ಬೆಂಗಳೂರು ಗ್ರಾಮಾಂತರ

ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ; ಸಂತೋಷ್ ಹೆಗ್ಡೆ ವಿಷಾದ

Published On :

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದು ಆತಂಕದ ಸಂಗತಿ. ಅಲ್ಲಿಂದ ನೇಮಕಗೊಳ್ಳುವ ಅಧಿಕಾರಿಗಳಿಂದ ಯಾವ ರೀತಿಯ ಸೇವೆ ನಿರೀಕ್ಷಿಸಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿ ದ್ದಾರೆ.
ಉದಯಭಾನು ಕಲಾಸಂಘ ತನ್ನ 48ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ 'ಭವಿಷ್ಯದ ಕರ್ನಾಟಕ' ಕುರಿತ ತಿಂಗಳ ಚಿಂತನ ಮಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಪಿಎಸ್ಸಿ ನೇಮಕ ಪ್ರಕ್ರಿಯೆಯಲ್ಲಿ ಸಹಾಯಕ ಹುದ್ದೆಗೆ ರು. 80 ಲಕ್ಷ ಲಂಚ ಕೇಳುತ್ತಿದ್ದಾರೆ ಎಂದರೆ ಅಲ್ಲಿನ ಭ್ರಷ್ಟಾಚಾರದ ಆಳ ಎಷ್ಟು ಎಂಬುದನ್ನು ಅರಿಯಲು ಸಾಧ್ಯ.
ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕಾದ ಹುದ್ದೆಯ ಆರಂಭವೇ ಭ್ರಷ್ಟಾಚಾರದಿಂದ ಆರಂಭಗೊಂಡಲ್ಲಿ ಮುಂದಿನ ಅವರ ಸೇವೆ ಹೇಗಿರುತ್ತದೆ ಎಂದು ಈಗಲೇ ಊಹಿಸಬಹುದು ಎಂದರು.
ಆಳುವವರು ಪ್ರಾಮಾಣಿಕರಾಗದಿದ್ದಲ್ಲಿ: ಪುರಾಣ ಕಾಲದಿಂದಲೂ ಭ್ರಷ್ಟಾಚಾರ ಜಾರಿಯಲ್ಲಿದೆ. 1960 ದಶಕಗಳಲ್ಲಿ ಲಕ್ಷಗಳ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ, ಇದೀಗ ಲಕ್ಷ ಕೋಟಿ ಮೊತ್ತದಲ್ಲಿ ನಡೆಯುತ್ತಿದೆ ಎಂದರು.
ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿರುವ 5 ಸಾವಿರ ಗ್ರಾಮಗಳು, 500 ನಗರಗಳಿದ್ದೂ, ಎಲ್ಲರ ಬದುಕು ಕೂಡ ನರಕವಾಗುತ್ತಿದೆ. ಗ್ರಾಮಗಳಲ್ಲಿ ಸೌಲಭ್ಯಗಳ ಕೊರತೆಯಿದ್ದರೆ, ನಗರದಲ್ಲಿರುವ ಸೌಲಭ್ಯಗಳು ಸಾಲುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.