ಲಯನ್ಸ್ ಪದಾಧಿಕಾರಿಗಳ ಪದಗ್ರಹಣ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕ್ಲಬ್‌ನ 40ನೇ ವಾರ್ಷಿಕೋತ್ಸವ ಕಾರ್ಯಕ್ರಮ ವಾಸವಿ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಜಿಲ್ಲಾ ರಾಜ್ಯಪಾಲ ಅಚ್ಯುತಾನಂದರೆಡ್ಡಿ ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪದಗ್ರಹಣ ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಲಯನ್ಸ್ ಬಹುಮುಖ್ಯ ಪಾತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿಸುತ್ತಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆಗಳ ವಿಚಾರದಲ್ಲಿ ಕ್ಲಬ್ ಹಲವು ದಶಕಗಳಿಂದ ಸಾರ್ಥಕ ಸೇವೆ ಸಲ್ಲಿಸುವ ಮೂಲಕ ಗಣನೀಯ ಕೆಲಸ ಮಾಡಿದೆ ಎಂದರು.
ಇದೇ ಸಂದರ್ಭ ನೂತನ ಅಧ್ಯಕ್ಷರಾಗಿ ಆರ್.ವಿ.ಶಿವಣ್ಣ ನಿರ್ಗಮಿತ ಅಧ್ಯಕ್ಷ ಪಿ.ಸಿ. ವೆಂಕಟೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು. ಲಯನೆಸ್ ಕ್ಲಬ್ ಅಧ್ಯಕ್ಷರಾಗಿ ಅನ್ನಪೂರ್ಣಮ್ಮ ಶಿವಣ್ಣ ಅಧಿಕಾರ ವಹಿಸಿಕೊಂಡರು.
ಪದಾಧಿಕಾರಿಗಳು: ಲಯನ್ಸ್ ಕ್ಲಬ್‌ಗೆ ಆರ್.ವಿ. ಶಿವಣ್ಣ (ಅಧ್ಯಕ್ಷ), ಡಿ.ಕೆ.ಸೋಮಶೇಖರ್ (ಕಾರ್ಯದರ್ಶಿ), ಬೂದಿಪಲ್ಲಿ ಶ್ರೀನಿವಾಸ್ (ಖಜಾಂಚಿ), ಪಿ.ಸಿ.ವೆಂಕಟೇಶ್ (ನಿ.ಪೂ. ಅಧ್ಯಕ್ಷ), ಎಂಪಿಸಿ ವೆಂಕಟೇಶ್ (1ನೇ ಉಪಾಧ್ಯಕ್ಷ), ಕೆ.ಶಿವಶಂಕರ್ (2ನೇ ಉಪಾಧ್ಯಕ್ಷ), ಬಿ.ಎ. ಶ್ರೀನಿವಾಸ್ (3ನೇ ಉಪಾಧ್ಯಕ್ಷ), ಕೆ.ಪುಟ್ಟರಾಜ್ (ಟ್ಯಾಮರ್), ಎಂ.ಆರ್. ವೆಂಕಟೇಶ್ (ಟೇಲ್ ಟ್ವಿಸ್ಟರ್), ಕೆ.ಎಂ. ಹನುಮಂತರಾಯಪ್ಪ, ಎಸ್.ನಟರಾಜ್, ಕೆ.ವೈ. ರಾಮಚಂದ್ರನ್, ಪಿ.ಸಿ. ಪುಟ್ಟರುದ್ರಪ್ಪ, ಪಿ.ಸಿ. ಲಕ್ಷ್ಮೀನಾರಾಯಣ್, ಟಿ.ಬಿ. ನಾರಾಯಣಸ್ವಾಮಿ, ಎಂ.ಸುಬ್ರಹ್ಮಣ್ಯಂ, ಆರ್.ಎಸ್. ಮಂಜುನಾಥ್, ಕೆ.ಜಿ. ಗೋಪಾಲ್, ಸಿ.ಮುನಿರಾಜು, ಡಿ.ಎಂ. ಚಂದ್ರಶೇಖರ್, ಎಸ್.ವಿ. ನಂಜುಂಡೇಶ್ವರಸ್ವಾಮಿ, ಕೆ.ವಿ. ಪ್ರಭುಸ್ವಾಮಿ, ಸಿ.ಎನ್. ರಾಜಶೇಖರ್, ಕೆ.ಮೋಹನ್‌ಕುಮಾರ್ (ನಿರ್ದೇಶಕರು), ಮಂಗಳಗೌರಿ ಪರ್ವತಯ್ಯ(ಬುಲೆಟಿನ್ ಎಡಿಟರ್), ಎಸ್.ಡಿ. ಪರ್ವತಯ್ಯ (ಸದಸ್ಯತ್ವ ಸಮಿತಿ ಅಧ್ಯಕ್ಷ), ಎಲ್.ಕೃಷ್ಣಮೂರ್ತಿ (ಕಾರ್ಯಕ್ರಮ ಸಮಿತಿ ಅಧ್ಯಕ್ಷ), ವಿ.ಎ. ಗೋಪಾಲ್ (ಪಿಆರ್‌ಓ).
ಲಯನೆಸ್ ಕ್ಲಬ್‌ಗೆ ಅನ್ನಪೂರ್ಣಮ್ಮ ಶಿವಣ್ಣ (ಅಧ್ಯಕ್ಷೆ), ಎನ್.ರೇಣುಕಾ ನಾಗರಾಜ್ (ಕಾರ್ಯದರ್ಶಿ), ಮಂಗಳಗೌರಿ ಪರ್ವತಯ್ಯ (ಖಜಾಂಚಿ), ರಾಧಿಕಾ ಶ್ರೀನಿವಾಸ್ (ನಿ.ಪೂ. ಅಧ್ಯಕ್ಷೆ), ರೇಖಾ ವೆಂಕಟೇಶ್ (ಉಪಾಧ್ಯಕ್ಷೆ), ಪುಷ್ಪಾಶಿವಶಂಕರ್, ಚೂಡಾಮಣಿ ನಟರಾಜ್, ರಾಜೇಶ್ವರಿ ಮಲ್ಲಪ್ಪದೇವುಡು, ಸಿದ್ದಗಂಗಮ್ಮ ನಟರಾಜ್, ಭಾರತಿ ಮಂಜುನಾಥ್, ಜಯಮ್ಮ ಪುಟ್ಟರುದ್ರಪ್ಪ, ಶೋಭಾ ನಾರಾಯಣಸ್ವಾಮಿ, ಮಹಾಲಕ್ಷ್ಮಿ ನಂಜುಂಡೇಶ್ವರಸ್ವಾಮಿ, ಗೀತಾ ಸಿದ್ಧಣ್ಣ, ಕವಿತಾ ರಾಜಶೇಖರ್, ಸಾವಿತ್ರಿ ರೇವಣ್ಣ, ಡಾ.ಇಂದಿರಾ ಶ್ಯಾಂಪ್ರಸಾದ್, ಗಾಯತ್ರಿ ಪ್ರಕಾಶ್, ಶೀಲವತಿ ಗೋಪಾಲ್, ರಾಧಾ ಚಿಕ್ಕಣ್ಣ, ಮಂಜುಳಾ ಗುಪ್ತ, ರಾಧಿಕಾ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

