ಭೂಮಿ ಸರ್ವೆ ಮಾಡಲು ಬಂದ ಅಧಿಕಾರಿಗಳ ತಡೆ
ನೆಲಮಂಗಲ: ತಾಲೂಕಿನ ಮಾಚೋನಾಯಕನಹಳ್ಳಿ ಮತ್ತು ನರಸಿಂಹಯ್ಯನಪಾಳ್ಯ ಗ್ರಾಮದ ಸುಮಾರು 350ಕ್ಕೂ ಹೆಚ್ಚಿನ ರೈತರ ಫಲವತ್ತಾದ ಭೂಮಿಯನ್ನು ಕೆ.ಐ.ಎ.ಡಿ.ಬಿ ಇಲಾಖೆ ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ನೊಟೀಸ್ ಸಿದ್ಧ ಮಾಡಿಕೊಂಡು ಭೂಮಿಯ ಸರ್ವೆ ಕಾರ್ಯ ಮಾಡಲು ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತಡೆದು ರೈತರು ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.
ರೈತರಿಂದ ಭೂಸ್ವಾಧೀನ ಮಾಡಿಕೊಂಡು ಕರ್ನಾಟಕ ಹೌಸಿಂಗ್ ಬೋರ್ಡ್ಗೆ ನೀಡಲು ಅಧಿಕಾರಿಗಳು ಮತ್ತು ಹೌಸಿಂಗ್ ಬೋರ್ಡ್ಗೆ ಆಯುಕ್ತರು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ರೈತ ಮುಖಂಡ ಮುರಳಿ ದೂರಿದರು.
ರೈತರನ್ನು ಒಕ್ಕಲೆಬ್ಬಿಸುವ ವ್ಯವಸ್ಥಿತ ಸಂಚಿನಿಂದ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ರೈತರನ್ನು ಬೀದಿ ಪಾಲಾಗಿಸುವ ಹಂತಕ್ಕೆ ಕೆ.ಐ.ಎ.ಡಿ.ಬಿ ಅಧಿಕಾರಿಗಳು ತಂದು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ನೋವು ತೋಡಿಕೊಂಡ ಮಹಿಳೆ: ರೈತ ಮಹಿಳೆ ಜಯಮ್ಮ ಮಾತನಾಡುತ್ತಾ ಸರ್ಕಾರ ರೈತರ ಫಲವತ್ತಾದ ಭಾಮಿಯನ್ನು ಯಾವುದೇ ಕಾರಣಕ್ಕೂ ಭೂಸ್ವಾಧೀನಪಡಿಸಿಕೊಳ್ಳುವುದಿಲ್ಲ ಮತ್ತು ರೈತರ ಅನುಮತಿ ಇಲ್ಲದೆ ಎಂದಿಗೂ ಭೂಸ್ವಾಧೀನಕ್ಕೆ ಮುಂದಾಗುವುದಿಲ್ಲ ಎಂದು ಮಂತ್ರಿಗಳು ಹೇಳುತ್ತಾರೆ. ಅದೇ ಮಂತ್ರಿಗಳು ಹಿಂದೆ ಅಧಿಕಾರಿಗಳನ್ನು ಬಿಟ್ಟು ನಮ್ಮ ಭೂಮಿಯನ್ನು ಕಬಳಿಸಲು ಮುಂದಾಗಿದ್ದಾರೆ, ಇದು ಯಾವ ನ್ಯಾಯ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ರೈತ ಹನುಮಯ್ಯ ಮಾತನಾಡುತ್ತಾ ಈಗ ಭೂಸ್ವಾಧೀನಕ್ಕೆ ಗುರುತಿಸಿರುವ ಸ್ಥಳಕ್ಕೆ ಹೊಂದಿಕೊಂಡಂತೆ 150 ಎಕರೆ ಭೂಮಿ ಇದೆ. ಅಧಿಕಾರಿಗಳು ಉಳಿಕೆ 200 ಎಕರೆ ಫಲವತ್ತಾದ ರೈತರ ಭೂಮಿಯನ್ನು ಕಬಳಿಸಿ ಭೂಮಾಫಿಯ ದೊರೆಗಳಿಗೆ ಅನುಕೂಲ ಮಾಡಲು ವ್ಯವಸ್ಥಿತ ಸಂಚಿಗೆ ರೈತರನ್ನು ಬಲಿ ಕೊಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಅಧಿಕಾರಿಗಳು ಭೂಮಾಫಿಯ ವ್ಯಕ್ತಿಗಳೊಂದಿಗೆ ಕೈ ಜೋಡಿಸಿ ತೊಂದರೆ ನೀಡಲು ಮುಂದಾದರೆ ಇಲ್ಲಿ ನಡೆಯುವ ಅನಾಹುತಕ್ಕೆ ಅಧಿಕಾರಿಗಳು ಮತ್ತು ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕಿನ ಸೋಂಪುರ ಹೋಬಳಿ ದಾಬಸ್ಪೇಟೆ ವ್ಯಾಪ್ತಿಯಲ್ಲಿ ಈಗಾಗಲೇ 5 ಸಾವಿರಕ್ಕೂ ಹೆಚ್ಚಿನ ರೈತರ ಫಲವತ್ತಾದ ಭೂಮಿಯನ್ನು ಕೆ.ಐ.ಎ.ಡಿ.ಬಿ ಭೂಸ್ವಾಧೀನ ಪಡಿಸಿಕೊಂಡು ರೈತರನ್ನು ಬೇಸಾಯದಿಂದ ಮುಕ್ತಗೊಳಿಸಿದ್ದಾರೆ.
ಈ ಘಟನೆ ಬಳಿಕ ಪೊಲೀಸರು ಗ್ರಾಮಕ್ಕೆ ತೆರಳಿ ರೈತರನ್ನು ಸಮಾಧಾನಗೊಳಿಸಿದ್ದಾರೆ ಮತ್ತು ತಾಲೂಕು ಅಧಿಕಾರಿಗಳು ರೈತರ ತೀರ್ಮಾನವನ್ನು ಸರ್ಕಾರಕ್ಕೆ ತಲುಪಿಸುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

