24 ರಿಂದ ಸೈನಿಕರ ಹುದ್ದೆ ಭರ್ತಿ
ರಾಮನಗರ: ಯುನಿಟೆಡ್ ಹೆಡ್ ಕ್ವಾರ್ಟರ್ ಕೋಟ ಭರ್ತಿ ಮಾಡಲು ಎಎಂಸಿ ಸೆಂಟರ್ ಮತ್ತು ಕಾಲೇಜು ಲಖ್ನೋದಲ್ಲಿ ಜೂ.24ರಿಂದ ಸೈನಿಕರ, ಮಾಜಿ ಸೈನಿಕರ ಯುದ್ಧ ವಿಧವೆಯರ, ವಿಧವೆಯರ ಮಕ್ಕಳು ಹಾಗೂ ಸೇವಾನಿರತ ಸೈನಿಕರ ಸ್ವಂತ ತಮ್ಮಂದಿರ ಭರ್ತಿ ನಡೆಯಲಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಈ ಭರ್ತಿಯ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.080-25588714 ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ರುಡ್ಸೆಟ್ನಿಂದ
ವಿವಿಧ ತರಬೇತಿ
ರಾಮನಗರ: ನೆಲಮಂಗಲ ತಾಲೂಕಿನ ಅರಿಶಿನಕುಂಟೆಯ ರುಡ್ಸೆಟ್ ಸಂಸ್ಥೆಯು ಬೆಂಗಳೂರು ಗ್ರಾಮಾಂತರ, ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತವಾಗಿ ಮೊಬೈಲ್ ಸರ್ವಿಸ್ ತರಬೇತಿ(30 ದಿನಗಳು), ಕಂಪ್ಯೂಟರ್ ಟ್ಯಾಲಿ ತರಬೇತಿ(30 ದಿನಗಳು), ಗೃಹೋಪಯೋಗಿ ವಿದ್ಯುತ್ ಉಪಕರಣ ದುರಸ್ತಿ, ತರಬೇತಿ (30 ದಿನಗಳು ಯುವಕರಿಗಾಗಿ), ದ್ವಿಚಕ್ರ ವಾಹನ ರಿಪೇರಿ ತರಬೇತಿ(ಯುವಕರಿಗೆ 30 ದಿನಗಳು), ಸಿದ್ಧ ಉಡುಪು ತಯಾರಿಕೆ ತರಬೇತಿ(ಯುವತಿಯರಿಗೆ 21 ದಿನಗಳು), ಎಂಬ್ರಾಯಿಡರಿ ಮತ್ತು ಫ್ಯಾಬ್ರಿಕ್ ಕೇಂಟಿಂಗ್ ತರಬೇತಿ (ಯುವತಿಯರಿಗೆ 15 ದಿನಗಳು), ಬ್ಯೂಟಿಷಿಯನ್ ತರಬೇತಿ(ಯುವತಿಯರಿಗೆ 30 ದಿನಗಳು), ಲೈಟಿಂಗ್ ತರಬೇತಿ(30 ದಿನಗಳು ಯುವಕ, ಯುವತಿಯರಿಗಾಗಿ), ಹೈನುಗಾರಿಕೆ ಮತ್ತು ಎರೆಹಳು ಗೊಬ್ಬರ ತಯಾರಿಕೆ ತರಬೇತಿ(10 ದಿನಗಳು ಯುವಕ, ಯುವತಿಯರಿಗಾಗಿ)ಗಳನ್ನು ಹಮ್ಮಿಕೊಳ್ಳಲಾಗಿದೆ. 18 ರಿಂದ 45 ವರ್ಷದೊಳಗಿನ, ಕನ್ನಡ ಓದಲು ಬರೆಯಲು ಬಲ್ಲ ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ನಿರ್ದೇಶಕರು, ರುಡ್ ಸೆಟ್ಸಂಸ್ಥೆ, ಅರಿಶಿನಕುಂಟೆ-ಅಂಚೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾ.ಜಿಲ್ಲೆ, ಈ ವಿಳಾಸಕ್ಕೆ ಸಲ್ಲಿಸಬಹುದು. ದೂ.080-27728166 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

