ಬೆಂಗಳೂರು ಗ್ರಾಮಾಂತರ

ವಶಕ್ಕೆ ತೆಗೆದುಕೊಂಡ ಹಣ ವಾರಸುದಾರರಿಗೆ ವಾಪಸ್

Published On :

ನೆಲಮಂಗಲ: ಮೇ 5ರಂದು ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ  ನೆಲಮಂಗಲ ಚೆಕ್ ಪೊಸ್ಟ್ ಬಳಿ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಗೆ  ದಾಖಲೆ  ರಹಿತವಾಗಿ ಸಾಗಿಸುತ್ತಿದ್ದ ಒಂದು ಕೋಟಿ ಎಪ್ಪತ್ತು  ಲಕ್ಷ (1.70 ಕೋಟಿ) ರು.ಗಳನ್ನು ವಶಕ್ಕೆ ಪಡೆದುಕೊಂಡು ನೆಲಮಂಗಲ ಖಜಾನೆಯಲ್ಲಿರಿಸಿತ್ತು.
ಈಗ ವಾರಸುದಾರರು  ದಾಖಲೆ ಸಮೇತ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಬೆಂಗಳೂರಿನ ಮತ್ತಿಕೆರೆಯ ಎಕ್ಸೀಸ್ ಬ್ಯಾಂಕ್‌ನವರು ಈ ಹಣವನ್ನು ಬೆಂಗಳೂರಿನಿಂದ  ತುಮಕೂರಿನ ಎ.ಟಿ.ಎಂ.ಗಳಿಗೆ ತುಂಬಲು ಹಣ ಸಾಗಿಸುತ್ತಿದ್ದಾಗ ಚುನಾಣೆಯಲ್ಲಿ ಅಕ್ರಮವಾಗಿ ಹಣ ಮತ್ತು ಇತರೆ ವಸ್ತುಗಳನ್ನು ತಪಾಸಣೆ ಮಾಡುತ್ತಿದ್ದ ತಂಡವು  ಈ ಹಣ ಸಾಗಿಸುತ್ತಿದ್ದ ಕಾರುಗಳನ್ನು ತಡೆದು ಪರಿಶೀಲಿಸಿದಾಗ ಕಂಡು ಬಂದ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದರಿಂದ ಚುನಾವಣೆ ಕರ್ತವ್ಯ ನಿರತ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಹಣವನ್ನು ಪೊಲೀಸರ ವಶಕ್ಕೆ ನೀಡಿದ್ದರು.
ಹಣವನ್ನು ನೆಲಮಂಗಲ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿತ್ತು. ಈಗ ಹಣದ ವಾರಸುದಾರರು ಸೂಕ್ತ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದು ದಾಖಲೆ ಪರಿಶೀಲಿಸಿ ಖಾತರಿಪಡಿಸಿಕೊಂಡ ಗ್ರಾಮಾಂತರ ಪೊಲೀಸರು ಮತ್ತಿಕೆರೆಯ ಎಕ್ಸೀಸ್ ಬ್ಯಾಂಕ್‌ನವರಿಗೆ ಹಣವನ್ನು ವಾಪಸ್ ನೀಡಿದರು.
ಚುನಾವಣೆ ಮುಗಿದ ಒಂದು ತಿಂಗಳು ಕಳೆದ ಮೇಲೆ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಆಸ್ಪದವಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.