ಕೈಮಗ್ಗ ತರಬೇತಿ ಪಡೆದ ಮಹಿಳೆಯರಿಗೆ ಚೆಕ್ ವಿತರಣೆ
ದೇವನಹಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣ ಸಮೀಪವಿರುವ ಆನಂದಕುಮಾರ್ ಚಾರಿಟಬಲ್ ಟ್ರಸ್ಟ್ನವರು ಹುಬ್ಬಳ್ಳಿ ಪ್ರಧಾನ ಕಚೇರಿ ಇರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ 20 ಮಂದಿ ಮಹಿಳೆಯರಿಗೆ ಕೈಮಗ್ಗ ಮತ್ತು ನೇಯ್ಗೆ ತರಬೇತಿಯನ್ನು ಕಳೆದ ಆರು ತಿಂಗಳಿನಿಂದ ನೀಡಿದ್ದು ತರಬೇತಿ ಪಡೆದ ಮಹಿಳಾ ಫಲಾನುಭವಿಗಳಿಗೆ (ಪ್ರತಿಯೊಬ್ಬರಿಗೆ 12 ಸಾವಿರ ರು.) ಚೆಕ್ಗಳ ವಿತರಣಾ ಸಮಾರಂಭ ಸೋಮವಾರ ಆಯೋಜಿಸಿದ್ದರು.
ಸಮಾರಂಭದ ಉದ್ಘಾಟನೆಯನ್ನು ತಹಸೀಲ್ದಾರ್ ಡಾ.ವೆಂಕಟರಾಜು ನೆರವೇರಿಸಿ ಹಿಂದಿನ ದಿನಗಳಲ್ಲಿ ಮನುಷ್ಯರು ಮಾಡುವ ವೃತ್ತಿಯಿಂದ ಇಂಥಹ ಜಾತಿಯೆಂದು ಗುರುತಿಸಲ್ಪಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಯಾವ ಜಾತಿಯವರಾದರೂ ತನಗಿಷ್ಟಬಂದ ವೃತ್ತಿಯನ್ನು ಮಾಡಬಹುದಾಗಿದೆ. ಮಧ್ಯಮ ವರ್ಗದ ಹಾಗೂ ಬಡ ಯುವತಿಯರು ಇಂತಹ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದರೆ ಕೆಲಸ ಪಡೆಯಬಹುದಾಗಿದೆ. ಅಲ್ಲದೆ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ ಪಡೆದು ಸ್ವಂತವಾಗಿ ಕೈಮಗ್ಗ ಆರಂಭಿಸಬಹುದಾಗಿದೆ ಎಂದರು.
ಓರಿಯಂಟಲ್ ಬ್ಯಾಂಕ್ ಮ್ಯಾನೇಜರ್ ಸೋಮೇಶ್ವರರಾವ್ ಮಾತನಾಡಿ ಎಲ್ಲ ತರಬೇತಿ ಪಡೆದ ಮಹಿಳೆಯರಿಗೆ ಸರ್ಕಾರದಿಂದ ಕೆಲಸ ದೊರೆಯುವುದು ಸಾಧ್ಯವಿಲ್ಲ, ಇಂತಹ ತರಬೇತಿ ಪಡೆದವರು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ಪಡೆದು ಸ್ವಂತ ಉದ್ಯಮ ಆರಂಭಿಸಿ ತಮ್ಮ ಕುಟುಂಬ ನಿರ್ವಹಣೆ ಮಾಡಬಹುದಾಗಿದೆ ಎಂದರು. ಹಿರಿಯರಾದ ಮುನಿಕದಿರಪ್ಪ ಮಾತನಾಡಿದರು. ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಸ್ವಾಗತ ಕೋರಿ, ಮುಂದಿನ ಕೆಲವೇ ದಿನಗಳಲ್ಲಿ ಮಹಿಳೆಯರಿಗೆ ಉತ್ತಮ ತರಬೇತುದಾರರಿಂದ ಹೊಲಿಗೆ ತರಬೇತಿ ನೀಡಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

