ವ್ಯಾಪಾರಕ್ಕೆ ಹೋದವ ನಾಪತ್ತೆ
ಮಾಗಡಿ: ರಗ್ಗು, ಕಂಬಳಿ ವ್ಯಾಪಾರಕ್ಕೆ ಹೋಗಿದ್ದ ನನ್ನ ತಮ್ಮ ಮುನಿಸ್ವಾಮಿ ಕಾಣೆಯಾಗಿದ್ದಾನೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ, ಪತ್ತೆ ಮಾಡಿಕೊಡುವಂತೆ ಮಾಗಡಿ ಪೋಲೀಸ್ ಠಾಣಿಯಲ್ಲಿ ಅಕ್ಕ ರತ್ನಮ್ಮ ದೂರು ನೀಡಿದ್ದಾರೆ ಎಂದು ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕ ಧರ್ಮೇಗೌಡ ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಹೆಮ್ಮಗಲು ತಾಲೂಕು, ನರಸಾಪುರ ಹೋಬಳಿ ಹೊಸಹಳ್ಳಿ ಗ್ರಾಮದ ವಾಸಿಯಾಗಿರುವ ಕೊಂಡಯ್ಯನ ಮಗ ಮುನಿಸ್ವಾಮಿ. ಈತ ಜೂ.19 ರಂದು ಮಾಗಡಿ ಮತ್ತು ಕುಣಿಗಲ್ ಸುತ್ತಮುತ್ತ ಭಾಗದಲ್ಲಿ ರಗ್ಗು, ಕಂಬಳ ವ್ಯಾಪಾರಕ್ಕೆಂದು ಹೋದವನು ಮನೆಗೆ ವಾಪಸ್ಸಾಗಿಲ್ಲ. ಕಾಣೆಯಾಗಿದ್ದಾನೆ. ಪತ್ತೆ ಮಾಡಿವಂತೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಮುನಿಸ್ವಾಮಿ ಸುಮಾರು 36 ವರ್ಷದವನ್ನಾಗಿದ್ದು, ಸುಮಾರು 5.5 ಅಡಿ ಎತ್ತರ, ಸದೃಢ ಮೈಕಟ್ಟು, ದುಂಡುಮುಖ, ಗೋದಿ ಬಣ್ಣ ಹೊಂದಿದ್ದಾನೆ. ಮೇಲ್ಕಂಡ ಚಹರೆಯುಳ್ಳ ಮುನಿಸ್ವಾಮಿ ಯಾರಿಗಾದರೂ ಸಿಕ್ಕಲಿ ಅಥವಾ ಮಾಹಿತಿ ದೊರೆತಲ್ಲಿ ಕೂಡಲೆ ಮಾಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ. ದೂರವಾಣಿ ಸಂಖ್ಯೆ-080-27745224.
ವಿದ್ಯಾರ್ಥಿ ರಾಷ್ಟ್ರ ಶಕ್ತಿ: ಹೇಮಂತ್
ನೆಲಮಂಗಲ: ವಿದ್ಯಾರ್ಥಿ ಶಕ್ತಿ ರಾಷ್ಟ್ರಶಕ್ತಿ. ಪ್ರತಿ ಮಹಿಳೆ ಪದವಿ ಶಿಕ್ಷಣ ಪಡೆದಲ್ಲಿ ಅಂತಹ ಕುಟುಂಬ ಒಂದು ವಿಶ್ವವಿದ್ಯಾಲಯಕ್ಕೆ ಸಮಾನ ಎಂದು ಪುರಸಭಾ ಸದಸ್ಯ ಎನ್.ಪಿ. ಹೇಮಂತ್ಕುಮಾರ್ ಹೇಳಿದರು.ಅವರು ಶನಿವಾರ ಪಟ್ಟಣದ ಬಸವಣ್ಣದೇವರ ಮಠದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿವೇಕಾನಂದರ ವಿಚಾರಧಾರೆಯ ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿವೇಕಾನಂದ ತತ್ವಾದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯ ದಿಕ್ಸೂಚಿಯಿದ್ದಂತೆ ಎಂದರು. ವಿದ್ಯಾರ್ಥಿ ಜೀವನವನ್ನು ಸರಿಯಾಗಿ ಬಳಸಿಕೊಂಡಲ್ಲಿ ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಷ್ಟ್ರಕ್ಕೆ ಬದ್ಧತೆಯಿಂದ ಉತ್ತಮ ಸೇವೆ ಸಲ್ಲಿಸಿ ರಾಷ್ಟ್ರಾಭಿವೃದ್ಧಿಯಲ್ಲಿ ಕೈಜೋಡಿಸಲು ಸಾಧ್ಯ ಎಂದು ಗ್ರಾಮಾಂತರ ಸಬ್ಇನ್ಸ್ಪೆಕ್ಟರ್ ನವೀನ್ಕುಮಾರ್ ಹೇಳಿದರು. ಅಧ್ಯಕ್ಷತೆಯನ್ನು ಶ್ರೀ ಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಹೆಚ್.ಮಹದೇವಯ್ಯ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ತಮ್ಮಲ್ಲಿರುವ ದೈತ್ಯ ಶಕ್ತಿಗಳನ್ನು ಬಡಿದೆಬ್ಬಿಸಿ ಸ್ಪರ್ಧಾ ಮನೋಭಾವ ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಪ್ರಸ್ತುತ ಸಮಾಜದಲ್ಲಿ ವಿವೇಕಾನಂದರ ವಿಚಾರಧಾರೆಯ ಔಚಿತ್ಯತೆಯನ್ನು ಕುರಿತು ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಪ್ರಾಂಶುಪಾಲರಾದ ಪ್ರಕಾಶ್, ನೆಗಳೂರು, ರಮಾನಂದ, ರೇಖಾ.ಡಿ.ಜಿ ಅವರು ಸೇರಿದಂತೆ ನೂರಾರು ಜನ, ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

