ಮನುಷ್ಯರಲ್ಲಿ ಮೋಸ, ವಂಚನೆ ಹೆಚ್ಚುತ್ತಿದೆ: ವಿಷಾದ
ವಿಜಯಪುರ: ಸಮಾಜದಲ್ಲಿ ನಾವು ಸದಾ ನಮ್ಮ ಕೆಲಸಗಳಲ್ಲಿ ಮಾತ್ರ ಸೀಮಿತವಾಗಿರದೆ ಆಧ್ಯಾತ್ಮ, ಧರ್ಮದ ಬಗ್ಗೆ ವಿಚಾರಧಾರೆ ಅಳವಡಿಸಿಕೊಂಡು ಜೀವನಸಾಗಿಸಬೇಕು ಎಂದು ಪಟ್ಟಣದ ಬೆಸ್ಕಾಂ ಕಿರಿಯ ಎಂಜಿನಿಯರ್ ಕೆ. ರಾಮಾನುಜಂ ತಿಳಿಸಿದರು.
ಅವರು ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಶ್ರೀ ಕೃಷ್ಣ ಸತ್ಸಂಗ ಧ್ಯಾನ ಮಂದಿರದಲ್ಲಿ 95ನೇ ಶ್ರೀ ಕೃಷ್ಣ ಮಾಸಿಕ ವಿಚಾರಧಾರೆ ಗೋಷ್ಠಿಯಲ್ಲಿ ಮಹಾಭಾರತ ಸನ್ನಿವೇಶಗಳ ವಿಶ್ಲೇಷಣೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು. ಮನುಷ್ಯರಲ್ಲಿ ಅಂಧಕಾರ, ಮೋಸ, ವಂಚನೆಗಳು ಹೆಚ್ಚಾಗುತ್ತಿರುವ ಕಾರಣ ಪ್ರಪಂಚವು ವಿನಾಶದ ಹಂತವನ್ನು ತಲುಪುತ್ತಿದೆ. ಇತ್ತೀಚೆಗೆ ಉತ್ತರಭಾರತದ ಉತ್ತರ ಖಂಡದಲ್ಲಿ ಸಂಭವಿಸಿದ ಜಲಪ್ರಳಯಕ್ಕೂ ಸಹ ಮನುಷ್ಯನ ಅತಿಯಾದ ಪರಿಸರ ನಾಶವೇ ಕಾರಣವಾಗಿದೆ ಎಂದು ತಿಳಿಸಿದರು. ಪುರಸಭಾ ಸದಸ್ಯ ಹಾಗೂ ಜೆಸಿಐ ಸಂಸ್ಥೆಯ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಮಾತನಾಡಿ ನಮ್ಮ ದಿನನಿತ್ಯದ ಜೀವನದಲ್ಲಿ ಸ್ವಲ್ಪ ಸಮಯವಾದರೂ ಆಧ್ಯಾತ್ಮ, ಧರ್ಮದ ಬಗ್ಗೆ ಚಿಂತನೆಗೆ ಮೀಸಲಿಡಬೇಕು. ದೇವರ ಧ್ಯಾನವನ್ನು ಪ್ರತಿನಿತ್ಯ ಮೈಗೊಡಿಸಿಕೊಳ್ಳುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ ಎಂದರು.
ಧಾರ್ಮಿಕ ಚಿಂತಕ ಹಾಗೂ ಗಾರೆ ಕೆಲಸದ ಮೇಸ್ತ್ರಿ ರಾಮದಾಸಪ್ಪ ದಂಪತಿ ಸನ್ಮಾನಿಸಲಾಯಿತು. ಪುರಸಭಾ ಮಾಜಿ ಉಪಾಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ, ಸದಸ್ಯ ಎಂ. ವರದರಾಜು, ಶ್ರೀ ಕೃಷ್ಣ ಸತ್ಸಂಗದ ಸಂಚಾಲಕ ವಿ.ಎಂ. ವೆಂಕಟೇಶ್, ವಿ. ನಾಗಯ್ಯ, ಟಿ.ಮಹಾತ್ಮಾಂಜನೇಯ, ನರಸಿಂಹಪ್ಪ ಇದ್ದರು .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

