ದಲಿತರು ಸಿಎಂ ಸ್ಥಾನದಿಂದ ದೂರ'
ಆನೇಕಲ್ಲು: ದಲಿತರೆಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೇ ದಲಿತರು ಎಂಬುದು ದೇಶ ಮನಗಂಡ ಸತ್ಯ. ದಲಿತ ಬಂಧುಗಳನ್ನು ಮತ ಬ್ಯಾಂಕ್ನಂತೆ ಉಪಯೋಗಿಸಿಕೊಂಡಿರುವ ಕಾಂಗ್ರೆಸ್ ರಾಜ್ಯದ ಸಿಎಂ ಗದ್ದುಗೆಯಲ್ಲಿ ದಲಿತ ನಾಯಕರೊಬ್ಬರನ್ನು ಕೂರಿಸದೇ ಇರುವುದು ಈ ನಾಡಿನ ದೌರ್ಭಾಗ್ಯ ಎಂದು ಕರ್ನಾಟಕ ಭೂ ಹೀನ ಹಾಗೂ ವಸತಿ ಹೀನರ ಸಂಘದ ರಾಜ್ಯಾಧ್ಯಕ್ಷ ತಿರುಪಾಳ್ಯ ಕೃಷ್ಣ ಆರೋಪಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಮಾತನಾಡಿ, ನೆಹರು, ಇಂದಿರಾಜಿ, ರಾಜೀವ್ ಗಾಂಧಿರವರ ತಲೆಮಾರಿನಿಂದಲೂ ದಲಿತ ಬಂಧುಗಳು ಕಾಂಗ್ರೆಸ್ ಕೈ ಬಲಪಡಿಸುತ್ತಲೇ ಇದ್ದಾರೆ. ರಾಜ್ಯದ ಆಡಳಿತದಲ್ಲಿ ದಲಿತ ಮಂತ್ರಿಗಳು ಯಶಸ್ವಿಯಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಬಸವಲಿಂಗಪ್ಪ, ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಕೇಶವಮೂರ್ತಿ ಹಾಗೂ ಖರ್ಗೆಯವರು ದಕ್ಷ ಹಾಗೂ ಸ್ವಚ್ಚ ಆಡಳಿತ ನೀಡಿದ್ದಾರೆ. ಇವರಾರನ್ನು ಸಿಎಂ ಗಾದಿಯ ಹತ್ತಿರಕ್ಕೂ ಕಾಂಗ್ರೆಸ್ ಬಿಟ್ಟುಕೊಳ್ಳಲಿಲ್ಲ. ಈ ಬಾರಿ ಖರ್ಗೆಯವರನ್ನು ಸಿಎಂ ಎಂದು ಬಿಂಬಿಸಿ ಪ್ರಪಾತಕ್ಕೆ ತಳ್ಳಲಾಗಿದೆ. ದಲಿತರ ಮತ ಬೇಕು, ಮುಖಂಡರು ಬೇಡವೆಂದರೇ ಸಾಮಾಜಿಕ ನ್ಯಾಯಕ್ಕೆ ಅರ್ಥವೆಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ವೆಂಕಟೇಶ್, ರಾಜೇಶ್, ರವಿ ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

