ಬೆಂಗಳೂರು ಗ್ರಾಮಾಂತರ

'ಸೈಟ್ ಕಾಪಾಡಲು ಸಾಹಸ ಪಡಬೇಕು'

Published On :

ನೆಲಮಂಗಲ: ಬಡವರು ಕಷ್ಟಪಟ್ಟು ಹಣ ನೀಡಿ ನಿವೇಶನ ಕೊಂಡಿದ್ದರೂ ಸಹ ಅದನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಪರಿಸ್ಥಿತಿ ಬಂದಿದೆ ಎಂದು ನೊಂದ ನಿವೇಶನದಾರರಾದ ಬೈರೇಗೌಡ ಹೇಳಿದರು. ಅವರು ಪಟ್ಟಣದ ಪ್ರಸನ್ನಾಂಜನೇಯ ಟ್ರಸ್ಟ್‌ನ ಬಡಾವಣೆಯಲ್ಲಿ ನೊಂದ ನಿವೇಶನದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ 20 ವರ್ಷಗಳ ಹಿಂದೆ ಸರ್ಕಾರವು ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಕಾನೂನು ಬದ್ಧವಾಗಿ  ನಿವೇಶನವನ್ನು ನಾವು ಕ್ರಮಬದ್ಧವಾಗಿ ಖರೀದಿಸಿ ಕ್ರಯಪತ್ರ ಮಾಡಿಸಿಕೊಂಡಿರುವುದಾಗಿ ತಿಳಿಸಿದರು. ನಾವು ನಿವೇಶನಗಳನ್ನು ಉಳಿಸಿಕೊಳ್ಳಲು ಕಾನೂನು ಹೋರಾಟ ಅತ್ಯಗತ್ಯ. ಈ ಬಡಾವಣೆಯಲ್ಲಿ ನಿವೇಶನ ಪಡೆದಿರುವ ಪ್ರತಿಯೊಬ್ಬರು ಒಗ್ಗೂಡಿ ಹೋರಾಟ ನಡೆಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಿದರು. ಸಭೆಯಲ್ಲಿ ನಿವೇಶನದಾರರಾದ ಹನುಮಂತಪ್ಪ, ರಾಜಣ್ಣ, ಶಿವಣ್ಣ, ರುದ್ರೇಶ್ ಸೇರಿದಂತೆ  ಬಡಾವಣೆ ನಿವೇಶನದಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.