'ಶೇ.25ರಷ್ಟು ನೀರು, ಆಹಾರ ಕೊರತೆ'
ಕ.ಪ್ರ. ವಾರ್ತೆ ಕನಕಪುರ ಮೇ 27
ವಿಶ್ವದ ಶೇ.25ರಷ್ಟು ಮಂದಿ ಕುಡಿಯುವ ನೀರು, ಆಹಾರ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿ ಪ್ರಗತಿಯೆಂಬುದೇ ಪ್ರಶ್ನಾರ್ಥಕ ಚಿಹ್ನೆಯಾಗಿ ಕಂಡುಬರುತ್ತದೆ. ರಾಜ್ಯ ದೇಶಗಳು ಮುಂದುವರೆಯಲು ಶಿಕ್ಷಣ ಅತ್ಯಂತ ಪ್ರಬಲ ಮಾಧ್ಯಮವಾಗಿದ್ದು ಇದರೊಂದಿಗೆ ಆಧ್ಯಾತ್ಮಿಕ ಧ್ಯಾನ ಶಿಕ್ಷಣವೂ ಸೇರಿದರೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಸಿಬಿಐ ಮಾಜಿ ನಿರ್ದೇಶಕ ಪದ್ಮಶ್ರೀ ಡಾ. ಕಾರ್ತಿಕೇಯನ್ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಕೆಬ್ಬೆದೊಡ್ಡಿಯಲ್ಲಿ ಆಯೋಜಿಸಿದ್ದ ನಾಲ್ಕುದಿನಗಳ ದಶಮಾನೋತ್ಸವ ಸಮಾರಂಭದಲ್ಲಿ ಬುದ್ಧಪೂರ್ಣಿಮೆ ಕಾರ್ಯಕ್ರಮದ ಸಮಾರೋಪ ಭಾಷಣ ನೀಡಿದರು. ಬ್ರಹ್ಮರ್ಷಿ ಸುಭಾಷ್ ಪತ್ರೀಜಿ ಅಧ್ಯಕ್ಷತೆ ವಹಿಸಿ ಧ್ಯಾನದ ಮಹತ್ವವನ್ನು ವಿವರಿಸಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಸಾಯಿಬಿಂದು ಶ್ರೀನಿವಾಸ್ ಮಾತನಾಡಿ ಬುದ್ಧಪೌರ್ಣಿಮೆಯ ವಿಶೇಷತೆಯೆಂದರೆ ಗೌತಮಬುದ್ಧರ ಹುಟ್ಟು, ಜ್ಞಾನೋದಯ, ಪರಿನಿರ್ವಾಣಗಳೆಲ್ಲವೂ ಈದಿನದಂದೇ ನಡೆದಿವೆ. ಹುಣ್ಣಿಮೆ ದಿನಗಳಲ್ಲಿ ವಿಶ್ವಶಕ್ತಿಯ ಮಹಾ ಪ್ರವಾಹ ಜೋರಾಗಿದ್ದು ಧ್ಯಾನಿಗಳಿಗೆ ವಿಶೇಷ ಚೇತನ ಅನುಭವಗಳನ್ನು ನೀಡುತ್ತದೆ. ಧ್ಯಾನಿಗಳು ಸಸ್ಯಾಹಾರಿಗಳಾಗಬೇಕು, ಉತ್ತಮ ನಡೆನುಡಿಗಳನ್ನು ರೂಪಿಸಿಕೊಂಡು ಸಮುದಾಯಕ್ಕೆ ಮಾದರಿಯಾಗಬೇಕು. ಧ್ಯಾನವನ್ನು ಪಸರಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಭುವನೇಶ್ವರದಿಂದ ಆಗಮಿಸಿದ್ದ ಒಡೆಸ್ಸಿ ನೃತ್ಯ ಕಲಾವಿದರ ತಂಡ ನೃತ್ಯ ಪ್ರದರ್ಶನ ನೀಡಿತು. ಸುಮಾರು ಮೂರು ಸಾವಿರಕ್ಕೂ ಹೆಚ್ಚುಮಂದಿ ಬೆಳದಿಂಗಳ ಸಾಮೂಹಿಕ ಧ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಿರಮಿಡ್ವ್ಯಾಲಿ ನಿರ್ದೇಶಕರುಗಳಾದ ಪಿಎಸ್ಆರ್ಕೆ ಪ್ರಸಾದ್, ಶಿವರಾಮಪ್ಪ, ವ್ಯವಸ್ಥಾಪಕ ಕೆಬ್ಬೆದೊಡ್ಡಿ ನಾಗರಾಜು, ಡಾ.ಎ. ಸತ್ಯನಾರಾಯಣ, ಲಲಿತಾ ಸುಬ್ರಹ್ಮಣ್ಯಂ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

