ನಾನೇ ಕ್ಷೇತ್ರದ ಮೊದಲ ಹ್ಯಾಟ್ರಿಕ್ ಹೀರೋ: ಬಾಲಕೃಷ್ಣ
ಕ.ಪ್ರ.ವಾರ್ತೆ, ಮಾಗಡಿ, ಮೇ 8
ಕೆಂಪೇಗೌಡರ ನಾಡಲ್ಲಿ ನಾನೇ ಕ್ಷೇತ್ರದ ಮೊದಲ ಹ್ಯಾಟ್ರಿಕ್ ಹೀರೋ ಎಂದು ಹೇಳಲು ಸಂತಸವಾಗುತ್ತಿದೆ.ನಿರೀಕ್ಷೆಗೂ ಮೀರಿ ಅಭೂತಪೂರ್ವ ಬಹುಮತ ನೀಡಿ ಗೆಲವು ತಂದುಕೊಟ್ಟ ಕ್ಷೇತ್ರದ ಮತದಾರರಿಗೆ ನಾನು ಮೊದಲು ಕೃತಜ್ಞತೆ ಸಲ್ಲಿಸುವುದಾಗಿ ಜೆಡಿಎಸ್‌ನಿಂದ ಜಯಬೇರಿ ಭಾರಿಸಿದ ಎಚ್.ಸಿ. ಬಾಲಕೃಷ್ಣ ಸಂತಸ ಹಂಚಿಕೊಂಡರು.
ಅವರು ಮಾಗಡಿ ಪಟ್ಟಣದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಮಾತನಾಡುತ್ತಾ ನನ್ನ ಗೆಲವಿಗೆ ನಾನು ಕಳೆದ 15 ವರ್ಷಗಳಿಂದ ಕೈಗೊಂಡ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆಯಾಗಿದೆ.
ನಾನು ಮೊದಲೆ ಹೇಳಿದಂತೆ ನಾನು ಹ್ಯಾಟ್ರಿಕ್ ಹೀರೋ ಆಗುವ ನಿರೀಕ್ಷೆಯಿಂದಲೇ ಮತದಾರರ ಮುಂದೆ ಅಭಿವೃದ್ಧಿಯ ಭರವಸೆಗಳನ್ನು ಮುಂದಿಟ್ಟು ಮತಯಾಚಿಸಿದ್ದೆ.
ಮತದಾರರು ನನ್ನ ನಂಬಿಕೆ ಹುಸಿ ಮಾಡಲಿಲ್ಲ. ಭಗವಂತ ದಯೆಯಿಂದ, ಮತದಾರರ ಆಶೀರ್ವಾದಿಂದ ಅಭೂತಪೂರ್ವ ಗೆಲವು ಸಾಧಸಿದ್ದೇನೆ ಎಂದರು.
ಕ್ಷೇತ್ರಕ್ಕೆ ಎತ್ತಿನ ಹೊಳೆ ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಎಲ್ಲರ ಸಹಕಾರ ಪ್ರೋತ್ಸಾಹದಿಂದ ಶ್ರಮಿಸುತ್ತೇನೆ ಎಂದರು.
ಕ್ಷೇತ್ರದಲ್ಲೆಡೆ ವಿಜಯೋತ್ಸವ: ಜೆಡಿಎಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಗೆಲವು ಪ್ರಕಟಣೆಯಾಗುತ್ತಿದ್ದಂತೆ ಕ್ಷೇತ್ರದ್ಯಾದಂತ ಅಭಿಮಾನಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಜೈಕಾರದ ಘೋಷಣೆಯೊಂದಿಗೆ ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಕಾರ್ಯಕರ್ತರು ಶುಭಾಶಯ ವಿನಿಮಯ ಮಾಡಿಕೊಂಡರು. ಜೆಡಿಎಸ್ ಮುಖಂಡರಾದ ರೂಪೇಶ್ ಕುಮಾರ್, ಪುರಸಭಾ ಸದಸ್ಯ ನಾಗೇಂದ್ರ, ಬಮೂಲ್ ನರಸಿಂಹಮೂರ್ತಿ, ಜಿ.ಪಂ. ಅಧ್ಯಕ್ಷ ಮುದ್ದುರಾಜ ಯಾದವ್, ಧನಂಜಯ, ಹಂಸಕುಮಾರಿ, ರುಕ್ಮಿಣಿದೇವಿ ರಂಗನಾಥ್, ರಂಗೇಗೌಡ, ಪುರುಷೋತ್ತಮ್, ಪೊಲೀಸ್ ರಾಮಣ್ಣ, ಜಿ.ವಿ. ರಾಮಣ್ಣ, ಗಂಗಾಧರ್, ಕೃಷ್ಣಮೂರ್ತಿ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಅಭಿಮಾನಿಗಳ ಬಳಗ ಜೆಡಿಎಸ್ ಬಾವುಟ ಹಿಡಿದು ಜೈಕಾರದೊಂದಿಗೆ ವಿಜಯೋತ್ಸವ ಆಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

