ಬೆಂಗಳೂರು ಗ್ರಾಮಾಂತರ

ಗಲಭೆಗಳ ಬಗ್ಗೆ ಪ್ರತ್ಯೇಕ ದೂರು

Published On :

ಕನಕಪುರ: ಕನಕಪುರ ತಾಲೂಕಿನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಗಲಭೆಗಳ ಬಗ್ಗೆ ವಿವಿಧ ಪ್ರಕರಣಗಳಲ್ಲಿ ಕನಕಪುರ ಹಾಗೂ ಕೋಡಿಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಶಾಸಕ ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ.ಸುರೇಶ್, ಜಿಪಂ ಸದಸ್ಯ ಇಕ್ಬಾಲ್ ಹುಸೇನ್, ಲೋಕೇಶ್ ಮತ್ತಿತರ 20 ಜನರ ಮೇಲೆ ಜೆಡಿಎಸ್ ಮುಖಂಡ ಎಲ್.ರಾಜು ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ, ಹಲಸೂರು ಗ್ರಾಮಕ್ಕೆ ತೆರಳುತ್ತಿದ್ದ ತಮ್ಮ ಇನೋವಾ ವಾಹನದ ಮೇಲೆ ಕಲ್ಲುಗಳನ್ನು ಬೀರಿ, ಸೈಜುಗಲ್ಲುಗಳನ್ನು ಎತ್ತಿಹಾಕಿ ಸಂಪೂರ್ಣ ಜಖಂಗೊಳಿಸಿದ್ದಾರೆ. ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಐಪಿಸಿ ಕಲಂ ರೀತ್ಯಾ ಹತ್ಯಾಯತ್ನ, ಜಾತಿನಿಂದನೆ ಕೇಸುಗಳನ್ನು ದಾಖಲಿಸಿದ್ದಾರೆ.
ವಿಶ್ವ ಚೇತನ ಕಾಲೇಜು: ಗಮನಾರ್ಹ ಸಾಧನೆ
ಆನೇಕಲ್: ಇಲ್ಲಿನ ವಿಶ್ವ ಚೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶ್ರೇಷ್ಠ ದರ್ಜೆ ಅಂಕಗಳನ್ನು ಪಡೆದಿದ್ದಾರೆ. ವಿಶ್ವ ಚೇತನ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಜ್ಯೋತ್ಸ್ನಾ ಎಚ್. ಸಿಂಗ್ 555 (ಶೇ.93) ಶ್ವೇತಾ ಎಸ್.544 (ಶೇ.91), ರೇಖಾ ಸಿ. 543 (ಶೇ.91), ಸಂದೀಪ್ ಎಂ. 540 (ಶೇ. 90), ಸವಿತಾ ಎನ್. 540 (ಶೇ.90), ವಿಶ್ವ ಚೇತನ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ನಿರೋಷಾ ಪಿ. 550 (ಶೇ. 92), ರವಿ ಎಸ್. 545 (ಶೇ. 91), ಸಂಧ್ಯ ಎಸ್. 520 (ಶೇ.87) ಶ್ರೇಯಸ್ ಎಸ್.511(ಶೇ.85), ಮಂಜುಶ್ರೀ ಎಂ.510 (ಶೇ. 85) ಅಂಕ ಪಡೆದಿದ್ದಾರೆ.
ಕನಸವಾಡಿ ಕಾಲೇಜಿಗೆ ಶೇ.65 ಫಲಿತಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.65 ಫಲಿತಾಂಶ ಲಭ್ಯವಾಗಿದೆ. ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ಸಂಯೋಜನೆಗಳಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 96 ವಿದ್ಯಾರ್ಥಿಗಳಲ್ಲಿ 61 ಮಂದಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೆ.ಬಿ.ಬಿಂದು-522(ಶೇ.87) ಫಲಿತಾಂಶ ಪಡೆದಿದ್ದಾಳೆ. ಉಳಿದಂತೆ 26 ಮಂದಿ ಪ್ರಥಮ ದರ್ಜೆ, 19 ಮಂದಿ ದ್ವಿತೀಯ ಮತ್ತು 16 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿ.ಕುಸುಮಾ-498 ಮತ್ತು ಕಲಾ ವಿಭಾಗದ ಆರ್.ಡಿ.ದಿವ್ಯ-485 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.