ದೇವನಹಳ್ಳಿ ತಾ.ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.84.75
ದೇವನಹಳ್ಳಿ: ದೇವನಹಳ್ಳಿ ತಾಲೂಕಿನಲ್ಲಿ 17 ಸರ್ಕಾರಿ ಪ್ರೌಢಶಾಲೆಗಳು, 6 ಅನುದಾನಿತ ಪ್ರೌಢಶಾಲೆಗಳು ಹಾಗೂ 32 ಖಾಸಗಿಪ್ರೌಢಶಾಲೆಗಳು ಸೇರಿ ಒಟ್ಟು 55 ಪ್ರೌಢಶಾಲೆಗಳಿದ್ದು 2012-13 ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ 2859 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು.
ಅವರಲ್ಲಿ 2423 ಮಂದಿ (ಶೇ.84.75) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮುನಿರಾಜು ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕು ಚನ್ನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ದೇವನಹಳ್ಳಿಯ ಕಾರ್ಮೆಲ್ ಆಂಗ್ಲಶಾಲೆ, ಜ್ಞಾನದೀಪ ಅಕಾಡೆಮಿ, ಎಸ್ಎಲ್ಎಸ್ ರೆಸಿಡೆನ್ಷಿಯಲ್ ಶಾಲೆ, ಕುವೆಂಪು ಜ್ಞಾನಭಂಡಾರ ಶಾಲೆ, ಆಕಾಶ್ ಇಂಟರ್ನ್ಯಾಷನಲ್ ಶಾಲೆ, ವಿಜಯಪುರದ ಎವರ್ಗ್ರೀನ್ ಶಾಲೆ, ಮಾಯಾ ಆಂಗ್ಲಶಾಲೆ, ಪ್ರಗತಿ ಪ್ರೌಢಶಾಲೆ, ಆವತಿಯ ನವೋದಯ ಶಾಲೆ, ಗಂಗವಾರದ ಸನ್ರೈಸ್ ಶಾಲೆ, ಬೂದಿಗೆರೆಯ ಸ್ಟರ್ಲಿಗ್ ಶಾಲೆ, ಕನ್ನಮಂಗಲದ ಎಂವಿಎಂ ಶಾಲೆ ಮತ್ತು ಇದೇ ಸಂಸ್ಥೆಯ ಆಲೂರು ದುದ್ದನಹಳ್ಳಿಯ ಮಾರುತಿ ವಿದ್ಯಾ ಮಂದಿರ ಶಾಲೆಗಳು ಸೇರಿ ಒಟ್ಟು 13 ಪ್ರೌಢಶಾಲೆಗಳಲ್ಲಿ ಶೇ. ನೂರರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅನುದಾನರಹಿತ ಶಾಲೆಗಳಲ್ಲಿ ದೇವನಹಳ್ಳಿ ಸ್ಟರ್ಲಿಂಗ್ ಶಾಲೆಯ ಎಸ್.ಎನ್.ತನುಷ (ಜಿಲ್ಲೇಯಲ್ಲೇ ಪ್ರಥಮ) ಶೇ.98.56, ವಿಜಯಪುರ ಎವರ್ಗ್ರೀನ್ ಶಾಲೆಯ ದೀಪ ಹಾಗೂ ಸ್ಟರ್ಲಿಗ್ ಶಾಲೆಯ ಸೌಂದರ್ಯ ಶೇ.96, ಸ್ಟರ್ಲಿಂಗ್ ಶಾಲೆಯ ನಿವೇದಿತ ಶೇ.95.84, ದೇವನಹಳ್ಳಿ ಆಕ್ಸ್ಫರ್ಡ್ ಶಾಲೆಯ ನಿಶಾಂತ್ ಶೇ.94.4 ಅಂಕಗಳನ್ನು ಪಡೆದಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ದೇವನಹಳ್ಳಿ ಜಿಜೆಸಿ ಶಾಲೆಯ ಮೇಘಶ್ರೀ ಶೇ.90.72, ಕಾರಹಳ್ಳಿಯ ಜಿಎಚ್ಎಸ್ ಎನ್.ಅಭಿಶೇಖ್ ಹಾಗೂ ಸಾದಹಳ್ಳಿಯ ಬಿ.ಎನ್.ಸುಷ್ಮ ಶೇ.88.48, ನಾರಾಯಣಪುರ ವರ್ಷ ಶೇ.88.16, ಚನ್ನಹಳ್ಳಿ ಜಿಎಚ್ಎಸ್ ಎಸ್. ಆಶಾ ಶೇ.87.68 ಅಂಕಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

