ಬೆಂಗಳೂರು ಗ್ರಾಮಾಂತರ

ವಿದ್ಯಾರ್ಥಿಗಳು ಚಟುವಟಿಯಿಂದಿದ್ದರೆ ಸಾಧನೆ ಸಾಧ್ಯ: ಶಿವಾಚಾರ್ಯಶ್ರೀ

Published On :

ನೆಲಮಂಗಲ: ವಿದ್ಯಾರ್ಥಿಗಳು ಪಾಠ ಮತ್ತು ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾದರೆ ಸದಾ ಚಟುವಟಿಕೆಯಿಂದ ಇದ್ದು ಪೌಷ್ಟಿಕ ಆಹಾರ ಮತ್ತು ಸೂಕ್ತ ವ್ಯಾಯಾಮ ಮಾಡುವುದರಿಂದ ಸಾಧನೆಗೆ ಅನುಕೂಲವಾಗುತ್ತದೆ ಎಂದು ಹೊನ್ನಮ್ಮಗವಿ ಮಠದ ಪೀಠಾಧ್ಯಕ್ಷ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ಶಿವಗಂಗೆಯ ಸಿದ್ಧಲಿಂಗ ಶಿವಾಚಾರ್ಯ ಕ್ರೀಡಾಂಗಣದಲ್ಲಿ ಪ್ರಾಥಮಿಕ ಶಾಲೆಗಳ ಸೋಂಪುರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ತಾವು ಸ್ಪಂದಿಸಿದ್ದು ಮತ್ತು ತಮ್ಮ ಸಾಧನೆಯಿಂದ ತೃಪ್ತಿಪಡಬೇಕು ಮುಂದೆ ನಿಮ್ಮ ಸಾಧನೆಯನ್ನು ಮುಂದುವರೆಸಿದರೆ ಗೆಲವು ಸಿಕ್ಕೇ ಸಿಗುತ್ತದೆ ಎಂದರು.
ಒಂದೇ ಆಟಕ್ಕೆ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಭಾಗವಹಿಸುತ್ತಿರಾದರೂ ಅದರಲ್ಲಿ ಜಯಸಿಗುವುದು ಒಬ್ಬರಿಗೆ ಮಾತ್ರ. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಸೋಲನ್ನೆ ಮೆಟ್ಟಿ ಗೆಲುವನ್ನು ಪಡಿಯಬೇಕು. ಸೋಂಪುರ ಭಾಗಕ್ಕೆ ಕ್ರೀಡಾಶಾಲೆ ಅಗತ್ಯವಿದ್ದು, ಅದಕ್ಕೆ ಹೊನ್ನಮ್ಮಗವಿ ಮಠದಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಶಿವಗಂಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಸ್.ಡಿ.ಸಿದ್ದರಾಜು ಮಾತನಾಡುತ್ತಾ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಲ್ಲಿ ವಿಚಿತ್ರ ಕಾಯಿಲೆಗಳು ಬರುತ್ತಿವೆ. ಕಾಯಿಲೆಗಳನ್ನು ದೂರ ಮಾಡಲು ವ್ಯಾಯಾಮ ಸಹಕಾರಿಯಾಗಿದೆ. ನಮ್ಮ ದೇಹವನ್ನು ಚಟುವಟಿಕೆಯಿಂದ ಇಡಲು ಪ್ರತಿದಿನ ತಾವು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಅಭ್ಯಾಸ ಮಾಡಿಕೊಳ್ಳಿ ಎಂದರು.
 ಹೊನ್ನೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಜಗದೀಶ್ ಚೌಧರಿ, ಹೆಗ್ಗುಂದ ತಾ.ಪ.ಸದಸ್ಯೆ ಭಾಗ್ಯಮ್ಮ, ಶಿಕ್ಷಣ ಸಂಯೋಜಕರಾದ ಟಿ.ಗಂಗರಾಜು, ಆಂಜಿನಪ್ಪ, ಎ.ಜಿ.ಗುರುಪ್ರಕಾಶ್, ಹೊನ್ನೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಪುಟ್ಟರುದ್ರಾರಾಧ್ಯ, ಶಿಕ್ಷಕ ಸಂಘದ ನಿರ್ದೇಶಕರಾದ ವಾಸುದೇವಮೂರ್ತಿ, ವಿ.ಎಸ್.ಎಸ್.ಎನ್. ಸಂಘದ ಅಧ್ಯಕ್ಷ ನಾಗರಾಜಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.