ಬೆಂಗಳೂರು ಗ್ರಾಮಾಂತರ

ನಾವು ನೀತಿ ಸಂಹಿತೆ ಉಲ್ಲಂಘಿಸಿಲ್ಲ: ಪದ್ಮಾವತಿ ಮುನೇಗೌಡ

Published On :

ಕನ್ನಡಪ್ರಭ ವಾರ್ತೆ  ದೊಡ್ಡಬಳ್ಳಾಪುರ  ಮಾ.6-
ನಾವು ಯಾವುದೇ ನೀತಿ ಸಂಹಿತೆ ಉಲ್ಲಂಘಿಸಿಲ್ಲ. 31ನೇ ವಾರ್ಡ್ ಮುತ್ಯಾಲಮ್ಮ ಗುಡಿ ಬಳಿ ನಡೆದ ಘರ್ಷಣೆಗೆ ಕೆಲವರ ದುರುದ್ದೇಶಪೂರಿತ ವರ್ತನೆ ಕಾರಣ. ಶಾಂತಿನಗರದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡಿದವರೇ ನಮ್ಮ ವಿರುದ್ಧ ಆರೋಪ ಮಾಡುತ್ತಿರುವುದು ಅರ್ಥಹೀನ ಎಂದು ಜೆಡಿಎಸ್‌ನ ಪದ್ಮಾವತಿ ಬಿ.ಮುನೇಗೌಡ ಹೇಳಿಕೆ ನೀಡಿದ್ದಾರೆ.
ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಕ್ಷುಲ್ಲಕವಾಗಿ ನಡೆದುಕೊಂಡ ಕೆಲವರು ಏಕಾಏಕಿ ನಮ್ಮ ಮೇಲೆ ದಾಳಿ ಮಾಡಿ ಗಲಭೆ ಸೃಷ್ಟಿಸಿದರು ಎಂದು ಆರೋಪಿಸಿದ ಅವರು, ಕಳೆದ 4 ವರ್ಷಗಳಿಂದ ದೊಡ್ಡಬಳ್ಳಾಪುರದಲ್ಲಿ ಮುನೇಗೌಡರು ಜೆಡಿಎಸ್ ಪಕ್ಷ ಸಂಘಟಿಸಿದ್ದಾರೆ. ಶಾಸಕ ಸ್ಥಾನದ ಟಿಕೆಟ್ ಬಗ್ಗೆ ನಾವು ಚಿಂತಿಸುತ್ತಿಲ್ಲ. ಪರಿಶ್ರಮಕ್ಕೆ ಗೌರವ ಇದ್ದೇ ಇದೆ. ಟಿಕೆಟ್ ಸಿಕ್ಕೇ ಸಿಗುತ್ತದೆ. ಜನಸೇವೆ ಮಾಡುವುದಷ್ಟೇ ನಮ್ಮ ಕೆಲಸ. ಆದರೆ ಹಿಂಬಾಗಿಲ ರಾಜಕಾರಣ ಗೊತ್ತಿಲ್ಲ ಎಂದರು.
ಮುನೇಗೌಡರ ಬೆಂಬಲಿತ ಅಭ್ಯರ್ಥಿಗಳು ಗೆದ್ದುಬಿಟ್ಟರೆ ತಮಗೆ ಉಳಿಗಾಲವಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಗೋವಿಂದರಾಜು ಸಹಚರರು ಈ ಕೃತ್ಯ ನಡೆಸಿದ್ದಾರೆ. ಈ ಬಾರಿ ಜೆಡಿಎಸ್‌ನಲ್ಲಿ ದುಡಿದವರಿಗೆ ಟಿಕೆಟ್ ಕೊಡದೆ ಹೊರಗಿನಿಂದ ಬಂದವರಿಗೆ ಮಣೆ ಹಾಕಿದ್ದಾರೆ. ಪಾರ್ಟಿ ಅವರ ಸ್ವಂತ ಸ್ವತ್ತಲ್ಲ. ಇಂತಹ ವರ್ತನೆಗೆ ಜನತೆ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಕಡೆಗಣನೆ ಆರೋಪ: ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಅಬ್ದುಲ್ ರಹಮಾನ್, ಎಲ್ಲ ವಾರ್ಡುಗಳಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೆವು.
ಆದರೆ ಅಂತಹವರಿಗೆ ಟಿಕೆಟ್ ಕೊಡಲಿಲ್ಲ. ಗೋವಿಂದರಾಜು ಅವರು ಕಾರ್ಯಕರ್ತರೊಂದಿಗೆ ಹೊಣೆಯಾಧಾರಿತವಾಗಿ ನಡೆದುಕೊಂಡಿಲ್ಲ. ತಮ್ಮ ವರ್ತನೆ ಮೂಲಕ ಅವರು ನಮಗೆ ಅವಮಾನ ಮಾಡಿದ್ದಾರೆ. ಕೇವಲ ಅಧಿಕಾರ ಇದ್ದ ಮಾತ್ರಕ್ಕೇ ಎಲ್ಲರನ್ನೂ ತುಚ್ಛವಾಗಿ ಕಂಡರೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.