ಜ್ಞಾನದ ಹರಿವು ವಿಸ್ತರಿಸಿಕೊಳ್ಳಲು ಸವಾಲು ಎದುರಿಸಬೇಕಿದೆ
ಕನ್ನಡಪ್ರಭ ವಾರ್ತೆ, ಕನಕಪುರ, ನ.9
ಜ್ಞಾನದ ಹರಿವನ್ನು ವಿಸ್ತರಿಸಿಕೊಳ್ಳಲು, ಪ್ರಸ್ತುತ ವಿಜ್ಞಾನ ತಂತ್ರಜ್ಞಾನಕ್ಕೆ ಭಾಷೆಯನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವ ಸವಾಲುಗಳನ್ನು ಕನ್ನಡವು ಎದುರಿಸಬೇಕಾಗಿದೆ ಎಂದು ಡಾ.ಕೃಷ್ಣೇಗೌಡ ಹೇಳಿದ್ದಾರೆ. ಅವರು ಕನಕಪುರ ತಾಲೂಕು ಕೋಡಿಹಳ್ಳಿಯ ಶ್ರೀಮತಿ ಗೌರಮ್ಮಕೆಂಪೇಗೌಡ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ 58ನೇ ಕನ್ನಡ ರಾಜ್ಯೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಪ್ರಾಂಶುಪಾಲರಾದ ಪ್ರೊ.ಎಲ್ಲಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ, ಪ್ರಾಧ್ಯಾಪಕಿ ಡಾ. ನೇತ್ರಾವತಿಗೌಡ ಮಾತನಾಡುತ್ತಾ, ಸ್ವಂತ ಭಾಷೆ, ಲಿಪಿ, ಸಂಸ್ಕೃತಿ, ಪ್ರಾಚೀನ ಇತಿಹಾಸ, ಜಾನಪದಗಳನ್ನು ಒಳಗೊಂಡ ಕನ್ನಡವು ಇಂದು ಆತಂಕಕ್ಕೆ ಒಳಗಾಗಲು ಕನ್ನಡಿಗರ ನಿರಭಿಮಾನವೇ ಕಾರಣ. ನಮ್ಮ ವೈಶಾಲ್ಯತೆ, ಸಹೃದಯತೆಗಳನ್ನು ಅನ್ಯಭಾಷಿಕರು ದುರುಪಯೋಗ ಪಡಿಸಿಕೊಳ್ಳು ತ್ತಿದ್ದಾರೆ ಎಂದು ಟೀಕಿಸಿದರು.
ಚಿಂತನ, ಮಂಥನ, ಅಭಿವ್ಯಕ್ತಿ, ವಾಚನಗಳಿಗೆ ಮಾತೃಭಾಷೆಯೇ ಅತ್ಯುತ್ತಮ ಮಾಧ್ಯಮವಾಗಿದ್ದು, ಕನ್ನಡಪ್ರೀತಿ ಮಾತ್ರ ಕನ್ನಡವನ್ನು ಚಿರಂತನವಾಗಿ ಉಳಿಸುತ್ತದೆ. ಏಕೀಕರಣದಿಂದ ಕನ್ನಡನಾಡು ಒಂದಾದರೂ ಕನ್ನಡಿಗರ ಮನಸ್ಸುಗಳು ಒಂದಾಗಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ ಎಂದು ಡಾ.ನೇತ್ರಾವತಿಗೌಡ ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಂದ ನಾಡಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಕುಬೇರನಾಯ್ಕ, ರಮ್ಯಾ, ಅನಿಲ್, ಮರ್ಸಿವಿಕ್ಟೋರಿಯಾ, ಎ.ಸಿ. ಚೂಡಲಿಂಗಯ್ಯ, ಧರಣೇಶ್, ಭೋಜರಾಜ್, ಕೃಷ್ಣಯ್ಯ ಪಾಲ್ಗೊಂಡಿದ್ದರು. ಕನ್ನಡ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪ್ರೊ.ವಾಣಿ ನಿರೂಪಿಸಿದರು. ದೈಹಿಕಶಿಕ್ಷಣ ನಿರ್ದೇಶಕಿ ರತ್ನಮ್ಮ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

