ಕರವೇಯಿಂದ ಇಂದು ರಕ್ತದಾನ ಶಿಬಿರ
ರಾಮನಗರ: ಕರ್ನಾಟಕ ರಕ್ಷಣಾ ವೇದಿಕೆಯ ರಾಮನಗರ ಜಿಲ್ಲಾ ಘಟಕವು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 47ನೇ ಹುಟ್ಟುಹಬ್ಬದ ಪ್ರಯಕ್ತ ಜೂ.10ರ ಬೆಳಗ್ಗೆ 9ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಶಿಬಿರವನ್ನು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಉದ್ಘಾಟಿಸುವರು. ವೇದಿಕೆ ಜಿಲ್ಲಾಧ್ಯಕ್ಷ ಬಿ.ಶ್ರೀಧರ್ ಹೊಸೂರು ಅಧ್ಯಕ್ಷತೆ ವಹಿಸುವರು. ನಗರಸಭೆ ಆಯುಕ್ತ ಯಶವಂತ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಮರಿದೇವರು, ಕೆ.ಶೇಷಾದ್ರಿ, ನಗರಸಭೆ ಸದಸ್ಯ ಪಿ. ರವಿಕುಮಾರ್ ಭಾಗವಹಿಸುವರು. 100 ಬಾರಿ ರಕ್ತದಾನ ಮಾಡಿರುವ ಎಸ್.ಟಿ. ಕಾಂತರಾಜ್ ಪಟೇಲ್ ಅವರನ್ನು ಸನ್ಮಾನಿಸಲಾಗುವುದು.
ತ್ಯಾಗರಾಜಸ್ವಾಮಿ ಆರಾಧನೆ ಇಂದು
ದೇವನಹಳ್ಳಿ: ತಾಲೂಕು ಸವಿತಾ ಸಮಾಜದವರಿಂದ ತ್ಯಾಗರಾಜಸ್ವಾಮಿ ಆರಾಧನೆ ಅಂಗವಾಗಿ ಶ್ರೀ ವೇಣುಗೋಪಾಲಸ್ವಾಮಿ ಉತ್ಸವ ಮತ್ತು ಸಂಜೆ 6 ಗಂಟೆಗೆ ಹಳೇ ಪುರಸಭೆ ಎದುರು ನಾದಸ್ವರ ಕಚೇರಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ನಾದಸ್ವರ ವಿದ್ವಾನ್ ಎನ್.ಎಂ. ಕೃಷ್ಣ, ಎನ್.ಷಣ್ಮುಗಂ, ಡೋಲ್ ವಿದ್ವಾನ್ ಎನ್.ಕೆ. ಮಂಜುನಾಥ್ ಹಾಗೂ ಡೋಲ್ ವಿದ್ವಾನ್ ಕೊತ್ತನೂರು ವೆಂಕಟರಾಜು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ ರೌಡಿ ಮನೆ ಮೇಲೆ ದಾಳಿ
ಬೆಂಗಳೂರು: ಭಾನುವಾರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ನಗರದ ವಿವಿಧ ಬಡಾವಣೆಗಳಲ್ಲಿರುವ ರೌಡಿಗಳ ಮನೆ ಮೇಲೆ ದಾಳಿ ನಡೆಸಿ, ಅವರನ್ನು ಸಿಸಿಬಿ ಕಚೇರಿಗೆ ಕರೆತಂದು ಪೆರೇಡ್ ಮಾಡಿದ್ದಾರೆ. ಸಿಸಿಬಿ ವಿಭಾಗದ ಡಿಸಿಪಿ ದೇವರಾಜು ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ 45ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಟೆಕಿಗೆ ಆಟೋ ಚಾಲಕ ಪಂಗನಾಮ
ಬೆಂಗಳೂರು: ಆಟೋ ಚಾಲಕನೊಬ್ಬ ತನ್ನ ಸ್ನೇಹಿತನ ಜತೆ ಸೇರಿ ಪ್ರಯಾಣಿಕನನ್ನು ಬೆದರಿಸಿ ಸುಲಿಗೆ ಮಾಡಿರುವ ಘಟನೆ ಕಾಟನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ದೆಹಲಿ ಮೂಲದ ಪ್ರತಾಪ್ ಸಿಂಗ್ ಎಂಬವರಿಂದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಇಬ್ಬರೂ ಪರಾರಿಯಾಗಿದ್ದಾರೆ. ಪ್ರತಾಪ್ ಅವರು ನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಮಲ್ಲೇಶ್ಪಾಳ್ಯದಲ್ಲಿ ವಾಸಿಸುತ್ತಿದ್ದಾರೆ. ಕೆಲಸದ ನಿಮಿತ್ತ ಶನಿವಾರ ರಾತ್ರಿ ಬ್ರಿಗೇಡ್ ರಸ್ತೆಗೆ ಬಂದಿದ್ದರು. ಕೆಲಸ ಮುಗಿಸಿ ತಡರಾತ್ರಿ ಬ್ರಿಗೇಡ್ ರಸ್ತೆಯಿಂದ ಮನೆಗೆ ಹೋಗಲು ಆಟೋ ಹತ್ತಿದಾಗ ಈ ಘಟನೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

