'ದಾಸರಹಳ್ಳಿ ಮತ್ತಷ್ಟು ಅಭಿವೃದ್ಧಿಪಡಿಸಲು ಬಿಜೆಪಿ ಬೆಂಬಲಿಸಿ'
ಯಲಹಂಕ: ಹೈಟೆಕ್ ಸಿಟಿಯಂತೆ ಕಾಣುವ ದಾಸರಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕ ಎಸ್.ಮುನಿರಾಜು ಅವರ ಶ್ರಮವೇ ಕಾರಣ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯನಾಯ್ಡು ಶ್ಲಾಘಿಸಿದ್ದಾರೆ. ಐದು ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಅಕ್ಷರಶಃ ಹಳ್ಳಿಯೇ ಆಗಿತ್ತು. ಬೆಂಗಳೂರು ಎಂದಾಗಿದ್ದರೂ ಇಲ್ಲಿ ಯಾವುದೇ ಅಭಿವೃದ್ಧಿಯಾಗಿರಲಿಲ್ಲ. ಮಣ್ಣು ರಸ್ತೆ ಇರಲಿ ಇಲ್ಲಿ ಓಡಾಡಲೂ ಸಾಧ್ಯವಾಗದಂತಹ ದುಸ್ಥಿತಿ ಇತ್ತು. ಇಂದು ಈ ಪ್ರದೇಶವನ್ನು ನೋಡಿದರೆ ಚಮತ್ಕಾರವಾಯಿತೇ ಎಂದು ಅಚ್ಚರಿ ಮೂಡುತ್ತದೆ. ಶಾಸಕರೊಬ್ಬರಿಗೆ ಇಚ್ಛಾಶಕ್ತಿ ಇದ್ದರೆ ಎಂತಹ ಪ್ರದೇಶವನ್ನೂ ಅಭಿವೃದ್ಧಿ ಉತ್ತುಂಗಕ್ಕೇರಿಸಬಹುದು ಎಂಬುದನ್ನು ಈ ದಾಸರಹಳ್ಳಿ ಕ್ಷೇತ್ರ ಸಾಬೀತುಪಡಿಸಿದೆ ಎಂದಿದ್ದಾರೆ. ಬಿಜೆಪಿ ಎಂದರೆ ಅಭಿವೃದ್ಧಿ. ಅದನ್ನು ಈ ದಾಸರಹಳ್ಳಿ ಕ್ಷೇತ್ರ ಸಾಬೀತುಪಡಿಸುತ್ತದೆ. ಇಲ್ಲಿನ ರಸ್ತೆಗಳಲ್ಲಿ ಸಂಚಾರ ಮಾಡಿದರೆ ಇದು ಐದು ವರ್ಷದ ಹಿಂದೆ ನಾನು ಕಂಡ ಪ್ರದೇಶವೇ ಎಂದು ನನಗೆ ಆಶ್ಚರ್ಯವಾಗುತ್ತದೆ. ಹೆಸರಘಟ್ಟ ಹಾಗೂ ಸುತ್ತಮುತ್ತ ಚಿತ್ರೀಕರಣಕ್ಕೆ ಬರುವ ವೇಳೆ ಈ ಪ್ರದೇಶದಿಂದಲೇ ಸಾಗಬೇಕಾಗಿತ್ತು. ಆ ಸಂದರ್ಭದಲ್ಲಿ ಒಂದು ಕಾರು ಸಂಚರಿಸುವುದೂ ಕಷ್ಟವಾಗಿತ್ತು. ಆದರೆ ಬಾಗಲಗುಂಟೆ ಇಂದು ವಾಣಿಜ್ಯ ಕ್ಷೇತ್ರಗವಾಗಿದೆ. ಎಂಟನೇ ಮೈಲುಗಲ್ಲು ತನ್ನ ವೈಭವ ಮೆರೆಯುತ್ತಿದೆ ಎಂದು ಚಿತ್ರನಟ ಹಾಗೂ ಶಾಸಕ ಜಗ್ಗೇಶ್ ಹೇಳಿದರು. ಇದೆ ಸಂದರ್ಭದಲ್ಲಿ ಜೆಡಿಎಸ್‌ನ ಭದ್ರಕುಮಾರ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಶಾಸಕ ಎಸ್.ಮುನಿರಾಜು ಸಮ್ಮುಖದಲ್ಲಿ ಬಿಜೆಪಿ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

