ಬೆಂಗಳೂರು ಗ್ರಾಮಾಂತರ

ಹೆಚ್ಚಿಗೆ ಗಳಿಸಿದ್ದನ್ನು ಸಾಮಾಜಿಕ ಕಾರ್ಯಗಳಿಗೆ ನೀಡಿ: ಅಪ್ಪಣ್ಣ

Published On :


ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ 139 ನೆಯ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಇಲ್ಲಿನ ಲಯನ್ಸ್ ಸೇವಾಭವನದಲ್ಲಿ ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ ಮತ್ತು ಅಕ್ಷಿಜೋಡಣಾ ಕೇಂದ್ರ ಸಹಕಾರದೊಂದಿಗೆ ಗುರುವಾರ ಆಯೋಜಿಸಲಾಗಿತ್ತು.
ಶಿಬಿರದ ಉಧ್ಘಾಟನೆಯನ್ನು ಜಾಲಿಗೆಯ ಸಮಾಜ ಸೇವಕರಾದ ಕುಂದಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಪಣ್ಣ ನೆರವೇರಿಸಿ ನಿರಂತರವಾಗಿ ನೇತ್ರಚಿಕಿತ್ಸಾ ಶಿಬಿರಗಳನ್ನು ಆಯೋಜಿಸುತ್ತಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿ ಆರ್ಥಿಕವಾಗಿ ಅನುಕೂಲವಾಗಿರುವ ಪ್ರತಿಯೊಬ್ಬರು ತಾವು ಗಳಿಸಿದ್ದರಲ್ಲಿ ಸ್ವಲ್ಪ ಭಾಗ ಇಂತಹ ಸೇವಾ ಸಂಸ್ಥೆಗಳಿಗೆ ನೀಡಿದರೆ ಸೇವಾ ಕಾರ್ಯಗಳ ಮೂಲಕ ಅನೇಕ ಬಡಜನರಿಗೆ ಉಪಯೋಗವಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಬೆಟ್ಟೇನಹಳ್ಳಿಯ ಸಮಾಜ ಸೇವಕರಾದ ಬಿ.ಎಚ್. ನಾಗರಾಜ್ ಮಾತನಾಡಿ ಈ ಸಂಸ್ಥೆಯವರು ಕೇವಲ ನೇತ್ರ ಚಿಕಿತ್ಸಾ ಶಿಬಿರ ಮಾತ್ರವಲ್ಲದೆ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ತರಬೇತಿ ಉಚಿತ ಹೋಮಿಯೋಪತಿ ಶಿಬಿರ ನಡೆಸುತ್ತಿರುವ ಈ ಸಂಸ್ಥೆಯವರಿಗೆ ಅಭಿನಂದನೆ ಸಲ್ಲಿಸಿ ಇಂತಹ ಕಾರ್ಯಗಳಿಗೆ ದಾನಿಗಳ ಸಹಕಾರ ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಶ್ರೀನಿವಾಸ್ ವಹಿಸಿ ಈ ಶಿಬಿರದಲ್ಲಿ ಪ್ರಯೋಜನ ಪಡೆದವರು ಇತರರಿಗೆ ತಿಳಿಸಿ ಅವರನ್ನು ಸಹ ಶಿಬಿರಕ್ಕೆ ಕಳುಹಿಸುವುದೆ ನೀವು ನಮ್ಮ ಸಂಸ್ಥೆಗೆ ನೀಡುವ ದೇಣಿಗೆ ಎಂದರು. ಕಾಮೇನಹಳ್ಳಿ ಮುನೇಗೌಡ  ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಚಂದ್ರಪ್ಪ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕಿರ್ಲೋಸ್ಕರ್ ನಾಗರಾಜ್ ವಂದನೆ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.