ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಮಕ್ಕಳ ದಾಖಲಾತಿ ಸ್ಥಗಿತ
ಕ.ಪ್ರ. ವಾರ್ತೆ ಸೂಲಿಬೆಲೆ ಜೂ. 3
ಈ ಹಿಂದಿನ ಸರ್ಕಾರ 2013-14 ಸಾಲಿಗೆ ಮಂಜೂರು ಮಾಡಿದ್ದ ರಾಜ್ಯದ 74 ವಸತಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳಿಲ್ಲ ಎಂಬ ನೆಪದಲ್ಲಿ ಸರ್ಕಾರ ಸ್ಥಗಿತಕ್ಕೆ ಸೂಚಿಸಿದ್ದು, ಕೌನ್ಸೆಲಿಂಗ್ ನಡೆದು, ದಾಖಲಾತಿ ವೇಳೆಯಲ್ಲಿ ಹೊರ ಬಿದ್ದ ಈ ಆದೇಶಕ್ಕೆ ಪೋಷಕರ ವರ್ಗದವರಿಂದ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಗೆ ಒಂದು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮಂಜೂರಾಗಿದ್ದು, ಈ ಶಾಲೆಗೆ ದಾಖಲಾಗಲು ರಾಜ್ಯಾದ್ಯಂತ ಸೂಚಿತ ಕೇಂದ್ರಗಳಲ್ಲಿ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎದುರಿಸಿದ್ದರು. ಉತ್ತಮ ಅಂಕಪಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೇ10 ರಂದು ದೇವನಹಳ್ಳಿಯಲ್ಲಿ ಕೌನ್ಸೆಲಿಂಗ್ ನಡೆದು ಅರ್ಹತೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಮೇ ತಿಂಗಳ ಕೊನೆ ವಾರದಲ್ಲಿ ದಾಖಲಾತಿಯಾಗುವಂತೆ ಸೂಚಿಸಲಾಗಿತ್ತು. ಇದರಂತೆ ಸೂಲಿಬೆಲೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದರು. ಮೇ 28 ರಂದು ಸರ್ಕಾರ ಮೂಲ ಸೌಕರ್ಯಗಳಿಲ್ಲ ಎಂಬ ನೆಪದಿಂದ ದಾಖಲಾತಿ ಪ್ರಕ್ರಿಯೆನ್ನು ಸ್ಥಗಿತಗೊಳಿಸುವಂತೆ ಮೌಖಿಕವಾಗಿ ಸೂಚಿಸಿ ಮೇ 31 ರಂದು ಲಿಖಿತವಾಗಿ ಆದೇಶ ನೀಡಿ ದಾಖಲಾತಿಯನ್ನು ಮಂದೂಡಿದೆ. ಹಾಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಅಕ್ಕಪಕ್ಕದ ವಸತಿ ಶಾಲೆಗಳಲ್ಲಿ ಪೋಷಕರ ಒಪ್ಪಿಗೆ ಮೇರೆಗೆ ದಾಖಲಾತಿ ಮಾಡಿಸಬಹುದೆಂದು ಹೇಳಿ ವಸತಿ ಶಾಲೆಗಳಲ್ಲಿ ಓದುವ ಕನಸು ಕಂಡು ಸ್ವರ್ಧಾತ್ಮಕ ಪರೀಕ್ಷೆ ಮತ್ತು ಕೌನ್ಸೆಲಿಂಗ್ ಎದುರಿಸಿದ್ದ ವಿದ್ಯಾರ್ಥಿಗಳಿಗೀಗ ನಡು ನೀರಿನಲ್ಲಿ ಕೈ ಬಿಟ್ಟಿದೆ.
ಆಕ್ರೋಶ: ಆಯ್ಕೆಯಾಗಿರುವ ವಿದ್ಯಾರ್ಥಿ ಮತ್ತು ಪೋಷಕರು ಸೋಮವಾರ ಸೂಲಿಬೆಲೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ದಾಖಲಾಗಲು ಬರುತ್ತಿದ್ದಂತೆ ಸರ್ಕಾರ ಸ್ಥಗಿತ ಆದೇಶದ ವಿಚಾರ ಹೇಳಲು ಧೈರ್ಯ ಸಾಲದೆ ಶಿಕ್ಷಕರು, ಸ್ವಲ್ಪ ದಿನ ಬಿಟ್ಟು ಬನ್ನಿ, ಫೋನ್ ಮಾಡ್ತೆವೇ.ಇತ್ಯಾದಿ ಸಬೂಬು ಮಾತುಗಳನ್ನು ಹೇಳಿದರು. ಕೊನೆಗೆ ಮುಂದೂಡಿಕೆಯ ವಿಚಾರ ಕೇಳಿ, ಸರ್ಕಾರ ಮಕ್ಕಳ ಶೈಕ್ಷಣಿಕ ಭವಿಷ್ಯದ ಜೋತೆ ಚಲ್ಲಾಟವಾಡುತ್ತಿದೆ. ತಮ್ಮಗಿಷ್ಟ ಬಂದಂತೆ ಆದೇಶಗಳನ್ನು ನೀಡಿ ಗ್ರಾಮೀಣ ವಿದ್ಯಾರ್ಥಿಗಳ ಕನಸನ್ನು ಕಸಿಯುತ್ತಿದೆ. ಇಷ್ಟು ಮಾತ್ರಕ್ಕೆ ಸ್ವರ್ಧಾತ್ಮಕ ಪರೀಕ್ಷೆ, ಕೌನ್ಸೆಲಿಂಗ್ ಮಾಡಿ ವಿದ್ಯಾರ್ಥಿಗಳ ಆಯ್ಕೆ ಯಾಕೆ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

