ರಾಮನಗರ: ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಸಮಿತಿಯಿಂದ ಬಸವನ ಬಾಗೇವಾಡಿಯಿಂದ-ಕೂಡಲ ಸಂಗಮದವರೆಗೆ ಹೊರಟಿರುವ ಶರಣ ಸಂಸ್ಕೃತಿ ಮಹಾಯಾತ್ರೆಯನ್ನು ನಗರದಲ್ಲಿ ಶುಕ್ರವಾರ ಸ್ವಾಗತಿಸಿ ಬೀಳ್ಕೊಡಲಾಯಿತು. ಮಹಾ ಯಾತ್ರೆಯನ್ನು ಐಜೂರು ವೃತ್ತದಲ್ಲಿ ಸ್ವಾಗತಿಸಿ, ಹಳೆಬಸ್ ನಿಲ್ದಾಣದ ಮೂಲಕ ಕನಕಪುರ ವೃತ್ತದವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮಹಾಯಾತ್ರೆಯಲ್ಲಿ ಬಸವ ಸಮಿತಿಯ ಅರವಿಂದ ಜತ್ತಿ, ವೀರಶೈವ ಮುಖಂಡರಾದ ರಾಜಶೇಖರ್, ಎ.ಎಸ್.ಶಿವಕುಮಾರ್, ಎಂ.ಆರ್.ಶಿವಕುಮಾರಸ್ವಾಮಿ, ಎ.ಜೆ.ಸುರೇಶ್, ಎಂ.ಸಿ.ಶಿವಸ್ವಾಮಿ, ನಂಜಪ್ಪ, ಸುರೇಶ್, ಸತೀಶ್, ಶಿವಲಿಂಗಯ್ಯ, ಸಿ.ನಾಗರಾಜು, ಸ್ವಾಮಿ, ರಾಜಶೇಖರ್ ಮತ್ತಿತರರು ಸ್ವಾಗತಿಸಿ ಬೀಳ್ಕೊಟ್ಟರು.