ಬೆಂಗಳೂರು ಗ್ರಾಮಾಂತರ

ಶಾಂತಿಯುತ ಮತದಾನಕ್ಕೆ ಮನವಿ

Published On :

ಕ.ಪ್ರ. ವಾರ್ತೆ ಟಿ ಆನೇಕಲ್ಲು ಟಿ ಮಾ.6
ಆನೇಕಲ್ ಪುರಸಭೆಯ 23 ವಾರ್ಡುಗಳಿಗೆ ಮಾ.7 ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಸಂಜೆ 5ರ ವರೆಗೆ ಶಾಂತಿಯುತವಾಗಿ ಮತದಾನದಲ್ಲಿ ಭಾಗವಹಿಸಿ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಶಿವೇಗೌಡ ಮನವಿ ಮಾಡಿದ್ದಾರೆ.
ಅವರು ಆನೇಕಲಲ್ಪಟ್ಟಣದ 23 ವಾರ್ಡುಗಳ 34 ಮತಗಟ್ಟೆಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ಹಾಗೂ ಮತಗಟ್ಟೆಗಳ ಭದ್ರತೆ ಪರಿಶೀಲನೆ ಮಾಡಿದರು.
ಆನೇಕಲ್ ಪುರಸಭೆ ಮತದಾನಕ್ಕೆ ಪೂರ್ವ ಸಿದ್ಥತೆಗಳನ್ನು ಮಾಡಿಕೊಳ್ಳಲಾಗಿತ್ತು. ಚುನಾವಣಾ ಸಂಬಂಧ 150ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪಾರದರ್ಶಕತೆಗಾಗಿ ಪುರಸಭಾ ವ್ಯಾಪ್ತಿಯ ಹೊರಗಿನ ಶಿಕ್ಷಕರನ್ನು ಮತಗಟ್ಟೆಗಳ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದರು.
ಪುರಸಭೆಯ 23 ವಾರ್ಡುಗಳಿಗೆ 31,940 ಮತದಾರರಿದ್ದು 16, 282 ಪುರುಷರು ಹಾಗೂ 15658 ಮಹಿಳೆಯರು ಮತದಾನದಲ್ಲಿ ಭಾಗವಹಿಸಲಿದ್ದಾರೆ. 23 ವಾರ್ಡುಗಳಿಗೆ 34 ಮತಗಟ್ಟೆಗಳನ್ನು ತೆರೆಯಲಾಗಿದೆ. 13 ಸಾಮಾನ್ಯ, 12 ಸೂಕ್ಷ್ಮ ಹಾಗೂ 9 ಅತಿಸೂಕ್ಷ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ ಎಂದರು.
ಚುನಾವಣೆಯನ್ನು ಸುಗಮವಾಗಿ ನಡೆಸುವ ಸಲುವಾಗಿ ವಿಶೇಷ  ಭದ್ರತೆಯನ್ನು ಒದಗಿಸಲಾಗಿದೆ ಎಂದು ಡಿವೈಎಸ್ಪಿ ಕುಮಾರಸ್ವಾಮಿ ತಿಳಿಸಿದ್ದಾರೆ. ಮೂವರು ವೃತ್ತ ನಿರೀಕ್ಷಕರು, 8 ಉಪ ನಿರೀಕ್ಷಕರು, ಕೆಎಸ್‌ಆರ್‌ಪಿಯ 1 ತುಕಡಿ ಹಾಗೂ ಡಿಆರ್‌ಪಿಯ 2 ತುಕಡಿಗಳನ್ನು ನೇಮಿಸಲಾಗಿದೆ. ಚುನಾವಣಾ ಪೂರ್ವ ತಯಾರಿಯಾಗಿ ನಗರದ ಪ್ರಮುಖ ಹಾಗೂ ಅತಿಸೂಕ್ಷ್ಮ ವಾರ್ಡುಗಳಲ್ಲಿ ಪಥ ಸಂಚಲನ ಮಾಡಲಾಗಿದೆ. ಮಹಿಳೆಯರು, ವೃದ್ಧರು ಹಾಗೂ ವಿಶೇಷ ಅವಶ್ಯಕತೆ ಉಳ್ಳವರಿಗೆ ಸುಲಭ ಮತದಾನಕ್ಕಾಗಿ ಸೂಚನೆ ನೀಡಲಾಗಿದೆ. ಮತಗಟ್ಟೆಗಳ ಭದ್ರತೆ ಹಾಗೂ ಶಾಂತಿಯುತ ಮತದಾನಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.