ಪಿಯು, ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ಮಿಶ್ರಫಲ
ರಾಮನಗರ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ ಒಂದು ಸ್ಥಾನ ಮೇಲೇರಿದ್ದರೆ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಿದ್ದರೂ 2 ಸ್ಥಾನ ಕುಸಿದಿದೆ. ಹೀಗಾಗಿ ಶೈಕ್ಷಣಿಕ ಫಲಿತಾಂಶದಲ್ಲಿ ಈ ಜಿಲ್ಲೆಗೆ ಮಿಶ್ರಫಲ ಲಭಿಸಿದೆ. ಎಸ್ಎಸ್ಎಲ್ಸಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 7202 ಬಾಲಕರ ಪೈಕಿ 5960 (ಶೇ. 82.75) ಮತ್ತು 7113 ಬಾಲಕಿಯರ ಪೈಕಿ 6257 (ಶೇ. 87.97) ಮಂದಿ ತೇರ್ಗಡೆಯಾಗಿದ್ದಾರೆ. ಮೊದಲ ಮೂರು ಸ್ಥಾನಗಳಲ್ಲಿ ರಾಮನಗರವನ್ನು ತರುವುದಾಗಿ ಪಣತೊಟ್ಟಿದ್ದ ಡಿಡಿಪಿಐ ತಂಡ 1 ಸ್ಥಾನ ಮೇಲೇರಿದ್ದಕ್ಕೆ ತೃಪ್ತಿಪಟ್ಟಿದೆ. ದ್ವಿತೀಯ ಪಿಯುಸಿಯಲ್ಲಿ ಕಳೆದ ವರ್ಷ ಶೇ. 56.79ರಷ್ಟು ಫಲಿತಾಂಶದೊಂದಿಗೆ 15ನೇ ಸ್ಥಾನದಲ್ಲಿದ್ದ ರಾಮನಗರವು ಈ ಬಾರಿ ಶೇ.65.94ರಷ್ಟು ಫಲಿತಾಂಶ ಪಡೆದಿದೆಯಾದರೂ 17ನೇ ಸ್ಥಾನಕ್ಕೆ ಕುಸಿದಿದೆ.
ಮಾಹಿತಿ ಇಲ್ಲ: ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶದ ಸಮಗ್ರ ಮಾಹಿತಿ ರಾಜ್ಯದ ವಿವಿಧೆಡೆ ಲಭ್ಯವಿದ್ದರೂ ರಾಮನಗರದ ಡಿಡಿಪಿಐ ಹಾಗೂ ಡಿಡಿಪಿಯು ಕಚೇರಿಗಳಲ್ಲಿ ಮಾತ್ರ ಸಿಗಲಿಲ್ಲ. ಕಚೇರಿ ಸಿಬ್ಬಂದಿಯು ಮಾಧ್ಯಮ ಪ್ರತಿನಿಧಿಗಳಿಗೆ ನಾಳೆ ಬನ್ನಿ ಎನ್ನುವ ಸಿದ್ಧ ಉತ್ತರ ನೀಡಿ ಸಾಗ ಹಾಕಿದರು.
ದೇವನಹಳ್ಳಿ ಕಾರ್ಮೆಲ್ ಶಾಲೆ ಶೇ.100 ಫಲಿತಾಂಶ
ದೇವನಹಳ್ಳಿ: 2012-13 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಕಾರ್ಮೆಲಲ್ಪ್ರೌಢಶಾಲೆಯಲ್ಲಿ ಶೇ. ನೂರರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥಾಪಕ ಕಾರ್ಯದರ್ಶಿ ವೈ.ಕೆ. ಚಂದ್ರಶೇಖರ್ ತಿಳಿಸಿದ್ದಾರೆ. ಶಾಲೆಯಲ್ಲಿ 50 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು 5 ಮಂದಿ ಅತ್ಯುನ್ನತ ಶ್ರೇಣಿ, 35 ಮಂದಿ ಪ್ರಥಮ ದರ್ಜೆ, 3 ಮಂದಿ ದ್ವಿತೀಯ ದರ್ಜೆ ಹಾಗೂ 7 ಮಂದಿ ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ತಿಳಿಸಿದ್ದಾರೆ. ಚಕ್ರವರ್ತಿ ಎಂಬ ವಿದ್ಯಾರ್ಥಿ ಶೇ.91.84 ಅಂಕ ಗಳಿಸಿದ್ದಾನೆ. ಕಳೆದ 10 ವರ್ಷಗಳಿಂದಲೂ ಶೇ.ನೂರಷ್ಟು ಫಲಿತಾಂಶ ಶಾಲೆಗೆ ದೊರಕುತ್ತಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ತನುಷಗೆ ಶೇ. 98.56
ದೇವನಹಳ್ಳಿ: ದೇವನಹಳ್ಳಿ ಶಿಲ್ಪಕಲಾಶಾಲೆ ರಸ್ತೆಯಲ್ಲಿರುವ ಸ್ಟರ್ಲಿಂಗ್ ಶಾಲೆಯ ವಿದ್ಯಾರ್ಥಿನಿ ಎಸ್.ಎನ್. ತನುಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 616 ಅಂಕಗಳನ್ನು ಗಳಿಸಿ (ಶೇ. 98.56) ಶಾಲೆಗೆ ಪ್ರಥಮ ಸ್ಥಾನ ಗಳಿಸಿ ದ್ದಾರೆ ಅಲ್ಲದೆ ಗಣಿತ ಮತ್ತು ಸಮಾಜ ವಿಜ್ಞಾನ ಎರಡು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾಳೆ ಎಂದು ಶಾಲೆಯ ಸಂಸ್ಥಾಪಕ ಕಾರ್ಯ ದರ್ಶಿ ಕೆ.ಬಿ.ಅಶೋಕ್ ತಿಳಿಸಿದ್ದಾರೆ. ಶಾಲೆಯಲ್ಲಿ 59 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 14 ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶೇ. ನೂರರಷ್ಟು ಫಲಿತಾಂಶ ದೊರೆತಿದೆ ಎಂದು ಅಶೋಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

