ಎಸ್ಸೆಸ್ಸೆಲ್ಸಿ ಪರೀಕ್ಷೆ: 4 ಶಾಲೆಗಳಿಗೆ ಶೇ.100 ಫಲಿತಾಂಶ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಮೇ 9
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡಬಳ್ಳಾಪುರದ 4 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ.
ಇಲ್ಲಿನ ಶ್ರೀದೇವಲ ಮಹರ್ಷಿ ವಿದ್ಯಾನಿಕೇತನ ಪ್ರೌಢಶಾಲೆ, ಸರಸ್ವತಿ ಪ್ರೌಢಶಾಲೆ, ನಿವೇದಿತಾ ಆಂಗ್ಲ ಪ್ರೌಢಶಾಲೆ ಮತ್ತು ಸರ್ಕಾರಿ ತೆಲುಗು ಪ್ರೌಢಶಾಲೆಯ ತೆಲುಗು ಮಾಧ್ಯಮ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಪಡೆದಿದ್ದಾರೆ.
ದೇವಲ ಮಹರ್ಷಿ ಶಾಲೆ: ಈ ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ 29 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಇಬ್ಬರು ಉನ್ನತ ಶ್ರೇಣಿ, 12 ಮಂದಿ ಪ್ರಥಮ, 8 ಮಂದಿ ದ್ವಿತೀಯ ಮತ್ತು 7 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಯು.ಆರ್.ಧನುಷ್-538 ಮತ್ತು ವಿ.ಪವನಕುಮಾರ್-537 ಅಂಕಗಳನ್ನು ಪಡೆದಿದ್ದು ವಿದ್ಯಾರ್ಥಿಗಳನ್ನು ದೇವಾಂಗ ಮಂಡಲಿಯ ಕಾರ್ಯಕಾರಿ ಸಮಿತಿ ಮತ್ತು ಶಾಲಾ ಆಡಳಿತ ಮಂಡಲಿ ಅಭಿನಂದಿಸಿದೆ.
ಸರಸ್ವತಿ ಶಾಲೆ: ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ 59 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಡಿ.ಎಸ್.ಜಗದೀಶ್ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ. ಶಾಲೆಯ 10 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 34 ಮಂದಿ ಪ್ರಥಮ ದರ್ಜೆ, 11 ಮಂದಿ ದ್ವಿತೀಯ ದರ್ಜೆ ಮತ್ತು 4 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಲಿ ಅಭಿನಂದಿಸಿದೆ.
ನಿವೇದಿತಾ ಶಾಲೆ: ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ 27 ಮಂದಿ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. 5 ಮಂದಿ ಉನ್ನತ ಶ್ರೇಣಿ, 21 ಮಂದಿ ಪ್ರಥಮ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಶಾಲೆಯ ಎ.ಎನ್. ಪದ್ಮಿನಿ-581, ಅನಿತಾ ತಾಪ-560, ಡಿ.ಆರ್.ಅಜಯಕುಮಾರ್-547, ಕಿಶೋರ್ಗೌಡ-539 ಮತ್ತು ಅನಿಲ್ಕುಮಾರ್-533 ಅಂಕಗಳನ್ನು ಪಡೆದಿದ್ದಾನೆ. ವಿದ್ಯಾರ್ಥಿಗಳನ್ನು ಆಡಳಿತ ಮಂಡಲಿ ಅಭಿನಂದಿಸಿದೆ.
ತೆಲುಗು ಶಾಲೆ: ಇಲ್ಲಿನ ಸರ್ಕಾರಿ ತೆಲುಗು ಶಾಲೆಯಲ್ಲಿ ತೆಲುಗು ಮಾಧ್ಯಮದಲ್ಲಿ ಪರೀಕ್ಷೆ ಬರೆದ ಎಲ್ಲ 41 ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿದ್ದು ಶೇ.100 ಫಲಿತಾಂಶ ಲಭಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

