲ್ಲ. ಪ್ರಭಾವಗಳಿಗೆ ಮಣಿದಿರುವ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂಬುದು ಸಾರ್ವಜನಿಕರ ದೂರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

