ಅಸಮಾನತೆ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಬಸವಣ್ಣ: ಷಣ್ಮುಗಪ್ಪ
ದೇವನಹಳ್ಳಿ: ತಾಲೂಕು ವೀರಶೈವ ಸಮಾಜದವರಿಂದ ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ 2012-13 ನೇ ಸಾಲಿನ ವಾರ್ಷಕ ಮಹಾಸಭೆ ಇಲ್ಲಿನ ಶ್ರೀ ಸಿದ್ದೇಶ್ವರ ಸ್ವಾಮಿ ಕಲ್ಯಾಣ ಮಂದಿರದಲ್ಲಿ ವಿಜಯಪುರ ಬಸವ ಕಲ್ಯಾಣ ಮಠದ ಶ್ರೀ ಮಹದೇವ ಸ್ವಾಮೀಜಿ ಸಾನಿಧ್ಯದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಬಯಪ ಮಾಜಿ ಅಧ್ಯಕ್ಷ ಷಣ್ಮುಗಪ್ಪ ನೆರವೇರಿಸಿ ಬಸವಣ್ಣನವರ ಸಮಾಜದ ಅಸಮಾನತೆಯ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಪುರುಷರಾಗಿದ್ದರು. 12 ನೇ ಶತಮಾನದಲ್ಲಿ ಬಸವಣ್ಣನವರ ಅನೇಕ ಕಾಯಿದೆಗಳನ್ನು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿಕೊಂಡರು ಎಂದರು.
ವಿಶ್ವಗುರು: ದೊಡ್ಡಬಳ್ಳಾಪುರದ ಸರ್ಕಾರಿ ಕಾಲೇಜಿನ ಉಪನ್ಯಾಸಕರಾದ ಕೆ.ಮಹಾಲಿಂಗಯ್ಯರವರು ಮಾತನಾಡಿ ಬಸವಣ್ಣನವರು ಆಧ್ಯಾತ್ಮಿಕ ಚೈತನ್ಯವಾಗಿದ್ದರು ಮತ್ತು ಧಾರ್ಮಿಕ ಗುರುವಾಗಿರದೆ ಇಡೀ ವಿಶ್ವಕ್ಕೆ ಗುರುವಾಗಿದ್ದರು. ಕಂದಾಚಾರ ಮತ್ತು ಮೌಢ್ಯದ ವಿರುದ್ಧ ಹೋರಾಡಿದ ಮಹಾಪುರುಷ ಅಲ್ಲದೆ ದನಿ ಇಲ್ಲದವರಿಗೆ ದನಿಯಾದ ಮಹಾ ಮಾನವತಾವಾದಿಯಾಗಿದ್ದರು. ಬಸವಣ್ಣನವರು ವಿಶ್ವ ಗುರು ಎಂದರಲ್ಲದೆ ತಂದೆ ತಾಯಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಯಲ್ಲಿ ಬಸವಣ್ಣನವರ ವಚನಗಳ ಬಗ್ಗೆ ತಿಳಿ ಹೇಳಿ ಎಂದರು. ಲಿಂಗ ಕಟ್ಟಿದವರೆಲ್ಲ ಲಿಂಗಾಯಿತರೇ ಆಗಿರುತ್ತಾರೆ. ವೀರಶೈವ ಸಮಾಜದ ಎಲ್ಲ ಒಳ ಪಂಗಡಗಳು ಒಗ್ಗಟ್ಟಾಗಿ ಬಂದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಮತ್ತು ಎಲ್ಲ ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಭಾವನೆ ನಮ್ಮಲ್ಲಿದೆ ಎಂದರು.
ಎಂ.ಬಿ. ತಿಪ್ಪಣ್ಣ ಅವರು ಮಾತನಾಡಿ, ವೀರಶೈವ ಅಥವ ಲಿಂಗಾಯಿತ ಸಮಾಜದ ಪ್ರತಿಯೊಬ್ಬರು ಧರ್ಮಕ್ಷೇತ್ರವಾದ ಕೂಡಲ ಸಂಗಮಕ್ಕೆ ಭೇಟಿ ನೀಡಿ ಎಂದರು.
ಸಮಾರಂಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಪುಟ್ಟರಾಜು, ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ತಿಂಡ್ಲು ಬಸವರಾಜು ಮಾತನಾಡಿದರು. ಇದೇ ಸಂಧರ್ಭದಲ್ಲಿ ದೇವನಹಳ್ಳಿ ಪುರಸಭೆ ಸದಸ್ಯರಾದ ವೈ.ಸಿ. ಸತೀಶ್ಕುಮಾರ್, ವಿಜಯಪುರ ಪುರಸಭೆಯ ಸದಸ್ಯರಾದ ಭಾಸ್ಕರ್ರನ್ನು ಶ್ರೀ ಮಹದೇವಸ್ವಾಮೀಜಿ ಸನ್ಮಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

