ಬೆಂಗಳೂರು ಗ್ರಾಮಾಂತರ

ಪೌರಾಣಿಕ ನಾಟಕೋತ್ಸವ ಸಮಾರೋಪ

Published On :

ದೇವನಹಳ್ಳಿ: ಇಲ್ಲಿನ ಶ್ರೀ ಶಕ್ತಿ ಕನ್ನಡ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಮಾಜಿ ಪುರಸಭಾಧ್ಯಕ್ಷ ದಿವಂಗತ ಎಸ್.ರಾಮಯ್ಯರವರು ಸ್ವರಣಾರ್ಥ ಕಳೆದ ಒಂದು ವಾರದಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪೌರಾಣಿಕ ನಾಟಕಗಳ ಸಪ್ತಾಹ ಆಯೋಜಿಸಿದ್ದು ಮಂಗಳವಾರ ಸಂಜೆ ಸಮಾರೋಪ ಅಂಗವಾಗಿ ವಿಜಯಪುರ ಶ್ರೀ ವೇಣುಗೋಪಾಲಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯವರಿಂದ ಎಂೆ.ವಿ.ನಾಯಿಡು ರವರ ನಿರ್ದೇಶನದಲ್ಲಿ ಸಾಮ್ರಾಟ್ ಸುಯೋಧನ ನಾಟಕ ಪ್ರದರ್ಶನಗೊಂಡಿತು.
ಮಾಜಿ ಶಾಸಕರಾದ ಡಿ.ಎಸ್.ಗೌಡ, ಮುನಿನರಂಸಿಂಹಯ್ಯ ಮತ್ತಿತರರು ಮಾತನಾಡಿದರು. ಇದೆ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಯಲಿಯೂರು ಡಿ.ರಾಮಾಂಜಿನಪ್ಪ, ವಿ.ಎಂ.ನಾಯಿಡು ಹಾಗೂ ಟಿ.ಎಂ.ಮುನಿಶಾಮಪ್ಪ ಇವರನ್ನು ಸನ್ಮಾನಿಸಲಾಯಿತು. ಮುಖಂಡರಾದ   ಎಲ್.ರವೀಂದ್ರ, ಆರ್.ಮಾರೇಗೌಡ, ಎಸ್.ಪಿ.ಗಾಂಧಿ, ಕೆಂಪೇಗೌಡ, ಸಂಘದ ಅಧ್ಯಕ್ಷ ಕೆ.ಸುಬ್ರಮಣಿ, ಹೆಚ್.ಎಂ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.