ಬೆಂಗಳೂರು ಗ್ರಾಮಾಂತರ

ನೈತಿಕತೆ ಬೆಳೆಸುವ ಶಿಕ್ಷಣ ಇಂದಿನ ಅಗತ್ಯ

Published On :

ಕ.ಪ್ರ. ವಾರ್ತೆ   ದೊಡ್ಡಬಳ್ಳಾಪುರ   ಮಾ.17
ನೈತಿಕತೆ ಇಂದಿನ ಬದುಕಿನ ಬಹುಮೂಲ್ಯ ಅಗತ್ಯವಾಗಿದೆ. ನೈತಿಕತೆಯ ಅಧಃಪತನ ಹೆಚ್ಚುತ್ತಿರುವ ಸಂದರ್ಭದಲ್ಲಿ ಆದರ್ಶಗಳು ಮತ್ತು ಒಳ್ಳೆಯ ಚಿಂತನೆಗಳನ್ನು ಬಿಟ್ಟು ಹೋದ ರಾಷ್ಟ್ರನಾಯಕರು ನಮಗೆ ಆದರ್ಶವಾಗಬೇಕಿದೆ ಎಂದು ಭಾರತ ಸೇವಾದಳದ ಮುಖಂಡ ತಿ.ರಂಗರಾಜು ಹೇಳಿದರು.
ತಾಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ನಿಂದ ರಾಷ್ಟ್ರನಾಯಕರ ಉದಾತ್ತ ಚಿಂತನೆಗಳ ಕುರಿತ ಪುಸ್ತಕಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ. ವಿಜಯಕುಮಾರ್, ಎಲ್ಲರೂ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು. ಸಮಾಜಮುಖಿ ಆಲೋಚನೆಗಳ ಮೂಲಕ ದೇಶಕ್ಕೆ ಒಳಿತನ್ನು ಮಾಡಬೇಕು. ಸಂಘಟನೆಗಳು, ಕೈಗಾರಿಕಾ ಸಂಘಟನೆಗಳು, ಸರ್ಕಾರಿ ಶಾಲೆಗಳ ಮತ್ತು ಸ್ಥಳೀಯ ಗ್ರಾಮಗಳ ಅಭಿವೃದ್ಧಿಗೆ ಗಮನ ಹರಿಸಬೇಕಾದ ಅಗತ್ಯವಿದ್ದು, ನಗರ-ಹಳ್ಳಿಗಳ ಅಸಮಾನತೆ ನಿವಾರಣೆಗೆ ಅದು ಕಾರಣವಾಗುತ್ತದೆ ಎಂದರು. ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ಪ್ರತಿನಿಧಿ ಕೆ.ಎಂ.ಸಿಂಗ್ ಮಾತನಾಡಿ ಜನರ ಸಹಕಾರದೊಂದಿಗೆ ಸ್ಥಳೀಯ ಸಮುದಾಯದ ಅಭ್ಯುದಯಕ್ಕೆ ಪೂರಕವಾಗುವ ಕಾರ್ಯಕ್ರಮಗಳಿಗೆ ಬದ್ಧವಾಗಿರಬೇಕಾಗುತ್ತದೆ. ಮಕ್ಕಳು ಮೌಲ್ಯಯುತ ಬದುಕು ರೂಢಿಸಿಕೊಳ್ಳಲು ಇದು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಮಂಜುಳಾ, ಗ್ರಾಮದ ಮುಖಂಡರು, ಮಜರಾ ಹೊಸಹಳ್ಳಿ ಗ್ರಾ.ಪಂ ಸದಸ್ಯರುಗಳು, ಬಿರ್ಲಾ ಸೂಪರ್ ಟರ್ಮಿನಲ್ನ ಪದಾಧಿಕಾರಿಗಳು ಹಾಜರಿದ್ದರು. ಪಂಚಾಯಿತಿ ವ್ಯಾಪ್ತಿಯ 9 ಶಾಲೆಗಳಿಗೆ ತಲಾ 500 ಪುಸ್ತಕಗಳನ್ನು ವಿತರಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.