ಹೊಸ ಬಸ್ಸುಗಳಿಗೆ ಇಂದು ಚಾಲನೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಮತ್ತು ಬೆಂಗಳೂರಿನ ಕಾವೇರಿ ಭವನ ನಡುವೆ ಸಂಚರಿಸುವ ನೂತನ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಜೂ.3 ರ ಬೆಳಗ್ಗೆ 9 ಗಂಟೆಗೆ ಚಾಲನೆ ನೀಡಲಾಗುವುದು. ಚಿಕ್ಕಬಳ್ಳಾಪುರ ವಿಭಾಗದ ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಘಟಕದ ಮೂಲಕ ಈ ಬಸ್ಸುಗಳು ಸಂಚರಿಸಲಿವೆ. ಯಲಹಂಕ ಮಾರ್ಗವಾಗಿ ಸಂಚರಿಸುವ ಈ ಗ್ರಾಮಾಂತರ ಸಾರಿಗೆ ಬಸ್ಸುಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಲಿದ್ದಾರೆ. ಅನೇಕ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಚುನಾವಣೆಯಲ್ಲಿ ಹಣ ಸಾಗಣೆ: ಆರೋಪ
ಚನ್ನಪಟ್ಟಣ: ಈಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರ ಅಭ್ಯರ್ಥಿ ಪರವಾಗಿ ಸರ್ಕಾರಿ ವಾಹನದಲ್ಲಿ ಅಧಿಕಾರಿಗಳು ಹಣ ಸಾಗಾಣಿಕೆ ಮಾಡಿದ್ದಾರೆ ಎಂದು ಜೆಡಿಎಸ್ ಮುಖಂಡ ರಾಂಪುರ ರಾಜು ಆರೋಪಿಸಿದ್ದಾರೆ.
ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು ಯಾವ ಯಾವ ಅಧಿಕಾರಿಗಳು ಚುನಾವಣಾ ಅಕ್ರಮದಲ್ಲಿ ಪಾಲು ದಾರರಾಗಿದ್ದಾರೆ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಭಾರತರತ್ನ ಪ್ರಶಸ್ತಿ ನೀಡಲು ಆಗ್ರಹ
ಚನ್ನಪಟ್ಟಣ: ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ಗೆ ಭಾರತ ಸರ್ಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಅರಸು ಮಹಾಮಂಡಲಿ ಪತ್ರಿಕಾ ಕಾರ್ಯದರ್ಶಿ ಶಿವಶಂಕರ ರಾಜೇ ಅರಸು ಆಗ್ರಹಿಸಿದ್ದಾರೆ.
ಪ್ರಮಾಣ ಸ್ವೀಕಾರ: ಸಂವಿಧಾನಕ್ಕೆ ಅಪಚಾರ
ಚನ್ನಪಟ್ಟಣ: 14ನೇ ವಿಧಾನ ಸಭಾ ಅಧಿವೇಶನದಲ್ಲಿ ಶಾಸಕರು ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸದೆ ತಮಗಿಚ್ಛೆ ಬಂದತೆ ಪ್ರಮಾಣ ವಚನ ಸ್ವೀಕರಿಸಿರುವುದು ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದೆ ಎಂದು ತಾ.ಪಂ ಸದಸ್ಯ ಹನುಮಂತು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ
ಬೆಂಗಳೂರು: ರಂಗಶ್ರೀ ಕಲಾಸಂಸ್ಥೆಯು ದಿ.ದಯಾನಂದ ಸಾಗರ್ ಸ್ಮರಣಾರ್ಥ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧಾವಳಿಯನ್ನು ಜು.17ರಿಂದ 24ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ. ಪೌರಾಣಿಕ, ಸಾಮಾಜಿಕ ನಾಟಕಗಳು, ಭಾವಗೀತೆ, ಜಾನಪದ ಗೀತೆ, ಚಲನಚಿತ್ರ ಗೀತೆ, ಚಲನಚಿತ್ರ ನೃತ್ಯ, ಭರತನಾಟ್ಯ ಸ್ಪರ್ಧೆಗಳು ನಡೆಯಲಿದ್ದು, ಪಾರಿತೋಷಕ ಮತ್ತು ನಗದು ಬಹುಮಾನ ಹೊಂದಿರುತ್ತದೆ. ಪ್ರವೇಶಪತ್ರ ಪಡೆಯಲು ಜೂ.15 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗೆ ನಾಗರಾಜ್ ಕೆ.ಎಸ್.ಆರ್.ಟಿ.,- 9845398006, 9480217134, 9341251320. ನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

