ಬೆಂಗಳೂರು ಗ್ರಾಮಾಂತರ

ಗಾಳಿ ಮಳೆಗೆ ಮನೆ ಕುಸಿತ, ಒಬ್ಬನಿಗೆ ಕಾಲು ಮುರಿತ

Published On :

ಕ.ಪ್ರ.ವಾರ್ತ್ಣೆ ಸೂಲಿಬೆಲೆ  ಮೇ 10
ಹೊಸಕೋಟೆ ತಾಲೂಕಿನ ನಂದಗುಡಿ ಮತ್ತು ಜಡಿಗೇನಹಳ್ಳಿ ಹೋಬಳಿಯ ಸುತ್ತಮುತ್ತ ಗುರುವಾರ ಸಂಜೆ ಬೀಸಿದ ರಭಸದ ಗಾಳಿ ಮಳೆಗೆ ಮನೆಯೊಂದು ಕುಸಿದ ಓರ್ವ ವೃದ್ಧನಿಗೆ ಕಾಲು ಮುರಿದಿದ್ದು, ಸುಮಾರು 25ಕ್ಕೂ ಹೆಚ್ಚು ಮನೆಗಳು ಜಖಂಗೊಡಿವೆ.
ಬಾಳೆ, ದ್ರಾಕ್ಷಿ ಹಾಗೂ ಮಾವಿನ ತೋಟಗಳ ಬೆಳೆ ನೆಲಕಚ್ಚಿದ್ದು, ವಿದೇಶಿ ತಳಿಯ ಸಸ್ಯ ಉತ್ಪಾದನೆ ಮಾಡುತ್ತಿದ್ದ ನರ್ಸ್ಸರಿ ಶೆಡ್‌ಗಳು ಸಂಪೂರ್ಣ ಕುಸಿದು ಬಿದ್ದು ಲಕ್ಷಾಂತರ ರು.ನಷ್ಟವಾಗಿದೆ.
ಮುಗಬಾಳ ಗ್ರಾಪಂ ವ್ಯಾಪ್ತಿಯಲ್ಲಿರುವ ನಕ್ಕನಹಳ್ಳಿ ಗ್ರಾಮದಲ್ಲಿ ಮುನಿಯಪ್ಪ ಎಂಬವರಿಗೆ ಸೇರಿದ ಮನೆ ಗಾಳಿಯಿಂದ ಸಂಪೂರ್ಣ ಕುಸಿದಿದ್ದು, ಈ ವೇಳೆ ಮನೆಯಲ್ಲಿ ಮುನಿಯಪ್ಪ ಸಿಕ್ಕಿಹಾಕಿಕೊಂಡ ಪರಿಣಾಮ ಕಾಲು ಮುರಿದಿದೆ. ತಲೆಗೆ ಗಂಭೀರ ಪ್ರಮಾಣದ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಗ್ರಾಮದ ನಾಲ್ಕರಿಂದ 5 ಮನೆಗಳಿಗೆ ಶೀಟುಗಳು ಹಾರಿ ಹೋಗಿವೆ. 2 ಬಾಳೆ ತೋಟ, ದ್ರಾಕ್ಷಿ ಹಾಗೂ ಮಾವಿನ ತೋಟ ಹಾಳಾಗಿದೆ. ಇದೇ ಪ್ರದೇಶದ ಒಳಗೆರೆಪುರ ಗ್ರಾಮದಲ್ಲಿ ವಿದೇಶಿ ತರಕಾರಿ ಸಸ್ಯಗಳನ್ನು ಉತ್ಪಾದನೆ ಮಾಡುತ್ತಿದ್ದ ಆಂಜಿನಪ್ಪ ಎಂಬವರಿಗೆ ಸೇರಿದ ಎರಡು ಎಕರೆಯ ನರ್ಸ್ಸರಿ ಶೆಡ್‌ಗಳು ನೆಲಕಚ್ಚಿವೆ. ಸಮಾರು 12 ಲಕ್ಷ ನಷ್ಟವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಅಮ್ಜಾದ್ ಪಾಷ ತಿಳಿಸಿದ್ದಾರೆ. ಇದಲ್ಲದೇ ಅಟ್ಟೂರು, ನಿಡಘಟ್ಟ, ಅತ್ತಿವಟ್ಟ ಗ್ರಾಮಗಳಲ್ಲಿ 25ಕ್ಕೂ ಹೆಚ್ಚ ಮನೆಗಳು  ಜಖಂಗೊಡಿವೆ. 8 ರಿಂದ 10 ಎಕರೆಯಷ್ಟು ಬೆಳೆ ಫಸಲು ಹಾಳಾಗಿದೆ. 15 ರಿಂದ 20 ಮರಗಳ ನೆಲಕ್ಕುರಳಿದ್ದು ಲಕ್ಷಾಂತರ ರು. ರೈತರಿಗೆ ನಷ್ಟವಾಗಿದೆ ಎಂದು ರಾಜಸ್ವ ನಿರೀಕ್ಷ ಮರಿಯಪ್ಪ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.