ಶಾಲಾ ಮಕ್ಕಳಿಗೆ ಪ್ರತಿದಿನ ಹತ್ತು ನಿಮಿಷಗಳ ಸಾಮೂಹಿಕ ವ್ಯಾಯಾಮ ಅಗತ್ಯ: ನಾಗರಾಜು
ಕ.ಪ್ರ. ವಾರ್ತೆ ಚನ್ನಪಟ್ಟಣ ಜು.9
ಶಾಲಾ ಮಕ್ಕಳಿಗೆ ಪ್ರತಿದಿನ ಪ್ರಾರ್ಥನೆಯ ಜತೆಗೆ 10 ನಿಮಿಷಗಳ ಸಾಮೂಹಿಕ ವ್ಯಾಯಾಮ ಮಾಡಿಸುವಂತೆ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ನಾಗರಾಜು ದೈಹಿಕ ಶಿಕ್ಷಕರಿಗೆ ಕರೆ ನೀಡಿದರು.
ಪಟ್ಟಣದ ಗುರು ಭವನದಲ್ಲಿ ನಡೆದ ದೈಹಿಕ ಶಿಕ್ಷಣ ಶಿಕ್ಷಕರ ಮೊದಲ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಕೆ.ಪಿ.ಸಿಂಗ್ ವರದಿಯಂತೆ ಮಕ್ಕಳಿಗೆ ದಿನಕ್ಕೊಮ್ಮೆ ವ್ಯಾಯಾಮ ಮಾಡಿಸುವುದು ಅಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪಠ್ಯವನ್ನು ಕಲಿಸುವ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ದೈಹಿಕ ಶಿಕ್ಷಕರು ನೋಡಿ ಕೊಳ್ಳ ಬೇಕು, ಶಾಲೆಯ ಆರಂಭ ದಿಂದಲೇ ಕ್ರೀಡೆಯಲ್ಲಿ ಮಾರ್ಕಿಂಗ್ ಇರುವಂತೆ ನೋಡಿ ಕೊಳ್ಳ ಬೇಕೆಂದು ಸಲಹೆ ಇತ್ತರು.
ವಿದ್ಯಾರ್ಥಿ ಕ್ರೀಡಾ ನಿಧಿಗೆ ಯಾವುದೇ ಜಾತಿ, ಧರ್ಮ ಮತ್ತು ಲಿಂಗಬೇಧವಿಲ್ಲದೆ ಪ್ರತಿ ವಿದ್ಯಾರ್ಥಿ ತಲಾ 5 ರು. ಗಳನ್ನು ಸಲ್ಲಿಸಬೇಕು ಎಂದು ತಿಳಿಸಿದ ಅವರು ಈಬಗ್ಗೆ ದೈಹಿಕ ಶಿಕ್ಷಕರು ಅರಿವು ಮೂಡಿಸಬೇಕೆಂದು ತಿಳಿಸಿದರು.
ತಾಲೂಕು ದೈಹಿಕಶಿಕ್ಷಣ ಅಧಿಕಾರಿ ಕೆಂಪರಾಜು ಮಾತನಾಡಿ, ಹೋಬಳಿ ಹಂತದ ಶಾಲಾಮಕ್ಕಳ ಕ್ರೀಡಾಕೂಟದಲ್ಲಿ 8 ಲೈನಿನ ಟ್ರ್ಯಾಕ್ನಲ್ಲಿಯೇ ಓಡಿಸಿ ಅಭ್ಯಾಸ ಮಾಡಿಸಿ, ಪ್ರತಿಹಂತದ ಕ್ರೀಡಾಕೂಟ ದೈಹಿಕ ಶಿಕ್ಷಣ ಶಿಕ್ಷಕರ ಪಾಲಿನ ವೃತ್ತಿ ಹಬ್ಬ ಎಂದು ಶ್ರದ್ಧೆಯಿದ ಕೆಲಸ ಮಾಡಿ ಎಂದು ಸಲಹೆ ಇತ್ತರು.
ಚದುರಂಗದ ದಿನಾಚರಣೆ ಆಚರಿಸಿ ಮಕ್ಕಳಿಗೆ ಚೆಸ್ ಬಗ್ಗೆ ತಿಳಿವಳಿಕೆ ನೀಡಿ ಆಟವನ್ನು ಆಡಿಸಿ, ಕ್ರೀಡಾ ಸಾಹಿತ್ಯವಿದೆ. ಅದನ್ನು ಓದಲು ಹೇಳಿ ಅರ್ಥವಾಗದಿರುವುದರ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿದಾಗ ಅವರ ಮಾನಸಿಕ ಮತ್ತು ದೈಹಿಕ ವಿಕಸನದಲ್ಲಿ ಸಮತೋಲನೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಬಿ.ಕುಮಾರ್ ಮಾತನಾಡಿ, ಸಮಾನತೆ ಭಾವೈಕ್ಯತೆ ಕ್ರೀಡಾ ಮನೋಭಾವವನ್ನು ನಾವಲ್ಲದೇ ಬೇರೆ ಶಿಕ್ಷಕರು ಕಲಿಸಲಾರರು ನಮ್ಮ ವೃತ್ತಿಗೆ ಗೌರವ ತರುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು. ತಾಲೂಕು ಸಂಘದ ಅಧ್ಯಕ್ಷ ಶಿವರಾಮೇಗೌಡ, ವೈಟಿಹಳ್ಳಿಯ ಪರಶುರಾಂ, ಖಜಾಂಚಿ ಸುಧಾ, ಪ್ರದೀಪ್, ಹಿರೇಮಠ್, ರಾಮದಾಸ್,ಶಿವಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

