ಬೆಂಗಳೂರು ಗ್ರಾಮಾಂತರ

ಒಂದೇ ಕಡೆ ಕೂತು ಕೆಲಸ ನಿರ್ವಹಿಸುವುದರಿಂದ ಮಾನಸಿಕ ಕಾಯಿಲೆ: ಡಾ. ಎಚ್.ಎಸ್. ಅನುಪಮಾ

Published On :

ಬೆಂಗಳೂರು: ಗಾರ್ಮೆಂಟ್ಸ್ ಮಹಿಳೆಯರು ದೀರ್ಘಕಾಲ ಒಂದೇ ಕಡೆ ಕೂತು ಕೆಲಸ ನಿರ್ವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎಂದು ವೈದ್ಯೆ ಡಾ.ಎಚ್.ಎಸ್. ಅನುಪಮಾ ಹೇಳಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಡಾ. ಲೀಲಾವತಿ ದೇವದಾಸ್ ದತ್ತಿ ಕಾರ್ಯಕ್ರಮದ ಅಂಗವಾಗಿ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಆರೋಗ್ಯ ಕುರಿತು ಅವರು ಉಪನ್ಯಾಸ ನೀಡಿದರು.
ಗಾರ್ಮೆಂಟ್ಸ್ ನೌಕರರನ್ನೊಳಗೊಂಡಂತೆ ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದು ನಾನಾ ಕಾಯಿಲೆಗಳಿಗೆ ಆಹ್ವಾನವಿತ್ತಂತೆ. ಇದರಿಂದ ಸ್ನಾಯುಗಳ ಸವೆತ, ಬೆನ್ನುನೋವು, ಕುತ್ತಿಗೆ ನೋವು, ಕಣ್ಣಿನ ತೊಂದರೆ, ಅನಿಮಿಕ್ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತಿವೆ. ಜತೆಗೆ ಕುಟುಂಬ ನಿರ್ವಹಣೆ ಹಾಗೂ ಉದ್ಯೋಗದ  ಹೊರೆಯಿಂದಾಗಿ ತೀವ್ರ ಒತ್ತಡಕ್ಕೆ ಒಳಗಾಗುವ ಮಹಿಳೆಯರಲ್ಲಿ ಮಾನಸಿಕ ತುಮುಲಗಳಿಂದಾಗಿ ಮುಟ್ಟಿನ ಸಮಸ್ಯೆ ಹೆಚ್ಚಾಗುತ್ತಿವೆ. ಹೆಚ್ಚು ಹೊತ್ತು ಕೂತು ಕೆಲಸ ನಿರ್ವಹಣೆ ಹಾಗೂ ಉದ್ಯೋಗದ ಹೊರೆಯೇ ಇದಕ್ಕೆ ಪ್ರಮುಖ ಕಾರಣ ಎಂದರು.
ಕಾಯಿಲೆ ತಡೆ ಅಗತ್ಯ: ಎಲ್ಲಾ ವರ್ಗದ ನೌಕರರಿಗೂ ಕಾಯಿಲೆಗಳು ಸಹಜ. ಆದರೆ, ಇಂತಹ ನೌಕರರು ಸಾಧ್ಯವಾದಷ್ಟು ಕೆಲಸದ ಮಧ್ಯೆ ಆಗಾಗ ಬೇರೆ ಕಡೆ ಗಮನ ಹರಿಸುವ ಮೂಲಕ ಮನಸ್ಸು ಮತ್ತು ದೇಹವನ್ನು ಸಮತೋಲನಗೊಳಿಸಿಕೊಳ್ಳಬೇಕು. ಆಗ ಕಾಯಿಲೆಗಳನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದು ಎಂದು ಸಲಹೆಯಿತ್ತರು.
ಜತೆಗೆ ಪೌಷ್ಟಿಕ ಆಹಾರ ಸೇವನೆ ಅತಿಯಾಗಿ ಮಾಡುವುದು ಅತ್ಯವಶ್ಯ. ಅಲ್ಲದೇ ಮನರಂಜನಾ ಕಾರ್ಯಕ್ರಮಗಳತ್ತ ಮನಸ್ಸನ್ನು ಬೇರೆಡೆಗೆ ಸೆಳೆಯುವುದರಿಂದ ಪ್ರಫುಲ್ಲಗೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳ ಗಾರ್ಮೆಂಟ್ಸ್ ನೌಕರರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಡಾ. ಲೀಲಾವತಿ ದೇವದಾಸ್, ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮತ್ತಿರರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.