ಕೊಂಗಾಡಿಯಪ್ಪ ಕಾಲೇಜಿನ 27 ವಿದ್ಯಾರ್ಥಿಗಳು ಅಗ್ರಶ್ರೇಣಿ
ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ, ಮೇ 10
ಇಲ್ಲಿನ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.75.31 ಫಲಿತಾಂಶ ಲಭ್ಯವಾಗಿದೆ.
ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 482 ವಿದ್ಯಾರ್ಥಿಗಳ ಪೈಕಿ 353 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.73, ವಾಣಿಜ್ಯ ವಿಭಾಗದಲ್ಲಿ ಶೇ.76.96 ಮತ್ತು ಕಲಾ ವಿಭಾಗದಲ್ಲಿ ಶೇ.67.7 ಫಲಿತಾಂಶ ದೊರೆತಿದೆ ಎಂದು ಪ್ರಾಂಶುಪಾಲ ಮೇಜರ್ ಮಹಾಬಲೇಶ್ವರ್ ತಿಳಿಸಿದ್ದಾರೆ.
ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 12, ವಾಣಿಜ್ಯ ವಿಭಾಗದಲ್ಲಿ 14 ಮತ್ತು ಕಲಾ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿನಿ ಸೇರಿದಂತೆ ಒಟ್ಟು 27 ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 117 ಮಂದಿ ಪ್ರಥಮ ದರ್ಜೆ ಪಡೆದಿದ್ದಾರೆ.
ಅಗ್ರಶ್ರೇಯಾಂಕಿತರು: ವಿಜ್ಞಾನ ವಿಭಾಗದ ಎನ್.ಚಂದ್ರಿಕಾ-567, ಎಚ್.ವಿ.ಶ್ರೀಹರ್ಷ-562, ಕೆ.ಭಾರ್ಗವರಾಮ-551, ಎಚ್.ಆರ್.ಕಾರ್ತಿಕ್-550, ವಿ.ಮಂಜುನಾಥ್-533, ಕೆ.ಆರ್.ರಾಘವೇಂದ್ರ-530, ಎಂ.ಎಂ.ಅಂಜಲಿ-523, ಅಖಿಲಾ ಆರ್.ಶೆಟ್ಟಿ-518, ಫರ್ಹೀನ್-518, ಆರ್.ನವೀನ್‌ಕುಮಾರ್-516, ಕೆ.ಸಿ.ವರ್ಷ-516 ಮತ್ತು ಡಿ.ಎಸ್.ಕವಿತ-514 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿ.ನಂದಿನಿ-556, ವಿ.ನಯನ-555, ವೈ.ಎಂ.ರಕ್ಷಿತ-548, ಡಿ.ವಿ.ಅಶ್ವಿನಿ-544, ಡಿ.ಆರ್.ಮೋಹನ್‌ಕುಮಾರ್-544, ಬಿ.ಎಸ್.ಯಶ್ವಂತ್-543, ಎಸ್.ಸುರೇಶ್-540, ಜೆ.ದಿವ್ಯ-540, ಡಿ.ಎ.ಶ್ವೇತರಾಣಿ-534, ಪಿ.ಎ.ಅಶ್ವಿನಿ-529, ಡಿ.ಎಸ್.ಸೌಜನ್ಯ-524, ಎನ್.ರಾಕೇಶ್-517, ವಿ.ತನುಜ-515, ಹರ್ಷಿತ ಜೈನ್-513 ಮತ್ತು ಕಲಾ ವಿಭಾಗದಲ್ಲಿ ಡಿ.ಎಸ್.ಮಮತಾ ಕುಮಾರಿ-516 ಅಂಕಗಳನ್ನು ಪಡೆದು ಅಗ್ರಶ್ರೇಣಿ ಪಡೆದಿದ್ದಾರೆ.
100ಕ್ಕೆ 100ಣ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳು ಕೆಲ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಲೆಕ್ಕಶಾಸ್ತ್ರದಲ್ಲಿ ಬಿ.ವಾಣಿ, ವಿ.ನಂದಿನಿ, ವಿ.ನಯನ, ವೈ.ಎಂ.ರಕ್ಷಿತ, ಡಿ.ವಿ.ಅಶ್ವಿನಿ, ಬಿ.ಎಸ್.ಯಶ್ವಂತ್, ಭೌತಶಾಸ್ತ್ರದಲ್ಲಿ ಎಚ್.ವಿ.ಶ್ರೀಹರ್ಷ, ಗಣಕ ವಿಜ್ಞಾನದಲ್ಲಿ ಡಿ.ಆರ್.ಮೋಹನ್‌ಕುಮಾರ್ 100ಕ್ಕೆ 100 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

