ಗ್ರಾಮಾಭ್ಯುದಯಕ್ಕೆ ದೇವಾಲಯ ಅವಶ್ಯ
ಮಾಗಡಿ: ಗ್ರಾಮೀಣ ಅಭ್ಯುದಯಕ್ಕೆ ದೇವಾಲಯಗಳು ಅತ್ಯಾವಶ್ಯಕ ಎಂದು ಸಮಾಜ ಸೇವಕಿ ರಾಧ ಬಾಲಕೃಷ್ಣ ನುಡಿದರು. ಅವರು ಮತ್ತೀಕೆರೆ ಗೊಲ್ಲರಹಟ್ಟಿಯಲ್ಲಿ ಸೋಮವಾರ ಗೊಲ್ಲರ ಸಮಾಜದ ಆರಾಧ್ಯ ದೈವ ಜುಂಜಪ್ಪಸ್ವಾಮಿ ದೇವರ ಕಳಸ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ದೇವಾಲಯಗಳು ಜನರ ಶ್ರದ್ಧಾಕೇಂದ್ರಗಳಾಗಿವೆ. ನಮ್ಮ ಪೂರ್ವಿಕರು ಕಟ್ಟಿದ ಜನಪದ ಸೊಗಡು ಸೂಸುವ ದೇವಾಲಯಗಳು ಗ್ರಾಮೀಣ ಭಾಗದ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುತ್ತದೆ. ಗ್ರಾಮದಲ್ಲಿ ದೇವರಿಗೆ ನಿತ್ಯ ಪೂಜೆ ಪುನಸ್ಕಾರಗಳನ್ನು ನಡೆಸಬೇಕು ಎಂದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗೊಲ್ಲರು ಮೂಢನಂಬಿಕೆ ಬಿಡಬೇಕು ಎಂದರು. ಇದೇ ವೇಳೆ ಚಿಕ್ಕಣ್ಣಸ್ವಾಮಿ ದೇವಸ್ಥಾನದ ಅರ್ಚಕ ಪಾಪಣ್ಣ ಅವರನ್ನು ಸನ್ಮಾನಿಸಲಾಯಿತು. ಹಿರಿಯರಾದ ಮುಡಲಗಿರಿಯಪ್ಪ, ರಾಮಚಂದ್ರ, ಅರ್ಚಕ ಗೋಪಾಲಯ್ಯ, ತಿಮ್ಮಪ್ಪ, ಚಿಕ್ಕಮಾರಯ್ಯ, ಕುಮಾರ, ನಾಗರಾಜು, ಶಿವಕುಮಾರ್, ಮತ್ತೀಕೆರೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

