ಬಿಜೆಪಿ ವಿರೋಧಿ ಅಲೆ ಸೋಲಿಗೆ ಕಾರಣ: ಎ. ನಾರಾಯಣಸ್ವಾಮಿ
ಆನೇಕಲ್ಲು: ತಾಲೂಕಿನ ಮಹಾ ಜನತೆ 65,282 ಮತಗಳನ್ನು ನೀಡಿ ಅಭಿಮಾನ ತೋರಿರುವುದಕ್ಕೆ ಕೃತಜ್ಞತೆಗಳು ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಮಾತನಾಡಿ ಜನಾದೇಶವನ್ನು ವಿನಮ್ರವಾಗಿ ಸ್ವೀಕರಿಸಿ ತಾಲೂಕಿನ ಸಮಾಜ ಸೇವೆಯನ್ನು ಮುಂದುವರಿಸುತ್ತೇನೆ ಎಂದರು.
ತಮ್ಮ ಸೋಲಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದಿತು. ನೀರಿನ ಬರ ನೀಗಿಸಲು ಮಾಡಿದ ಪ್ರಯತ್ನ ಸಕಾಲದಲ್ಲಿ ಸಂಪೂರ್ಣವಾಗಲಿಲ್ಲ. ಬಿಜೆಪಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಎಲ್ಲ ವರ್ಗದ ಜನರಿಗೂ ತಲುಪಿಸಿದ ತೃಪ್ತಿ ಇದೆ. ರೈತರಿಗೆ ಬಡ್ಡಿ ರಹಿತ ಕೃಷಿ ಸಾಲ, ಹೈನು ರೈತರಿಗೆ ಪ್ರೋತ್ಸಾಹ ಧನ, ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳು, ಆನೇಕಲ್ ಪಟ್ಟಣಕ್ಕೆ ಬಿಎಂಟಿಸಿ ಬಸ್ ವ್ಯವಸ್ಥೆ ನನ್ನ ಅಳಿಲು ಸೇವೆಯಾಗಿದೆ. ಸಚಿವನಾಗಿ ರಾಜ್ಯ ಸಂಚಾರದಲ್ಲಿದ್ದರೂ ಕ್ಷೇತ್ರವನ್ನು ಎಂದೂ ಕಡೆಗಣಿಸಿಲ್ಲ. ಕಾರ್ಯಕರ್ತರ ಪಡೆ ನಿಷ್ಠೆಯಿಂದ ಕೆಲಸ ಮಾಡಿದೆ. ಅದೇ ತಂಡದ ಜತೆ ಪಕ್ಷದ ಬಲವರ್ಧನೆ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಜನತೆಯ ಸಂಪರ್ಕದಲ್ಲಿರುತ್ತೇನೆ ಎಂದರು.
ಅಭಿನಂದನೆಗಳು: ಸಮಾಜ ಕಲ್ಯಾಣ ಮಾಜಿ ಸಚಿವ ಎ. ನಾರಾಯಣಸ್ವಾಮಿ ನೂತನ ಶಾಸಕ ಬಿ. ಶಿವಣ್ಣಗೆ ಅಭಿನಂದನೆ ಸಲ್ಲಿಸಿದ್ದಾರೆ. ಆನೇಕಲ್ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರು. ಕಾಮಗಾರಿ ಪ್ರಗತಿಯಲ್ಲಿದೆ. ನನ್ನ ಕನಸಾದ ಶಿಂಷಾ ನದಿ ನೀರು ಪೂರೈಕೆ ಯೋಜನೆಗೆ 480 ಕೋಟಿ ಮಂಜೂರಾಗಿದೆ. ಇಗ್ಗಲೂರು-ಗುಮ್ಮಳಾಪುರ ಅಂತಾರಾಜ್ಯ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಬೊಮ್ಮಂಡಹಳ್ಳಿ, ಮುತ್ಯಾಲಮಡು ನೀರಾವರಿ ಯೋಜನೆಗಳೂ ಚಾಲನೆಯಲ್ಲಿವೆ. ಎಲ್ಲ ಕಾಮಗಾರಿಗಳನ್ನೂ ಮುಂದುವರಿಸಿ ಎಂದು ತಿಳಿಸಿದ ಅವರು ತಮ್ಮ ಸಲಹೆ ಸಹಕಾರ ನೀಡುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

