ಉಚಿತ ನೇತ್ರ, ದಂತ ತಪಾಸಣಾ ಶಿಬಿರ
ವಿಜಯಪುರ: ಪಟ್ಟಣದ ಈಶ್ವರ ಚಾರಿಟಬಲ್ ಟ್ರಸ್ಟ್, ಬ್ರಾಹ್ಮಣ ಸೇವಾ ಮಂಡಳಿ, ಮಾನಸ ನರ್ಸಿಂಗ್ ಹೋಂ ಮತ್ತು ದೇವನಹಳ್ಳಿ ದೃಷ್ಟಿ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ, ದಂತ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರವು ಪಟ್ಟಣದ ಬ್ರಾಹ್ಮಣಾ ಸೇವಾ ಭವನದಲ್ಲಿ ಇದೇ ತಿಂಗಳ ಭಾನುವಾರ 23ರಂದು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಏರ್ಪಡಿಸಲಾಗಿದ್ದು, ಶಿಬಿರದಲ್ಲಿ ಸಿಪ್ಲ ಕಂಪನಿ ವತಿಯಿಂದ ಅಸ್ತಮ ಕಾಯಿಲೆ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ, ಸಕ್ಕರೆ ಕಾಯಿಲೆ ಇರುವ ರೋಗಿಗಳನ್ನು ಪರೀಕ್ಷೆ ಮಾಡಲಾಗುವುದು. ಸರ್ಜನ್ ನೇತೃತ್ವದ ತಂಡ ಡಾ.ನರಸರೆಡ್ಡಿ, ಡಾ. ಶ್ರೀನಿವಾಸ್, ಡಾ.ಶ್ವೇತಾ, ಡಾ.ಪದ್ಮ, ಡಾ. ರಮೇಶ್ ಬಾಬು ಚರ್ಮರೋಗ ತಜ್ಞರು, ಡಾ. ಮಾರುತಿ ಮೂಳೆ ರೋಗ ತಜ್ಞರು ಉಚಿತ ತಪಾಸಣೆ ನಡೆಸಲಿದ್ದಾರೆ ಎಂದು ಬ್ರಾಹ್ಮಣಾ ಸೇವಾ ಮಂಡಳಿ ಸದಸ್ಯ ಸತೀಶ್ ತಿಳಿಸಿದ್ದಾರೆ.
ಕಾಲೇಜಿಗೆ ಹೋದವ ಮನೆಗೆ ಬಂದಿಲ್ಲ
ರಾಮನಗರ: ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದ ಮಗ ವಾಪಸು ಮನೆಗೆ ಬಂದಿಲ್ಲ ಎಂದು ಆತನ ಪೋಷಕರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರದ ಎಂ.ಜಿ.ರಸ್ತೆ ನಿವಾಸಿ ಸುದರ್ಶನ್ ಅವರ ಪುತ್ರ ನಯನ್ (17) ಕಾಣೆಯಾದ ಯುವಕ. ಈತ ನಗರದ ಎಂಎಂಯು ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾನೆ. ಜೂ.5ರಂದು ಬೆಳಗ್ಗೆ ಕಾಲೇಜಿಗೆ ಹೋದವನು ವಾಪಸ್ ಮನೆಗೆ ಬಂದಿಲ್ಲ. 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿರುವ ನಯನ್ ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಈತನ ಸುಳಿವು ದೊರೆತಲ್ಲಿ ರಾಮನಗರ ಪುರ ಪೊಲೀಸ್ ಠಾಣೆಯ ದೂ:080-27273700 ಅಥವಾ ಡಿವೈಎಸ್ಪಿ ಕಚೇರಿ ದೂ.080-27271878 ಸಂಪರ್ಕಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಆಂಜನೇಯ ಸ್ವಾಮಿಗೆ ಕವಡೆ ಅಲಂಕಾರ
ಹೊಸಕೋಟೆ: ಪಟ್ಟಣದ ಕಿರಾರಿಪೇಟೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ಜೀರ್ಣೋದ್ಧಾರ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಿ ಮಂಡಲ ಪೂಜೆ ಪ್ರಯುಕ್ತ ಆಂಜನೇಯಸ್ವಾಮಿಗೆ ಕವಡೆ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಹೂವಿನ ಅಲಂಕಾರ ಆಕರ್ಷಣೆಯಿಂದ ಕೂಡಿತ್ತು. ನೂರಾರು ಭಕ್ತದಿಗಳೂ ಅಂಜನೇಯಸ್ವನಾಮಿಯ ಸಾಲಗಿನಿಂತ್ತು ದರ್ಶನ ಪಡೆದರು. ಪುರಸಭೆಯ ಸದಸ್ಯರಾದ ಎಸ್.ಶ್ರೀನಿವಾಸ್ , ಶ್ರೀಧರ್ ಹಾಗೂ ಇತರರು ಬಾಗನಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

