ಮುಡಾದ 5 ಕೋಟಿ ವಂಚನೆ ಹಗರಣ ಜಾಲದಲ್ಲಿ ಮಹಿಳಾ ಅಧಿಕಾರಿ ಕೈವಾಡ!?
ಕೆ.ಎನ್. ರವಿ
ಕ.ಪ್ರ.ವಾರ್ತೆ ಟಿ ಮಂಡ್ಯ ಟಿ ಜೂ.19
ಮಂಡ್ಯದ ಮೂಡಾಕ್ಕೆ ಸೇರಿದ 5 ಕೋಟಿ ವಂಚನೆ ಹಗರಣದ ಜಾಲದಲ್ಲಿ ಸೇರಿಕೊಂಡಿರುವ ಪ್ರಾಧಿಕಾರದ ಕ್ಯಾಷಿಯರ್ ನಾಗರಾಜ್ನನ್ನು ಬಂಧಿಸಿರುವ ಪೊಲೀಸರು ಮತ್ತೊಬ್ಬ ಮಹಿಳಾ ಅಧಿಕಾರಿಯೊಬ್ಬರ ಪಾತ್ರವೂ ಇದೆ ಎಂಬ ಶಂಕೆ ವ್ಯಕ್ತಪಡಿಸಿ, ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕುವ ಯತ್ನ ನಡೆಸಿದ್ದಾರೆ.
ಕ್ಯಾಷಿಯರ್ ನಾಗರಾಜ್ನನ್ನು ಕಳೆದ ಒಂದು ವಾರದಿಂದಲೇ ವಿಚಾರಣೆ ನಡೆಸಲಾಗುತ್ತಿತ್ತು. 5 ಕೋಟಿ ಹಣದ ವರ್ಗಾವಣೆ, ನಕಲಿ ಬಾಂಡ್ಗಳ ಬಗ್ಗೆ ಮಾಹಿತಿ ಗೊತ್ತಿದ್ದರೂ ಸಹ ಕ್ಯಾಷಿಯರ್ ಮಾತ್ರ ಯಾವುದೇ ಚಕಾರ ಎತ್ತಿರಲಿಲ್ಲ. ಕಚೇರಿ ದಾಖಲೆ ಪುಸ್ತಕಗಳಿಗೆ ಯಾವ ವ್ಯವಹಾರವನ್ನೂ ನಮೂದಿಸದೇ ಇರುವುದರ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು ಪೊಲೀಸರಿಗೆ ದೊರೆತ ನಂತರ ವಂಚನೆಯಲ್ಲಿ ನಾಗರಾಜ್ ಪಾತ್ರವೂ ಇದೆ ಎಂಬುದು ಗೊತ್ತಾಗದ ನಂತರ ಆತನನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರೆಸೆ “OÚ«ÚsÚ®ÚúڒOæQ ತಿಳಿಸಿದರು.
ಬಂಧಿತ ನಾಗರಾಜ್ನನ್ನು ಮಂಡ್ಯದ ಜೆ.ಎಂ.ಎಫ್.ಸಿ. ನ್ಯಾಯಲಯದ ಮುಂದೆ ಹಾಜರುಪಡಿಸಿದಾಗ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯವರ ಕಣ್ಣು: ಪ್ರಾಧಿಕಾರದ 5 ಕೋಟಿ ವಂಚನೆಯ ಹಗರಣ ಬಯಲಿಗೆ ಬರುತ್ತಿದ್ದಂತೆ ಕ್ಯಾಷಿಯರ್ ನಡವಳಿಕೆ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದಾಯಕ್ಕೆ ಮೀರಿ ಒಂದೂವರೆ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮನೆ, ಅದ್ಧೂರಿಯಾಗಿ ಮಗಳ ಮದುವೆ ಮಾಡಿಕೊಟ್ಟಿದ್ದು ಅಲ್ಲದೇ ಒಂದೂವರೆ ತಿಂಗಳ ಕಾಲ ಉತ್ತರ ಭಾರತದ ಪ್ರವಾಸ ಮಾಡಿ ಬಂದಿದ್ದ ನಾಗರಾಜ್ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದಾರೆ ಎಂದು ಗೊತ್ತಾಗಿದೆ. ಈ ಸಂಗತಿ ತಿಳಿದುಕೊಂಡ ಪೊಲೀಸರು ನಾಗಾರಾಜ್ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದರು.
ವಂಚಕರ ಜಾಲದಿಂದ ಸಾಕಷ್ಟು ಹಣ ಪಡೆದು, ಕಂಡೂ ಕಾಣದಂತೆ ಅವ್ಯವಹಾರಕ್ಕೆ ನೇರವಾಗಿ ನೆರವು ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಕ್ಯಾಷಿಯರ್ ನಾಗರಾಜ್, ಒಬ್ಬ ಲೆಕ್ಕ ಅಧಿಕಾರಿಯಾಗಿ ಪ್ರಾಧಿಕಾರದ ಲೆಕ್ಕಪತ್ರಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂಬ ಅಂಶವು ವಿಚಾರಣೆ ವೇಳೆ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅಲಹಾಬಾದ್ ಬ್ಯಾಂಕ್ನಲ್ಲಿ ಸುರಕ್ಷಿತವಾಗಿದ್ದ ಕೋಟಿಗಟ್ಟಲೆ ಹಣದಲ್ಲಿ 5 ಕೋಟಿ ಇಂಡಿಯನ್ ಬ್ಯಾಂಕ್ಗೆ ವರ್ಗಾಯಿಸುವ ಮುನ್ನ ಕ್ಯಾಷಿಯರ್ ಸಮಗ್ರವಾಗಿ ವಿಚಾರಣೆ ಮಾಡಬೇಕಿತ್ತು. ತಪ್ಪು ಕಂಡುಬಂದರೆ ಫೈಲ್ನಲ್ಲಿ ತನ್ನ ಅಭಿಪ್ರಾಯ ಬರೆದು ಬಚಾವ್ ಆಗಬಹುದಿತ್ತು. ಅಲ್ಲದೇ ಚೆಕ್ ಬರೆದು ಕೊಡುವ ಮುನ್ನ ಸರಿಯಾದ ರೀತಿಯಲ್ಲಿ ತಾನೇ ಬರೆದು ನೇರವಾಗಿ ಬ್ಯಾಂಕ್ ಹೋಗಿ ಕೊಟ್ಟಿದ್ದರೆ, ಹಣ ಠೇವಣಿಯಾಗುತ್ತಿತ್ತು. ಕೆಬ್ಬಳ್ಳಿ ಆನಂದ್ ಮತ್ತು ಸಹಚರರು ಪ್ರಾಧಿಕಾರದ ಕಚೇರಿಗೆ ಬಂದು ಬ್ಯಾಂಡ್ಗಳನ್ನು ನೀಡಿದಾಗ ಕ್ಯಾಷಿಯರ್ ಆದವನು ಪರಿಶೀಲನೆ ಮಾಡಬಹುದಿತ್ತು. ಇದ್ಯಾವುದನ್ನೂ ಮಾಡದೇ ನೇರವಾಗಿ ವಂಚಕರಿಗೆ ಸಹಕಾರ ನೀಡಿರುವುದು ಮೇಲು ನೋಟಕ್ಕೆ ಗೊತ್ತಾಗಿರುವ ಹಿನ್ನೆಲೆ ಅರಿತ ಪೊಲೀಸರು ಕ್ಯಾಷಿಯರ್ ನಾಗರಾಜ್ ಕೂಡ ವಂಚನೆಯಲ್ಲಿ ಜಾಲದಲ್ಲಿ ನೇರ ಪಾತ್ರ ವಹಿಸಿದ್ದಾರೆ ಎಂಬ ನಿರ್ಧಾರಕ್ಕೆ ಬಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಅಧಿಕಾರಿ ಪಾತ್ರ: ಮಂಡ್ಯ ಹಾಗೂ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಕೊಟ್ಯಂತರ ರು. ವಂಚನೆ ಪ್ರಕರಣದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಉನ್ನತ ಮೂಲಗಳು ಈ ವಿಷಯ ಖಚಿತಪಡಿಸಿದ್ದು, ಆ ಅಧಿಕಾರಿ ಯಾರು ಮತ್ತು ಅವರ ಪಾತ್ರ ಹೇಗೆ ಇದೆ ಎಂಬುದುರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈಗಾಗಲೇ ಬಂಧಿತರಾಗಿರುವ ಇಬ್ಬರು ಆಯುಕ್ತರ ಜೊತೆಯಲ್ಲೂ ಆ ಅಧಿಕಾರಿ ನಡೆಸಿರುವ ಮೊಬೈಲ್ ಸಂಭಾಷಣೆಗಳನ್ನು ಆಧರಿಸಿ ವಿಚಾರಣೆ ಮಾಡುವ ಅನಿವಾರ್ಯತೆ ಇದೆ. ಸಧ್ಯಕ್ಕೆ ಎಲ್ಲವೂ ತನಿಖೆ ಹಂತದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

